Headlines

Chanakya Niti: ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಮುಖ್ಯವಾಗಿ ಈ ವಿಷಯಗಳನ್ನು ಗಮನಿಸಬೇಕು ಎನ್ನುತ್ತಾರೆ ಚಾಣಕ್ಯ

Chanakya Niti: ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಮುಖ್ಯವಾಗಿ ಈ ವಿಷಯಗಳನ್ನು ಗಮನಿಸಬೇಕು ಎನ್ನುತ್ತಾರೆ ಚಾಣಕ್ಯ


ಸುಂದರ ಸುಖಿ ದಾಂಪತ್ಯ ಜೀವನ, ಒಂದೊಳ್ಳೆ ಸಂಗಾತಿಯನ್ನು (ಜೀವನ ಸಂಗಾತಿ) ಹೊಂದುವುದು ಪ್ರತಿಯೊಬ್ಬರ ಕನಸು. ಆದರೆ ಈ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಹೌದು ನೂರು ಕಾಲ ಸುಖವಾಗಿ ಸಂಸಾರ ಮಾಡಬೇಕೆಂದು ದಾಂಪತ್ಯ ಜೀವನಕ್ಕೆ ಖುಷಿಯಾಗಿ ಕಾಲಿಟ್ಟವರು ಒಂದಷ್ಟು ಕಾರಣಗಳಿಂದ ಬೇರೆಯಾಗುತ್ತಾರೆ. ಹೀಗಾಗಬಾರದೆಂದರೆ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಉತ್ತಮ ಜೀವನ ಸಂಗಾತಿ ಜೊತೆಗಿದ್ದರೆ ಮಾತ್ರ ದಾಂಪತ್ಯ ಜೀವನ ಸುಂದರ ಇರುತ್ತದೆ. ಆಚಾರ್ಯ ಚಾಣಕ್ಯರು ಸಹ ಸಂಗಾತಿಯನ್ನು ಆಯ್ಕೆ ಮಾಡುವಾಗ ಬರೀ ಅಂದ ಚೆಂದವನ್ನು ನೋಡುತ್ತಾರೆ, ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕು ಎಂದು ಹೇಳಿದ್ದಾರೆ. ಹೀಗಿರುವಾಗ ನೀವು ಸಹಸಂಗತಿಯನ್ನು ಆಯ್ಕೆ ಮಾಡುವ ಮೊದಲು ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ.

ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು:

ಬಾಹ್ಯ ಸೌಂದರ್ಯಕ್ಕಿಂತ ಗುಣಗಳ ಮೇಲೆ ಗಮನ ಹರಿಸಿ: ಅನೇಕ ಜನರು ಕೇವಲ ಬಾಹ್ಯ ಸೌಂದರ್ಯವನ್ನು ನೋಡಿ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಕೇವಲ ಸೌಂದರ್ಯವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರೆ ದಾಂಪತ್ಯ ಜೀವನ ಯಶಸ್ವಿಯಾಗುವುದಿಲ್ಲ. ಸೌಂದರ್ಯದ ಹೊರತಾಗಿ ಗುಣ ನಡತೆಯನ್ನು ಸಹ ಪರಿಗಣಿಸಬೇಕು.

ಕುಟುಂಬದ ಮೌಲ್ಯ: ಮದುವೆಗೂ ಮುನ್ನ ನೀವು ಆಯ್ಕೆ ಮಾಡುವ ಸಂಗಾತಿ ಕುಟುಂಬಕ್ಕೆ ಎಷ್ಟು ಮೌಲ್ಯವಿದೆ ಎಂಬುದನ್ನು ತಿಳಿದುಕೊಳ್ಳುವುದು ಸಹ. ಹೌದು ಕುಟುಂಬದ ಸದಸ್ಯರಿಗೆ ಎಷ್ಟು ಪ್ರಾಮುಖ್ಯತೆ ಇದೆ, ಕುಟುಂಬ ಸದಸ್ಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಹಿರಿಯರಿಗೆ ಗೌರವ ಇದೆಯೇ ಇತ್ಯಾದಿ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಇದನ್ನೂ ಓದಿ

ತಾಳ್ಮೆ ಇದೆಯೇ ಪರೀಕ್ಷಿಸಿ: ತಾಳ್ಮೆ ಇರುವ ವ್ಯಕ್ತಿ ಜೀವನದಲ್ಲಿ ಯಾವುದೇ ಕಠಿಣ ಪರಿಸ್ಥಿತಿಯನ್ನು ಸಹ ಎದುರಿಸಬಲ್ಲ ಮತ್ತು ತಾಳ್ಮೆ ಇರುವವರು ಎಲ್ಲೂ ವಿಚಲಿತರಾಗದೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸುತ್ತಾರೆ ಎಂದು ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ಭವಿಷ್ಯದ ದೃಷ್ಟಿಯಿಂದ ನಿಮ್ಮ ಸಂಗಾತಿಗೆ ತಾಳ್ಮೆ ಇದೆಯೇ ಎಂದು ಪರೀಕ್ಷಿಸಿ

ಉತ್ತಮ ನಡತೆ: ಎಲ್ಲರನ್ನೂ ಗೌರವಿಸುತ್ತಾರೆಯೇ, ಸಂಬಂಧಗಳಿಗೆ ಬೆಲೆ ಕೊಡುತ್ತಾರೆಯೇ ಎಂಬುದನ್ನು ಗಮನಿಸಬೇಕು. ಏಕೆಂದರೆ ಮೌಲ್ಯಗಳ ಕೊರತೆಯ ವ್ಯಕ್ತಿಯನ್ನು ದುರಹಂಕಾರಿಯನ್ನಾಗಿ ಮಾಡುತ್ತಾರೆ ಮತ್ತು ಅವರು ತಮ್ಮ ಸಂಗಾತಿಯನ್ನು ಸಹ ಗೌರವಿಸಲಾರರು ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಮಹಿಳೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಮೂರು ತಪ್ಪುಗಳನ್ನು ಯಾವಾಗಲೂ ಮಾಡಬಾರದಂತೆ

ಮುಂಗೋಪದ ಬಗ್ಗೆ ಪರೀಕ್ಷಿಸಿ: ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರು ಮುಂಗೋಪವನ್ನು ಪರೀಕ್ಷಿಸಲು ಮರೆಯದಿರಿ. ಆಚಾರ್ಯ ಚಾಣಕ್ಯರ ಪ್ರಕಾರ, ಕೋಪದ ಸ್ವಭಾವದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ದಾಂಪತ್ಯ ಜೀವನವು ತೊಂದರೆಗೊಳಗಾಗುತ್ತದೆ ಮತ್ತು ಇದು ಅತೃಪ್ತಿಗೆ ಕಾರಣವಾಗುತ್ತದೆ. ಯಾವುದೇ ತಾಳ್ಮೆಯಿಂದ ಸಂಸಾರವನ್ನು ನಿಭಾಯಿಸಿಕೊಂಡು ಹೋಗುವಂತಹ ಜೀವನ ಸಂಗಾತಿಯನ್ನು ಆಯ್ಕೆ ಮಾಡಿ.

ದಯಾಳು ಮತ್ತು ಸಹಿಷ್ಣು ಸ್ವಭಾವ: ಆಚಾರ್ಯ ಚಾಣಕ್ಯರ ಪ್ರಕಾರ, ದಯಾಳು ಸ್ವಭಾವದ ಇತರರ ಭಾವನೆಗಳನ್ನು ಪ್ರೀತಿಸುತ್ತಾರೆ ಅದೇ ರೀತಿ ಅವರು ತಮ್ಮ ಭಾವನೆಗಳನ್ನು ಗೌರವಿಸುತ್ತಾರೆ. ಇದಲ್ಲದೆ, ಸಹಿಷ್ಣು ಸ್ವಭಾವದವರು ಜೀವನದ ಏರಿಳಿತಗಳನ್ನು ತಾಳ್ಮೆಯಿಂದ ನಿಭಾಯಿಸುತ್ತಾರೆ. ಇಂತಹ ಗುಣಗಳಿರುವ ಸಂಗಾತಿಯನ್ನೇ ಆಯ್ಕೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *