Chanakya Niti: ಈ ಎರಡು ವೈಯಕ್ತಿಕ ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ತಪ್ಪಿಯೂ ಕೂಡ ಶೇರ್‌ ಮಾಡಬಾರದು

Chanakya Niti: ಈ ಎರಡು ವೈಯಕ್ತಿಕ ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ತಪ್ಪಿಯೂ ಕೂಡ ಶೇರ್‌ ಮಾಡಬಾರದು


ಚಾಣಕ್ಯ ನೀತಿ: ಈ ಎರಡು ವೈಯಕ್ತಿಕ ವಿಚಾರಗಳನ್ನು ಸಹೋದ್ಯೋಗಿಗಳೊಂದಿಗೆ ತಪ್ಪಿಯೂ ಕೂಡ ಶೇರ್ ಮಾಡಬಾರದು

ವೃತ್ತಿ ಜೀವನದಲ್ಲಿ (ವೃತ್ತಿ) ಯಶಸ್ಸನ್ನು ಸಾಧಿಸಬೇಕು, ಉನ್ನತ ಸ್ಥಾನವನ್ನು ಪಡೆಯಬೇಕು ಎಂಬ ಬಯಕೆ, ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಅದಕ್ಕಾಗಿ ಕಠಿಣ ಪರಿಶ್ರಮವನ್ನೂ ಪಡುತ್ತಾರೆ. ಆದರೆ ಎಷ್ಟೋ ಶ್ರಮ ವಹಿಸಿ ಕೆಲಸ ಮಾಡಿದರೂ ವೃತ್ತಿ ಜೀವನದಲ್ಲಿ ಅಂದುಕೊಂಡ ಯಶಸ್ಸು ಸಿಗುವುದಿಲ್ಲ. ಇದಕ್ಕೆ ಕಾರಣ ನಮ್ಮ ತಪ್ಪುಗಳೇ ಕಾರಣ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹೌದು ಆಚಾರ್ಯ ಚಾಣಕ್ಯರ ಪ್ರಕಾರ ನಾವು ನಮ್ಮ ಕೆಲವು ಸೀಕ್ರೆಟ್‌ಗಳ ವಿಚಾರಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದರಿಂದಲೇ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಬಾಸ್ ಮತ್ತು ಸಹದ್ಯೋಗಿ ನಿಮ್ಮೊಂದಿಗೆ ಈ ಎರಡು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಅವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಈ ವಿಚಾರಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಡಿ:

ನಿಮ್ಮ ದೌರ್ಬಲ್ಯ ಅಥವಾ ಭಯ: ಚಾಣಕ್ಯ ನೀತಿಯ ಪ್ರಕಾರ, ಒಬ್ಬ ಬಾಹ್ಯ ತನ್ನ ದೌರ್ಬಲ್ಯವನ್ನು ಯಾರಿಗೂ ತೋರಿಸಬಾರದು. ಕಚೇರಿಯಲ್ಲಿ ಸಹೋದ್ಯೋಗಿಗಳ ನಡುವಿನ ಸಂಬಂಧವು ತುಂಬಾ ಉತ್ತಮವಾಗಿದ್ದರೂ, ನಿಮ್ಮ ದೌರ್ಬಲ್ಯಗಳ ಬಗ್ಗೆ ಯಾರ ಬಳಿಯೂ ಶೇರ್ ಮಾಡಬಾರದು. ಏಕೆಂದರೆ ಎಲ್ಲರೂ ವೃತ್ತಿಜೀವನದ ಓಟದಲ್ಲಿ ಮುಂದುವರಿಯಲು ಬಯಸುತ್ತಾರೆ. ಹಾಗಿರುವಾಗ ನಿಮ್ಮ ದೌರ್ಬಲ್ಯಗಳ ಬಗ್ಗೆ ಹೇಳಿದರೆ ಹೆಚ್ಚಿನವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ನ್ಯೂನತೆಗಳನ್ನು ರಹಸ್ಯವಾಗಿಡಿ ಮತ್ತು ಧೈರ್ಯದಿಂದ ನಿಮ್ಮ ಕೆಲಸವನ್ನು ಮಾಡುತ್ತಾ ಮುಂದೆ ಸಾಗಿ.

ಇದನ್ನೂ ಓದಿ: ಮದುವೆಯ ನಂತರವೂ ಪುರುಷರು ಪರ ಸ್ತ್ರೀಯರತ್ತ ಆಕರ್ಷಿತರಾಗುವುದೇಕೆ?

ನಿಮ್ಮ ಮುಂದಿನ ಯೋಜನೆ ಅಥವಾ ಭವಿಷ್ಯದ ಯೋಜನೆ: ಯಾವುದೇ ಕೆಲಸ ಪೂರ್ಣಗೊಳ್ಳುವವರೆಗೆ ನೀವು ಅದನ್ನು ಹಂಚಿಕೊಳ್ಳಬಾರದು. ಹೊಸ ಉದ್ಯೋಗವನ್ನು ಹುಡುಕುವುದು ಅಥವಾ ನಿರ್ದಿಷ್ಟ ಯೋಜನೆಯನ್ನು ಯೋಜಿಸುವುದು ನಿಮ್ಮ ಮುಂದಿನ ಯೋಜನೆಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಡಿ. ಏಕೆಂದರೆ ಕೆಲವು ಸಹದ್ಯೋಗಿಗಳು ಈ ವಿಚಾರದಿಂದಾಗಿ ನಿಮ್ಮ ಮೇಲೆ ಅಸೂಯೆ ಪಡುತ್ತಾರೆ ನಿಮ್ಮ ಯೋಜನೆಗಳನ್ನು ಹಾಳುಮಾಡಲು ಪ್ರಯತ್ನಿಸಬಹುದು. ಇದರಿಂದ ನಿಮ್ಮ ವೃತ್ತಿ ಜೀವನಕ್ಕೆ ಕುತ್ತು ಬರಬಹುದು. ಆದ್ದರಿಂದ ಯಾವಾಗಲೂ ನಿಮ್ಮ ಯೋಜನೆಗಳನ್ನು ರಹಸ್ಯವಾಗಿ ಇಟ್ಟುಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *