ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿ ನಾನಾ ರೀತಿಯ ಎಲಿಮಿನೇಷನ್ ನಡೆದಿದೆ. ಕೆಲವು ಸ್ಪರ್ಧಿಗಳಿಗೆ ಹಂತ ಒಂದು ಆದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಇರಲೇಬಾರದು ಎಂದು ಅನಿಸಿ ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಮನೆಯೊಳಗೆ ಬರೋಕೆ ಸುಲಭದಲ್ಲಿ ಬರಬಹುದು. ಆದರೆ, ಹೊರ ಹೋಗೋದು ಜನರು ಕಡಿಮೆ ವೋಟ್ ಮಾಡಿದ ವಾರವರೆ. ಆದಾಗ್ಯೂ ಹಾಸ್ಯನಟ ಚಂದ್ರಪ್ರಭ ಅವರು ದೊಡ್ಮನೆಯಿಂದ ಹೊರ ಹೋಗೋದಾಗಿ ಹೇಳಿ ಹಠ ಹಿಡಿದಿದ್ದರು. ಇದಕ್ಕೆ ಒಂದು ಕಾರಣ ಆಯಿತಾ ಎಂಬ ಪ್ರಶ್ನೆ ಮೂಡಿದೆ.
ಕಾವ್ಯ ಶೈವ ಹಾಗೂ ಗಿಲ್ಲಿ ನಟನ ಗೆಳೆತನದ ಬಗ್ಗೆ ಈ ಮೊದಲು ಚಂದ್ರಪ್ರಭ ಕೆಟ್ಟದಾಗಿ ಮಾತನಾಡಿದ್ದರು. ಮಾತು ಮಿತಿಮೀರಿತ್ತು. ಈ ಪದಗಳು ಕಾವ್ಯಕ್ಕೆ ಬೇಸರ ಮೂಡಿಸಿದವು. ಇದು ಸರಿ ಅಲ್ಲ ಎಂದು ಕಾವ್ಯಾ ಅವರು ಚಂದ್ರಪ್ರಭಗೆ ಹೇಳಿದರೂ ಅದನ್ನೂ ಕೇಳಲಿಲ್ಲ. ಶನಿವಾರ ಈ ವಿಚಾರ ಚರ್ಚೆಗೆ ಬಂದಿದೆ. ಸುದೀಪ್ ಇದನ್ನು ಚಂದ್ರಪ್ರಭ ಬಳಿ ಪ್ರಶ್ನೆ ಮಾಡಿದ್ದರು.
‘ಚಂದ್ರಪ್ರಭ ಅವರೇ ಸರಿಯಾಗಿ ಇರಬೇಕು ಎಂದು ನುಡಿಯುವ ನೀವು, ರಿಷಾ ಜೊತೆ ಇದೇ ರೀತಿ ನಡೆದುಕೊಳ್ಳುತ್ತಿದ್ದೀರಲ್ಲ’ ಎಂದು ಪ್ರಶ್ನೆ ಮಾಡಿದರು. ರಿಷಾ ಜೊತೆ ಅವರು ಹೇಗೆ ನಡೆದುಕೊಳ್ಳುತ್ತಿದ್ದಾರೆ ವಿಡಿಯೋ ಕೂಡ ಹಾಕಿದರು. ಈ ವಿಚಾರ ಚಂದ್ರಪ್ರಭಗೆ ಸಾಕಷ್ಟು ಬೇಸರ ಮೂಡಿಸಿತು. ಆ ಬಳಿಕ ಅವರು ತುಂಬಾನೇ ಸೈಲೆಂಟ್ ಆಗಿ ಬಿಟ್ಟರು.
ಭಾನುವಾರದ ಎಪಿಸೋಡ್‌ನಲ್ಲೂ ಚಂದ್ರಪ್ರಭ ಅವರಿಗೆ ಊಸರವಳ್ಳಿ ರೀತಿಯ ಟ್ಯಾಗ್‌ಗಳು ಸಿಕ್ಕವು. ಇದು ಅವರಿಗೆ ಬೇಸರ ಮೂಡಿಸಿದೆ. ಈ ಚಟುವಟಿಕೆ ಮುಖ್ಯದ್ವಾರದಿಂದ ಹೊರ ಹೋಗುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯ ಆಗಲಿಲ್ಲ.
ಇದನ್ನೂ ಓದಿ: ‘ಹೀಗೆ ಆದರೆ ಹೊರ ಹೋಗ್ತೀರಿ’; ಒಂದೇ ಎಪಿಸೋಡ್ ನಲ್ಲಿ ಗಿಲ್ಲಿಗೆ ಎರಡೆರಡು ಬಾರಿ ವಾರ್ನಿಂಗ್ ಕೊಟ್ಟ ಸುದೀಪ್
ಅಂತಿಮವಾಗಿ ಸುಧಿ ಹಾಗೂ ಚಂದ್ರಪ್ರಭ ಅವರು ಪಟ್ಟಿಯಲ್ಲಿದ್ದಾರೆ. ಸುಧಿ ಅವರು ತಮ್ಮ ವಿಶೇಷ ಅಧಿಕಾರ ಸೇ ಆದರೆ, ಚಂದ್ರಪ್ರಭ ಅವರು ಔಟ್ ಆದವ್ರು. ಅವರು ಈ ವಾರ ಉತ್ತಮ ಕೂಡ ಪಡೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ರಂದು ಪ್ರಕಟಿಸಲಾಗಿದೆ – 7:29 am, ಸೋಮ, 10 ನವೆಂಬರ್ 25