ಬಿಡುವಿಲ್ಲದ ಜೀವನಶೈಲಿಯಿಂದಾಗಿ ರಾತ್ರಿಯೇ ಚಪಾತಿ ಹಿಟ್ಟು ಕಲಸಿ ಫ್ರಿಡ್ಜ್‌ನಲ್ಲಿಡುವುದು ಸಾಮಾನ್ಯ. ರಾತ್ರಿ ಇಟ್ಟ ಹಿಟ್ಟಿನಿಂದ ಮಾಡಿದ ಚಪಾತಿಯೂ ಹೆಚ್ಚು ಸಮಯ ಮೃದು ಮತ್ತು ಫ್ಲಫಿಯಾಗಿರುತ್ತದೆ.

ಇಂದು ಯಾರ ಬಳಿಯಲ್ಲಿಯೂ ಸಮಯ ಇಲ್ಲ. ಹಾಗಾಗಿ ಬಿಡುವಿನ ಸಮಯದಲ್ಲಿಯೇ ಅಡುಗೆಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಕೆಲವರು ಬೆಳಗ್ಗೆ ಬದಲಾಗಿ ರಾತ್ರಿಯೇ ಚಪಾತಿಗೆ ಹಿಟ್ಟು ಕಲಿಸಿ ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡುತ್ತಾರೆ. ಆದ್ರೆ ಈ ರೀತಿ ಮಾಡೋದರಿಂದ ಚಪಾತಿ ಬಿರುಸು ಆಗಿರುತ್ತದೆ.

ರಾತ್ರಿ ಹಿಟ್ಟು ಕಲಿಸುವಾಗ ಕೆಲವೊಂದು ಪದಾರ್ಥಗಳನ್ನು ಸೇರ್ಪಡೆ ಮಾಡಿದ್ರೆ ಮಾಡಿದ ಚಪಾತಿ ತುಂಬಾ ಸಮಯದವರೆಗೆ ಸಾಫ್ಟ್ ಆಗಿರುತ್ತದೆ. ಇದರಿಂದ ಮಧ್ಯಾಹ್ನದ ಲಂಚ್ ಬಾಕ್ಸ್ ಮಾಡುವ ತಾಪತ್ರಯ ತಪ್ಪಲಿದೆ. ಮಕ್ಕಳಿಂದ ಹಿಡಿದು ವೃದ್ಧವರೆಗೂ ಈ ರೀತಿಯಾಗಿ ಮಾಡಿದ ಚಪಾತಿ ಇಷ್ಟವಾಗುತ್ತದೆ.

ಚಪಾತಿ ಹಿಟ್ಟು ಕಲಿಸುವಾಗ ಒಂದು ಕಪ್‌ನಷ್ಟು ಬಿಸಿಯಾದ ಹಾಲನ್ನು ಸೇರಿಸಬೇಕು. ಇದು ಚಪಾತಿಯನ್ನು ಮೃದುವಾಗಿರಿಸುವಲ್ಲಿ ಸಹಾಯ ಮಾಡುತ್ತದೆ. ರಾತ್ರಿ ಹಿಟ್ಟು ಕಲಿಸಿಟ್ರೂ ಬೆಳಗ್ಗೆ ಚಪಾತಿ ಮಾಡಿದ್ರು ಅದು ಸಾಫ್ಟ್ ಆಂಡ್ ಫ್ಲಫಿಯಾಗಿರುತ್ತದೆ. ಇದರಿಂದ ಸಮಯವೂ ಉಳಿತಾಯ ಆಗುತ್ತದೆ.

ಕಲಿಸಿದ ಹಿಟ್ಟನ್ನು ಒಣ ಪಾತ್ರೆಯಲ್ಲಿಟ್ಟು ಅದನ್ನು ಕಾಟನ್ ಬಟ್ಟೆಯಲ್ಲಿ ಮುಚ್ಚಿಡಬೇಕು. ಈ ರೀತಿ ಮಾಡೋದರಿಂದಲೂ ಚಪಾತಿ ಮೃದುವಾಗಿರುತ್ತದೆ. ಕೆಲವರು ಚಪಾತಿ ಹಿಟ್ಟು ಕಲಿಸುವಾಗ ಚಿಟಿಕೆಯಷ್ಟು ಉಪ್ಪನ್ನು ಸೇರಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ಕೋಳಿ ಮಾಂಸ ತೊಳೆಯುವಾಗ ನಿಂಬೆ, ಉಪ್ಪು ಏಕೆ ಸೇರಿಸ್ತಾರೆ?, ಬಹುಶಃ ತಿನ್ನೋರಿಗೂ ಉತ್ತರ ಗೊತ್ತಿರಲಿಕ್ಕಿಲ್ಲ

ಇನ್ನು ಕೆಲವರು ಚಪಾತಿ ಹಿಟ್ಟನ್ನು ಕಲಿಸುವ ಅಡುಗೆಎಣ್ಣೆ ಮತ್ತು ತುಪ್ಪ ಬಳಕೆ ಮಾಡುತ್ತಾರೆ. ಚಪಾತಿ ಮಾಡುವ ಕನಿಷ್ಠ 30 ನಿಮಿಷ ಮೊದಲೇ ಹಿಟ್ಟು ಕಲಿಸಿಟ್ಟುಕೊಳ್ಳುವುದು ಉತ್ತಮ ಎಂದು ಹೇಳುತ್ತಿರುತ್ತಾರೆ. ಹಿಟ್ಟು ಹೆಚ್ಚು ನೆನೆದಷ್ಟು ಚಪಾತಿ ರುಚಿ ಮತ್ತು ಮೃದುವಾಗುತ್ತದೆ.

ಇದನ್ನೂ ಓದಿ: Kitchen Hacks: ಸಾರು ರುಚಿಯಾಗಿ ಬರ್ತಿಲ್ವಾ? ಈ ತಪ್ಪು ಮಾಡ್ಬೇಡಿ

Source link
ರಾತ್ರಿ ಕಲಿಸಿದ ಹಿಟ್ಟಿನಿಂದ ಮಾಡಿದ ಚಪಾತಿ ಸಾಫ್ಟ್ ಆಗಿರಬೇಕಾದ್ರೆ ಈ ವಸ್ತುಗಳನ್ನು ಸೇರಿಸಿ