Headlines

ChatGPT group Chat ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ? | Chatgpt Introduce Whatsapp Like Group Chat Feature With Advance Ai Support

ChatGPT group Chat ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ? | Chatgpt Introduce Whatsapp Like Group Chat Feature With Advance Ai Support


15

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪರಿಹಾರ

Image Credit : stockPhoto

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪರಿಹಾರ

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಇದೀಗ ಎಲ್ಲೂ ಕ್ಷೇತ್ರದಲ್ಲಿ ಬಳಕ ಮಾತ್ರವಲ್ಲ, ಬಹುತೇಕರು ಅವಲಂಬಿತರಾಗಿದ್ದಾರೆ. ಇತ್ತ ಎಐ ತಂತ್ರಜ್ಞಾನದಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇದೆ. ಇದೀಗ ಓಪನ್ ಎಐನ ಚಾಟ್‌ಜಿಪಿಟಿ ಹೊಸ ಕ್ರಾಂತಿ ಮಾಡುತ್ತಿದೆ. ಅಸೈನ್ಮೆಂಟ್, ಪ್ರಾಜೆಕ್ಟ್ ಸೇರಿದಂತೆ ಯಾವುದೇ ಕೆಲಸ, ಮಾಹಿತಿ ಬೇಕಿದ್ದರೂ ಇದೀಗ ಬಹುತೇಕರೂ ಎಐ ಇಂಟಿಗ್ರೇಟೆಡ್ ಟೂಲ್ ಬಳಕೆ ಮಾಡುತ್ತಾರೆ. ಈ ಪೈಕಿ ಚಾಟ್‌ಜಿಪಿಟಿ ಬಹುತೇಕರ ಆಯ್ಕೆ. ಇದೀಗ ಚಾಟ್‌ಜಿಪಿಟಿ ಹೊಸ ಗ್ರೂಪ್ ಚಾಟ್ ಫೀಚರ್ ಲಾಂಚ್ ಮಾಡಿದೆ.

25

ಸುಲಭ ಗ್ರೂಪ್ ಚಾಟಿಂಗ್ ಫೀಚರ್

Image Credit : X

ಸುಲಭ ಗ್ರೂಪ್ ಚಾಟಿಂಗ್ ಫೀಚರ್

ಪ್ರಾಜೆಕ್ಟ್ ಅಥವಾ ಇನ್ಯಾವುದೇ ಕೆಲಸಗಳನ್ನು ಜೊತೆಯಾಗಿ ಮಾಡಲು ಗ್ರೂಪ್ ಚಾಟ್ ನೆರವಾಗಲಿದೆ. ಒಂದೇ ಪ್ರಾಜೆಕ್ಟ್‌ನ್ನು ಬೇರೆ ಬೇರೆ ಜಾಗದಲ್ಲಿದ್ದುಕೊಂಡು ಬೇರೆ ಬೇರ ವ್ಯಕ್ತಿಗಳು ಮಾತುಕತೆ, ಚರ್ಚೆ ನಡೆಸಿ ಮಾಡಲು ಅನುಕೂಲ ಮಾಡಿಕೊಡುತ್ತದೆ. ವ್ಯಾಟ್ಸಾಪ್ ಗ್ರೂಪ್ ರೀತಿಯಲ್ಲೇ ಈ ಚಾಟ್‌ಜಿಪಿಟಿ ಗ್ರೂಪ್ ಚಾಟ್‌ನಲ್ಲಿ ಚರ್ಚೆ, ಸಂದೇಶ ರವಾನಿಸಬಹುದು, ಚಾಟ್ ಮಾಡಬಹುದು.

35

ಎಲ್ಲಾ ಚಾಟ್‌ಜಿಪಿಟಿ ಬಳಕೆದಾರರಿಗೆ ಲಭ್ಯ

Image Credit : Getty

ಎಲ್ಲಾ ಚಾಟ್‌ಜಿಪಿಟಿ ಬಳಕೆದಾರರಿಗೆ ಲಭ್ಯ

ಚಾಟ್‌ಜಿಪಿಟಿ ಗ್ರೂಪ್ ಚಾಟ್ ಫೀಚರ್, ಉಚಿತ ಸಬ್‌ಸ್ಕ್ರೈಬರ್ ಹೊಂದಿದವರಿಗೂ ಲಭ್ಯವಿದೆ. ದೇಶ ವಿದೇಶಗಳಲ್ಲಿ ಈ ಸೌಲಭ್ಯ ನೀಡಲಾಗಿದೆ. ಪ್ಲಾನ್ ಮಾಡಲು, ಚರ್ಚಿಸಲು, ಕೆಲಸ ಮಾಡಲು, ಅಸೈನ್ಮೆಂಟ್ ಮಾಡಲು ಸೇರಿದಂತೆ ಗ್ರೂಪ್ ಚಾಟ್‌ಗೆ ಚಾಟ್‌ಜಿಪಿಟಿ ನೆರವು ನೀಡುತ್ತದೆ. ಇದನ್ನು ಬಳಸುವುದು ಹೇಗೆ?

45

ಚಾಟ್‌ಜಿಪಿಟಿ ಗ್ರೂಪ್ ಚಾಟ್ ಬಳಸುವುದು ಹೇಗೆ?

Image Credit : Getty

ಚಾಟ್‌ಜಿಪಿಟಿ ಗ್ರೂಪ್ ಚಾಟ್ ಬಳಸುವುದು ಹೇಗೆ?

ಬಳಕೆದಾರರು ತಮ್ಮದೇ ಆದ ಗ್ರೂಪ್ ಚಾಟ್ ಕ್ರಿಯೇಟ್ ಮಾಡಬಹುದು. ಯಾವುದೇ ಹೊಸ ಚಾಟ್ ಅಥವಾ ಈಗಾಗಲೇ ಮಾಡಿರುವ ಚಾಟ್ ಬಳಿಕ ಅಥವಾ ಜನರ ಐಕಾನ್ ಇರುವಲ್ಲಿ ಟ್ಯಾಪ್ ಮಾಡಬೇಕು. ಬಳಿಕ ಗರಿಷ್ಠ 20 ಮಂದಿಯನ್ನು ಗ್ರೂಪ್ ಚಾಟ್‌ಗೆ ಇನ್‌ವೈಟ್ ಮಾಡಬಹುದು. ಒಂದು ಬಾರಿ ಇನ್‌ವೈಟ್ ಸೆಂಡ್ ಮಾಡಿದಾಗ ಎಐ ಚಾಟ್‌ಜಿಪಿಟಿ ಗ್ರೂಪ್ ರಚಿಸುತ್ತದೆ.

ಚಾಟ್‌ಜಿಪಿಟಿ ಗ್ರೂಪ್ ಚಾಟ್ ಬಳಸುವುದು ಹೇಗೆ?

55

ಆಮಂತ್ರಿತರು ಸೇರುತ್ತಿದ್ದಂತೆ ಗ್ರೂಪ್ ಸಕ್ರಿಯ

Image Credit : Asianet News

ಆಮಂತ್ರಿತರು ಸೇರುತ್ತಿದ್ದಂತೆ ಗ್ರೂಪ್ ಸಕ್ರಿಯ

ನೀವು ಇನ್‌ವೈಟ್ ಮಾಡಿದವರು ಗ್ರೂಪ್ ಸೇರುತ್ತಿದ್ದಂತೆ ಗ್ರೂಪ್ ಆ್ಯಕ್ಟೀವ್ ಆಗಲಿದೆ. ಚಾಟ್ ಆರಂಭಗೊಳ್ಳಲಿದೆ. ಸಂವಾದಗಳು, ಚರ್ಚೆಗಳು, ಮಾಹಿತಿ ರವಾನೆ ಸೇರಿದಂತೆ ವ್ಯಾಟ್ಸಾಪ್ ಗ್ರೂಪ್ ರೀತಿಯಲ್ಲೇ ಕೆಲಸ ಮಾಡುತ್ತದೆ. ವಿಶೇಷ ಅಂದರೆ ಗ್ರೂಪ್ ಸದಸ್ಯರು ಏನಾದರು ಪ್ರಶ್ನೆ, ಡೌಟ್ ಕೇಳಿದರೆ ನೀವು ಉತ್ತರ ನೀಡಬಹುದು, ಅಥವಾ ಚಾಟ್‌ಜಿಪಿಟಿ ಬಳಿ ಉತ್ತರ ನೀಡಲು ಸೂಚಿಸಬಹುದು. ವಿಶೇಷ ಅಂದರೆ ಚಾಟ್‌ಜಿಪಿಟಿ ಇಮೋಜಿ ಅಥವಾ ಪರ್ಸನಲೈಜ್ ಇಮೋಜಿಗಳ ಪ್ರತಿಕ್ರಿಯೆ ನೀಡುತ್ತದೆ.

ಆಮಂತ್ರಿತರು ಸೇರುತ್ತಿದ್ದಂತೆ ಗ್ರೂಪ್ ಸಕ್ರಿಯ

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.



Source link

Leave a Reply

Your email address will not be published. Required fields are marked *