ಚೆನ್ನೈ, ನವೆಂಬರ್ 28: ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಂಬಳ, ಬೋನಸ್ ಜೊತೆಗೆ ಇನ್ನೂ ಕೆಲವು ಪ್ರೋತ್ಸಾಹಕಗಳನ್ನು ನೀಡುತ್ತವೆ. ಕೆಲವರಿಗೆ ಕಾರುಗಳ ಗಿಫ್ಟ್ ಸಿಗುತ್ತದೆ, ಕೆಲವರಿಗೆ ಬೈಕುಗಳು ಸಿಗುತ್ತವೆ, ಕೆಲವರಿಗೆ ಚಿನ್ನದ ನಾಣ್ಯಗಳು ಉಡುಗೊರೆಯಾಗಿ ಸಿಗುತ್ತವೆ. ಚೆನ್ನೈ ಮೂಲದ ಕೆಸಗ್ರ್ಯಾಂಡ್ (Casagrand) ಎಂಬ ರಿಯಲ್ ಎಸ್ಟೇಟ್ ಡೆವಲಪರ್ ಕಂಪನಿಯು ಉದ್ಯೋಗಿಗಳಿಗೆ ಫಾರೀನ್ ಟ್ರಿಪ್ ಕಳುಹಿಸುತ್ತಿದೆ. ಹತ್ತೋ ಇಪ್ಪತ್ತೋ ಅಲ್ಲ, ಬರೋಬ್ಬರಿ 1,00 ಉದ್ಯೋಗಿಗಳನ್ನು ಒಂದು ವಾರ ಕಾಲ ಲಂಡನ್‌ಗೆ ಪ್ರವಾಸಕ್ಕೆ ಕಳುಹಿಸುತ್ತಿದೆ ಕಂಪನಿ.
ಕೆಸಗ್ರ್ಯಾಂಡ್ ಕಂಪನಿಯ ವಾರ್ಷಿಕ ಆದಾಯ ಹಂಚಿಕೆಯ ಭಾಗವಾಗಿ ಪ್ರತೀ ವರ್ಷವೂ ಉದ್ಯೋಗಿಗಳಿಗೆ ಈ ರೀತಿ ಉಡುಗೊರೆಗಳನ್ನು ನೀಡಿ ಪ್ರೋತ್ಸಾಹಿಸಿ. ಫಾರೀನ್ ಟ್ರಿಪ್ ಗೆ ಕಳುಹಿಸುವುದೂ ಇದರ ಒಂದು ಭಾಗ. ಇಲ್ಲಿಯವರೆಗೆ ಈ ಕಂಪನಿಯ 6,000 ಹೆಚ್ಚಿನ ಉದ್ಯೋಗಿಗಳು ಸಿಂಗಾಪುರ್, ಥಾಯ್ಲೆಂಡ್, ಮಲೇಷ್ಯಾ, ದುಬೈ, ಸ್ಪೇನ್ ಮೊದಲಾದ ದೇಶಗಳಿಗೆ ಪ್ರವಾಸ ಹೋಗಿ ಬಂದಿದ್ದಾರಂತೆ.
ಇದನ್ನೂ ಓದಿ: 4 ವರ್ಷದಿಂದ ನಂಬಿಸಿ, ಗೊತ್ತೇ ಆಗದಂತೆ 35 ಕೋಟಿ ರೂ ಎಗರಿಸಿಯೇ ಬಿಟ್ಟರು ಷೇರುಲೋಕದ ಖದೀಮರು
ಕಂಪನಿಯ ಏಳ್ಗೆಗಾಗಿ ಶ್ರಮಿಸಿದ ಕೆಲಸಗಾರರನ್ನು ಪ್ರತೀ ವರ್ಷ ಅವರಿಗೆ ಇಷ್ಟವಾಗುವ ರೀತಿಯಲ್ಲಿ ಸಂತೋಷಪಡಿಸುವುದು ಕೆಸಗ್ರ್ಯಾಂಡ್ನ ಗುರಿ ಎಂದು ಈ ಕಂಪನಿಯ ಸಂಸ್ಥಾಪಕರಾದ ಅರುಣ್ ಎಂಎನ್ ಹೇಳುತ್ತಾರೆ. ಈ ವರ್ಷ 1,000 ಉದ್ಯೋಗಿಗಳಿಗೆ ಸಂಪೂರ್ಣ ಲಂಡನ್ ಟ್ರಿಪ್ ನ ಖರ್ಚುವೆಚ್ಚವೆಲ್ಲಾ ಕಂಪನಿಯದ್ದೇ ಆಗಿದೆ.
ಈ ಟ್ರಿಪ್ ನಡೆಯಲು ಒಂದು ತಂಡವೇ ತಿಂಗಳುಕಾಲ ಪ್ಲಾನಿಂಗ್ ಮಾಡಿದೆ. ಪ್ರಮುಖ ಏರ್ಲೈನ್ ಕಂಪನಿಗಳು, ಹೋಟೆಲ್ ಪಾರ್ಟ್ನರ್ಶಿಪ್ ಮಾಡಿಕೊಂಡಿದೆ.
ಭಾರತ ಹಾಗೂ ದುಬೈನಲ್ಲಿ ಕೆಲಸ ಮಾಡುತ್ತಿರುವ ಕಂಪನಿಯ ಉದ್ಯೋಗಿಗಳು ಈ ಟ್ರಿಪ್‌ಗೆ ಹೋಗುತ್ತಿದ್ದಾರೆ. ಅನೇಕರಿಗೆ ಇದು ಮೊದಲ ಫಾರೀನ್ ಟ್ರಿಪ್ ಅಂತೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ 86,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಷೇರು ಮಾರುಕಟ್ಟೆಯ ಪಾಸಿಟಿವ್ ಓಟಕ್ಕೆ ಕಾರಣಗಳು
ಕೆಸಗ್ರ್ಯಾಂಡ್ 2003ರಲ್ಲಿ ಸ್ಥಾಪನೆಯಾದ ರಿಯಲ್ ಎಸ್ಟೇಟ್ ಕಂಪನಿ. ಚೆನ್ನೈನಲ್ಲಿ ಮುಖ್ಯಕಚೇರಿ ಹೊಂದಿರುವ ಇದು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಅಪಾರ್ಟ್ಮೆಂಟ್, ಪ್ಲಾಟ್, ವಿಲ್ಲಾಗಳನ್ನು ನಿರ್ಮಿಸಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ