Headlines

ಸೊಳ್ಳೆ ಹತ್ತಿಕ್ಕಲು ಚರಂಡಿಗೆ ಪರದೆ ಹಾಕಿದ ನಗರ ಪಾಲಿಕೆ: ಮೇಯರ್ ಟ್ರೋಲ್, ವಿಡಿಯೋ ವೈರಲ್

ಸೊಳ್ಳೆ ಹತ್ತಿಕ್ಕಲು ಚರಂಡಿಗೆ ಪರದೆ ಹಾಕಿದ ನಗರ ಪಾಲಿಕೆ: ಮೇಯರ್ ಟ್ರೋಲ್, ವಿಡಿಯೋ ವೈರಲ್

ಸೊಳ್ಳೆ ಹತ್ತಿಕ್ಕಲು ಚರಂಡಿಗೆ ಪರದೆ ಹಾಕಿದ ನಗರ ಪಾಲಿಕೆ: ಮೇಯರ್ ಟ್ರೋಲ್, ವಿಡಿಯೋ ವೈರಲ್

ಹೆಚ್ಚುತ್ತಿರುವ ಸೊಳ್ಳೆ ಸಮಸ್ಯೆಯನ್ನು ನಿಯಂತ್ರಿಸಲು, ಮಹಾನಗರ ಪಾಲಿಕೆಯು ಚರಂಡಿ ಮ್ಯಾನ್‌ಹೋಲ್‌ಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸುತ್ತಿದೆ. ಈ ಕ್ರಮವು ವಿಪಕ್ಷ ಎಐಎಡಿಎಂಕೆ ಮತ್ತು ಸಾರ್ವಜನಿಕರಿಂದ ತೀವ್ರ ಟೀಕೆ ಮತ್ತು ಟ್ರೋಲ್‌ಗೆ ಗುರಿಯಾಗಿದೆ.

ಚೆನ್ನೈನ ಮಹಾನಗರ ಪಾಲಿಕೆಯು ಸೊಳ್ಳೆ ಸಮಸ್ಯೆಯನ್ನು ಹತ್ತಿಕ್ಕುವ ಸಲುವಾಗಿ ಮಳೆ ನೀರು ಚರಂಡಿಗೆ ಅಲ್ಲಲ್ಲಿ ಅಳವಡಿಸಿರುವ ಮ್ಯಾನ್‌ಹೋಲ್‌ ರೀತಿಯ ಬಾಕ್ಸ್‌ಗಳಿಗೆ ಸೊಳ್ಳೆ ಪರದೆ ಅಳವಡಿಸುವ ಕೆಲಸಕ್ಕೆ ಮುಂದಾಗಿದೆ.

ಚೆನ್ನೈನ ಮಹಾನಗರ ಪಾಲಿಕೆಯ ಈ ಕೆಲಸಕ್ಕೆ ವಿಪಕ್ಷ ಎಐಎಡಿಎಂಕೆ ಮತ್ತು ಜನರಿಂದ ಭಾರಿ ನಗೆಪಾಟಲಿ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಚೆನ್ನೈ ನಿವಾಸಿಗಳು ಮಹಾನಗರ ಪಾಲಿಕೆಯನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.

ಈ ಕುರಿತು ಎಐಎಡಿಎಂಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಕಾರ್ಮಿಕರು ಚರಂಡಿಗೆ ಪರದೆ ಅಳವಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡು ಡಿಎಂಕೆಯ ಮೇಯರ್‌ ಪ್ರಿಯಾ ರಾಜನ್‌ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಚೆನ್ನೈನಲ್ಲಿ ಸೊಳ್ಳೆ ಹಾವಳಿ ಹೆಚ್ಚುತ್ತಿದ್ದು, ಡಂಘೀ ಪ್ರಕರಣಗಳು ಜಾಸ್ತಿಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದು, ಇದರ ಬೆನ್ನಲ್ಲೇ ಎಐಎಡಿಎಂಕೆ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸರ್ಕಾರವನ್ನು ಭಾರಿ ಮುಜುಗರಕ್ಕೆ ಈಡುಮಾಡಿದೆ.

ಇದನ್ನೂ ಓದಿ: ಒಂದೇ ದಿನದಲ್ಲಿ ₹3.12 ಕೋಟಿ ದಾಖಲೆಯ ತೆರಿಗೆ ಸಂಗ್ರಹಿಸಿದ ಕರ್ನಾಟಕದ ಗ್ರಾಮ ಪಂಚಾಯಿತಿ

ಚೆನ್ನೈಯನ್ನು ಸೊಳ್ಳೆ ಮುಕ್ತ ನಗರವನ್ನಾಗಿ ಮಾಡಲು ಯೋಚಿಸಲಾಗಿದೆ. ಫಾಗಿಂಗ್ ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ಜಿಸಿಸಿ ಮುಖ್ಯ ವಾಹಕ ನಿಯಂತ್ರಣ ಅಧಿಕಾರಿ ಡಾ. ಎಸ್. ಸೆಲ್ವಕುಮಾರ್ ಹೇಳಿದ್ದರು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಝೀ ಕನ್ನಡ ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಿಂದು ದೇವತೆಗಳ ಬಗ್ಗೆ ಅವಹೇಳನಕ್ಕೆ ‘ಹೈ’ ಕಿಡಿ

Source link

Leave a Reply

Your email address will not be published. Required fields are marked *