ಚೇತೇಶ್ವರ ಪೂಜಾರ ಅವರ ಭಾವ ಆತ್ಮಹತ್ಯೆ

ಚೇತೇಶ್ವರ ಪೂಜಾರ ಅವರ ಭಾವ ಆತ್ಮಹತ್ಯೆ


ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಅವರ ಭಾವ ಜೀತ್ ಪಬಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್ 26 ರಂದು ಪಬಾರಿ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿತ್ತು. ಇದೀಗ ನಿಖರವಾಗಿ ಒಂದು ವರ್ಷದ ನಂತರ ಜೀತ್ ಪಬಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜೀತ್ ಪಬಾರಿ ಬುಧವಾರ ರಾಜ್‌ಕೋಟ್‌ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇದೀಗ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.

ಕಾಮೆಂಟ್ರೆ ಮಾಡುವ ಪೂಜಾರ:

ಜೀತ್ ಪಬಾರಿ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಚೇತೇಶ್ವರ ಪೂಜಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯದ ಕಾಮೆಂಟ್ರಿ ಮಾಡುತ್ತಿದ್ದರು. ಜೊತೆಗೆ ಭಾವ ನಿಧನರಾಗಿರುವ ಸುದ್ದಿ ಬಂದ ಬೆನ್ನಲ್ಲೇ ರಾಜ್‌ಕೋಟ್‌ಗೆ ತೆರಳಿದ್ದರು.

ಜೀತ್ ಮೇಲಿತ್ತು ಅತ್ಯಾಚಾರದ ಆರೋಪ:

ನವೆಂಬರ್ 2024 ರಲ್ಲಿ ಜೀತ್ ಪಬಾರಿ ವಿರುದ್ಧ ಅತ್ಯಾಚಾರ ದೂರು ದಾಖಲಿಸಲಾಗಿದೆ. ಹೀಗೆ ದೂರು ದಾಖಲಿಸಿದ್ದು ಅವರು ಮೊದಲು ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಹಿಳೆ. ರಾಜ್‌ಕೋಟ್‌ನ ನಿವಾಸಿಯಾಗಿರುವ ಈ ಮಹಿಳೆಯು ಜೀತ್ ಪಬಾರಿ ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸೆಗಿದ್ದಾರೆ ಎಂದು ಆರೋಪಿಸಿದ್ದರು.

ನಮ್ಮ ನಿಶ್ಚಿತಾರ್ಥ ಆದ ಬಳಿಕ ಜೀತ್ ಬಾರಿ ತನ್ನೊಂದಿಗೆ ಸಾಕಷ್ಟು ಸಂಬಂಧ ಹೊಂದಿದ್ದರು. ನಂತರ ಅವರು ಯಾವುದೇ ಕಾರಣವಿಲ್ಲದೆ ನಿಶ್ಚಿತಾರ್ಥವನ್ನು ಮುರಿದು ಬೇರೆ ಮದುವೆಯಾಗಿದ್ದಾರೆ. ಹೀಗಾಗಿ ನನಗೆ ನ್ಯಾಯ ಬೇಕೆಂದು ಮಹಿಳೆಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಇದನ್ನೂ ಓದಿ: WTC ಅಂಕ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗಿಳಿದ ಟೀಮ್ ಇಂಡಿಯಾ

ಈ ಪ್ರಕರಣ ದಾಖಲಾದ ಬಳಿಕ ಜೀತ್ ಪಬಾರಿ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬಸ್ಥರು ಆಗಿದ್ದರು. ಇದೀಗ ಇದೆ ಎಂಬ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರಾ ತನಿಖೆಯನ್ನು ಮುಂದುವರೆಸಿದ್ದಾರೆ.



Source link

Leave a Reply

Your email address will not be published. Required fields are marked *