ಚಿಕ್ಕಬಳ್ಳಾಪುರದಲ್ಲಿ KSRTC ಬಸ್​​ಗೆ ನುಗ್ಗಿ ಬ್ಯಾಗ್​​ ಕದ್ದು ಎಸ್ಕೇಪ್​: ಕಳುವಾಗಿದ್ದು ಅರ್ಧಕೋಟಿ ಹಣ!

ಚಿಕ್ಕಬಳ್ಳಾಪುರದಲ್ಲಿ KSRTC ಬಸ್​​ಗೆ ನುಗ್ಗಿ ಬ್ಯಾಗ್​​ ಕದ್ದು ಎಸ್ಕೇಪ್​: ಕಳುವಾಗಿದ್ದು ಅರ್ಧಕೋಟಿ ಹಣ!


ಚಿಕ್ಕಬಳ್ಳಾಪುರ, ಡಿಸೆಂಬರ್ 19: ಬೆಂಗಳೂರಲ್ಲಿ ಏಟಿಂಗೆ ಹಣ ಸಾಗಿಸುತ್ತಿದ್ದ ವಾಹನವನ್ನು ಹಾಡಹಗಲೇ ತಡೆದು ಕೋಟ್ಯಾಂತರ ರೂಪಾಯಿ ದರೋಡೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಬಳಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಾಗಿಸುತ್ತಿದ್ದ 55 ಲಕ್ಷ ನಗದನ್ನು ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಕಳುವಾದ ಹಣ ಉದ್ಯಮಿಯೋರ್ವರಿಗೆ ಸೇರಿದ್ದು.

ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ನಿನ್ನೆ ರಾತ್ರಿ ಚಿಕ್ಕಬಳ್ಳಾಪುರದ ಅರೂರು ಬಳಿ ಪ್ರಯಾಣಿಕರ ಊಟಕ್ಕೆಂದು ಕೆಎ 57 ಎಫ್-3911 ಸಂಖ್ಯೆಯ ಬಸ್ ಅನ್ನು ನಿಲ್ಲಿಸಲಾಗಿದೆ. ಊಟಕ್ಕೆಂದು ಕೆಳಗೆ ಇಳಿದು ಬರೋವಷ್ಟರಲ್ಲಿ ಸೀಟ್ ನಲ್ಲಿ ಇಟ್ಟಿದ್ದ ಹಣದ ಬ್ಯಾಗ್ ನಾಪತ್ತೆಯಾಗಿದೆ. ಕಳುವಾದ ಹಣ ಹೈದರಾಬಾದ್ ಮೂಲದ ಉದ್ಯಮಿ ಕೆ.ವೆಂಕಟೇಶ್ವರ ರಾವ್‌ಗೆ ಸೇರಿದ್ದು, ಬೆಂಗಳೂರಿನಲ್ಲಿ ಮನೆ ಮಾರಾಟದಿಂದ ಬಂದಿದ್ದ ನಗದನ್ನು ಅವರು ಕೊಂಡೊಯ್ಯಲು ಉದ್ದೇಶಿಸಿದ್ದಾರೆ.

ಇದನ್ನೂ ಓದಿ:

ಕ್ಷಣಮಾತ್ರದಲ್ಲಿ ಹಣಕದ್ದು ಎಸ್ಕೇಪ್

ಟಾಟಾ ಇಂಡಿಕಾ ಕಾರಿನಲ್ಲಿ ಬಂದಿದ್ದ ವ್ಯಕ್ತಿ ಹಣ ದೋಚಿದ್ದಾನೆ ಎಂದು ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಕಾರಿನಿಂದ ಇಳಿದು ನೇರವಾಗಿ ಬಸ್ ನೊಳಗೆ ನುಗ್ಗಿದ್ದ ವ್ಯಕ್ತಿ ಸೀಟ್ ನಂ.4ರಲ್ಲಿದ್ದ ಬ್ಯಾಗ್ ತೆಗೆದುಕೊಂಡಿದ್ದಾನೆ. ಈ ಬಗ್ಗೆ ಪೆರೇಸಂದ್ರ ಠಾಣೆಗೆ ಉದ್ಯಮಿ ಕೆ.ವೆಂಕಟೇಶ್ವರ ರಾವ್ ದೂರು ನೀಡಿದ್ದು, ಆರೋಪಿಗಾಗಿ ಪತ್ತೆ ಮಾಡಲಾಗುತ್ತಿದೆ. ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿ ಆರೋಪಿ ಪರಾರಿಯಾಗಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:59 am, ಶುಕ್ರ, 19 ಡಿಸೆಂಬರ್ 25



Source link

Leave a Reply

Your email address will not be published. Required fields are marked *