ಹೊಸ ವರ್ಷದ ವೇಳೆಯೂ ಮದ್ಯಕ್ಕಿಲ್ಲ ಡಿಮ್ಯಾಂಡ್​​: ದಾಖಲೆ ಮಟ್ಟದಲ್ಲಿ ಬೇಡಿಕೆ ಕುಸಿತ

ಹೊಸ ವರ್ಷದ ವೇಳೆಯೂ ಮದ್ಯಕ್ಕಿಲ್ಲ ಡಿಮ್ಯಾಂಡ್​​: ದಾಖಲೆ ಮಟ್ಟದಲ್ಲಿ ಬೇಡಿಕೆ ಕುಸಿತ


ಚಿಕ್ಕಬಳ್ಳಾಪುರ, ಡಿಸೆಂಬರ್ 31: ಹೊಸ ವರ್ಷದ ಪಾರ್ಟಿ ಅಂದ್ರೆ ಅಲ್ಲಿ ಮದ್ಯ ಇರಲೇ ಬೇಕು. ಎಣ್ಣೆ ಇಲ್ಲದಿದ್ರೆ ಅದೇಂತಾ ಪಾರ್ಟಿ ಗುರು ಎಂದು ಮೂಗು ಮುರಿಯೋರ ನಡುವೆಯೂ ಮದ್ಯದ ಬೇಡಿಕೆ ಕುಸಿದಿದೆ ಎಂದು ನೀವು ನಂಬಬೇಕಾಗಿದೆ. ನ್ಯೂ ಇಯರ್ ಸಂಭ್ರಮದ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮದ್ಯದ ಬೇಡಿಕೆ ಶೇ.58ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಸಿದರೆ ಇದು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಹೌದು, 2024ರ ಡಿಸೆಂಬರ್ 31ಕ್ಕೆ ಈ ವರ್ಷ ಡಿಸೆಂಬರ್ 31ರ ಮದ್ಯ ಮಾರಾಟದಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದಿದೆ. ಮದ್ಯ ಬೇಡಿಕೆಯಲ್ಲಿ ಶೇ. 58.8ರಷ್ಟು ಕಡಿಮೆಯಾಗಿದ್ದರೆ, ಬಿಯರ್ ಬೇಡಿಕೆ ಶೇ. 11.94% ಇಳಿಕೆಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಬಲವಂತ ಮಾಡಿ ಬಾರ್‌ಗಳಿಗೆ ಮದ್ಯ ಸರಬರಾಜು ಮಾಡಬೇಕಾದ ಸ್ಥಿತಿ ಎದುರಾಗಿದೆ, ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಪರದಾಟ ನಡೆಸುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ; 7 ತಿಂಗಳಾದ್ರೂ ಕಿಕ್ ಕೊಡದ ಎಣ್ಣೆ, ಕಾರಣವೇನು?

ಬೇಡಿಕೆ ಇಳಿಕೆಯಾಗಿರೋದೆಷ್ಟು?

ಕಳೆದ ವರ್ಷ ಡಿಸೆಂಬರ್ 31 ರಂದು 13,191 ಕೇಸ್/ಬಾಕ್ಸ್ ಮದ್ಯ ಮಾರಾಟ ಈ ವರ್ಷ ಡಿಸೆಂಬರ್ 31 ರಂದು 5,516 ಕೇಸ್/ಬಾಕ್ಸ್ ಮಾತ್ರ ಸೇಲ್ ಆಗಿದೆ. ಅಂದರೆ ಶೇ. 58.18ರಷ್ಟು ಕುಸಿತವಾಗಿದೆ. ಇದೇ ದಿನಾಂಕಗಳಲ್ಲಿ ಕಳೆದ ವರ್ಷ 5,384 ಕೇಸ್/ಬಾಕ್ಸ್ ಬಿಯರ್ ಮಾರಾಟ, ಈ ಬಾರಿ 4,741 ಕೇಸ್/ಬಾಕ್ಸ್ ಮಾರಾಟವಾಗಿದೆ. ಆ ಮೂಲಕ ಬೇಡಿಕೆ ಶೇ. 11.94% ಇಳಿಕೆಯಾಗಿದೆ.

ದುಡಿಮೆ ಇಲ್ಲದ ಕಾರಣ ಹಣ ಸಂಪಾದನೆ ಇಲ್ಲ. ಸರಿಯಾಗಿ ಮಳೆ ಆಗದಿರೋದ್ರಿಂದ ಬೆಳೆ ಇಲ್ಲದೆಯೂ ಜನರ ಆದಾಯಕ್ಕೆ ಖೋತಾ ಆಗಿದೆ. ಇದರ ನಡುವೆ ಮದ್ಯದ ಬೆಲೆಯೂ ಏರಿಕೆಯಾಗಿದೆ. ಲಿಕ್ಕರ್‌ಗಳ ಮೇಲೆ 10-15 ರೂಪಾಯಿ ಹೆಚ್ಚಾಗಿರುವ ಕಾರಣ ಕುಡಿಯುವವರಿಗೆ ಸಮಸ್ಯೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೊಸ ವರ್ಷದ ವೇಳೆ ಮದ್ಯ ಖರೀದಿಸುವವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ ಎಂದು ಬಾರ್ ಮಾಲಕರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *