Headlines

ಚಿಕ್ಕಮಗಳೂರು: ಧರ್ಮ ಸಂಘರ್ಷಕ್ಕೆ ಕಾರಣವಾಯ್ತು ಕ್ರಿಸ್ಮಸ್ ಶಾಲಾ ರಜೆ

ಚಿಕ್ಕಮಗಳೂರು: ಧರ್ಮ ಸಂಘರ್ಷಕ್ಕೆ ಕಾರಣವಾಯ್ತು ಕ್ರಿಸ್ಮಸ್ ಶಾಲಾ ರಜೆ


ಚಿಕ್ಕಮಗಳೂರು, ಡಿಸೆಂಬರ್ 12: ಕ್ರಿಸ್ಮಸ್ ಹಬ್ಬಕ್ಕೆ (ಕ್ರಿಸ್ಮಸ್ ಹಬ್ಬ) ದಿನಗಣನೆ ಆರಂಭಕ್ಕೆ ವಿವಾದವೊಂದು ಮುನ್ನೆಲೆ ಬಂದಿದೆ. ಕ್ರಿಶ್ಚಿಯನ್ ಆಡಳಿತದ ಶಾಲೆಗಳಿಗೆ ರಜೆ ನೀಡುವ ವಿವಾದಕ್ಕೆ ಕಾರಣ, 10 ದಿನಗಳ ಕಾಲ ಶಾಲೆಗಳಿಗೆ ರಜೆ (ಶಾಲೆಗಳ ರಜಾದಿನಗಳು)
ವಿರುದ್ಧ ಧರ್ಮ ಸಂಘರ್ಷಕ್ಕೆ ಶ್ರೀ ರಾಮಸೇನೆ ಸಿದ್ದತೆ ನಡೆಸಿದೆ.

ಕಳೆದ ಕೆಲ ವರ್ಷಗಳ ಹಿಂದೆ ರಾಜ್ಯದ ಕೆಲ ಶಾಲೆಗಳಲ್ಲಿ ಕಿಚ್ಚು ಹತ್ತಿಸಿದ್ದ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಇನ್ನೂ ವಿವಾದವಾಗಿಯೇ ಉಳಿದಿದೆ. ಇದೀಗ ಶಾಲೆಯ ರಜೆ ವಿಚಾರವಾಗಿ ಮತ್ತೊಂದು ವಿವಾದ ಭುಗಿಲೇಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

10 ದಿನಗಳ ಕಾಲ ಶಾಲೆಗಳಿಗೆ ರಜೆ: ಪ್ರಮೋದ್ ಮುತಾಲಿಕ್ ಆಕ್ರೋಶ

ರಾಜ್ಯದಲ್ಲಿ ಕ್ರಿಶ್ಚಿಯನ್ ಒಡೆತನದ ಶಾಲೆಗಳಲ್ಲಿ ಕ್ರಿಸ್ಮಸ್ ನೀಡುವ 10 ದಿನದ ರಜೆ ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ನೀಡುವ ರಜೆಯನ್ನು ಮಾತ್ರ. ಒಂದು ದಿನ ನೀಡುವ ರಜೆಯನ್ನ 10 ದಿನಗಳ ಕಾಲ ನೀಡುವ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಶ್ರೀರಾಮಸೇನೆ ಆಕ್ರೋಶ ವ್ಯಕ್ತಪಡಿಸಿದೆ. ರಜೆಯ ವಿವಾದಕ್ಕೆ ಧರ್ಮ ಸುತ್ತಿಕೊಂಡಿದ್ದು, ಶಾಲೆಗೆ ರಜೆ ನೀಡದೆ ದಸರಾ ಕ್ರಿಸ್ಮಸ್‌ಗೆ 10 ದಿನಗಳ ಕಾಲ ರಜೆ ನೀಡಲಾಗುತ್ತಿದೆ. ಹೆಚ್ಚಾಗಿ ಹಿಂದೂ ವಿಧ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳೇ ಇರುವ ಕ್ರಿಶ್ಚಿಯನ್ ಆಡಳಿತ ಶಾಲೆಗಳಿಗೆ ದಸರಾಕ್ಕೆ ರಜೆ ನೀಡಲಾಗುವುದು, ಕ್ರಿಸ್ಮಸ್ ರಜೆ ನೀಡುವ ಮೂಲಕ ಬಲವಂತವಾಗಿ ಕ್ರಿಶ್ಚಿಯನ್ ಧರ್ಮ ಆಚರಣೆಯನ್ನ ಹಿಂದೂಗಳ ಮೇಲೆರುವ ಪ್ರಯತ್ನ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಯ್ಯಪ್ಪ ಧರಿಸಿಬಂದ ವಿದ್ಯಾರ್ಥಿಗಳ ಕಾಲೇಜಿನಲ್ಲಿ ಪರೀಕ್ಷೆ ನಡೆಸಿದ ಪ್ರಿನ್ಸಿಪಾಲ್: ಭುಗಿಲೆದ್ದ ಆಕ್ರೋಶ

ಕ್ರಿಶ್ಚಿಯನ್ ಶಾಲೆಗಳಲ್ಲಿ ಕ್ರಿಸ್ಮಸ್ ರಜೆ ನೀಡುವ ಮೂಲಕ ಹಿಂದೂಗಳ ಮೇಲೆ ಕ್ರಿಶ್ಚಿಯನ್ ಧಾರ್ಮಿಕ ಆಚರಣೆಯನ್ನು ಹೇರಲು ಸಂಚು ಮಾಡಲಾಗುತ್ತಿದೆ ಎಂದು ಶ್ರೀ ರಾಮಸೇನೆ ಸಂಘಟನೆ ಆಕ್ರೋಶ ಹೊರ ಹಾಕಿದೆ, ಹೋರಾಟಕ್ಕೆ ಯೋಜನೆ ಮಾಡಿದೆ. ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸೋಮವಾರದಿಂದ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿದೆ.

ಇಂದು ಬೆಂಗಳೂರಿನ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿರುವ ಶ್ರೀರಾಮಸೇನೆ ನಿಯೋಗ ಮನವಿ ಮಾಡಿದೆ. 1 ದಿನ ಬಿಟ್ಟು ಹೆಚ್ಚು ದಿನ ರಜೆ ನೀಡಿದರೆ ಅಂತಹ ಶಾಲೆಗಳ ಮೇಲೆ ಸರ್ಕಾರ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ದತ್ತ ಜಯಂತಿ ಶೋಭಾಯಾತ್ರೆ: ಚಿಕ್ಕಮಗಳೂರಿನಲ್ಲಿ ಪೊಲೀಸರು ಹೈ ಅಲರ್ಟ್, ಬಿಗಿ ಬಂದೋಬಸ್ತ್

ಇದೀಗ ರಾಜ್ಯದ ಕ್ರಿಶ್ಚಿಯನ್ ಒಡೆತನದ ಶಾಲೆಗಳಲ್ಲಿ ಕ್ರಿಸ್ಮಸ್ ಹಬ್ಬದ ರಜೆ ವಿವಾದಕ್ಕೆ ಕಾರಣವಾಗಿದ್ದು, ಕ್ರಿಸ್ಮಸ್ ಹಬ್ಬದ ವಿವಾದ ಯಾವ ಸ್ವರೂಪ ಪಡೆಯುತ್ತದೆ ಅಥವಾ ಸರ್ಕಾರ ಮಧ್ಯಪ್ರವೇಶಿಸಿ ಹೊಸ ನಿಯಮ ಜಾರಿ ಮಾಡುತ್ತಾ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:39 pm, ಶುಕ್ರ, 12 ಡಿಸೆಂಬರ್ 25



Source link

Leave a Reply

Your email address will not be published. Required fields are marked *