Illegal cow slaughter in Karnataka: ಚಿಕ್ಕಮಗಳೂರಿನಲ್ಲಿ ಗೋವಿನ ಕಳೇಬರ ಪತ್ತೆಯಾದ ಹಿನ್ನೆಲೆ ಪ್ರತಿಭಟನೆ ನಡೆಸಿದ ಭಜರಂಗದಳ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಾಗಿದೆ. ಮತ್ತೊಂದೆಡೆ, ಬಳ್ಳಾರಿಯಲ್ಲಿ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 29 ಜಾನುವಾರುಗಳನ್ನು ರಕ್ಷಿಸಲಾಗಿದೆ.

ಚಿಕ್ಕಮಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಗೋ ಹತ್ಯೆ ಪ್ರಕರಣಗಳು ನಿಂತಿಲ್ಲ ಕಾಫಿನಾಡಲ್ಲಿ ಎಗ್ಗಿಲ್ಲದೆ ಗೋಹತ್ಯೆಗಳು ನಡೆಯುತ್ತಿದ್ದು, ಇದನ್ನು ಖಂಡಿಸಿ ಭಜರಂಗದಳದ ಕಾರ್ಯಕರ್ತರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಚೀಲದಲ್ಲಿ ಗೋವಿನ ಕಳೆ ಬರಹ ತುಂಬಿ ರಸ್ತೆಯಲ್ಲಿ ಎಸೆದ ಹೋಗಿದ್ದರಿಂದ ಆಕ್ರೋಶಗೊಂಡ ಭಜರಂಗದಳ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾ ನಿರತ ಕಾರ್ಯಕರ್ತರ ವಿರುದ್ಧ ಈಗ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕೊಪ್ಪದಿಂದ ತೀರ್ಥಹಳ್ಳಿಗೆ ಹೋಗುವ ಮಾರ್ಗದ ಶಿವಪುರದ ರಸ್ತೆ ಬಳಿ ರಸ್ತೆಯಲ್ಲಿ ನಾಲ್ಕು ಚೀಲದಲ್ಲಿ ಗೋವುಗಳ ಕಳೆಬರ ಎಸೆದು ಹೋಗಿದ್ದು, ಗೋವಿನ ಕಳೆಬರಹ ಪತ್ತೆಯಾದ ಹಿನ್ನೆಲೆ ಭಜರಂಗದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಅಮೆರಿಕಾ ದಾಳಿಗೆ ಬಲಿಯಾದ 165 ಶಾಲಾ ಮಕ್ಕಳನ್ನು ಒಂದೇ ಸ್ಥಳದಲ್ಲಿ ಸಮಾಧಿ ಮಾಡಿದ ಇರಾನ್

ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಗೋಹತ್ಯೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ ಹಿನ್ನೆಲೆ ಪೊಲೀಸರು ಭಜರಂಗದಳ ಕಾರ್ಯಕರ್ತರ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ವಿನಯ್ ಶಿವಪುರ ಸೇರಿ ಇನ್ನಿತರರ ಮೇಲೆ ಚಿಕ್ಕಮಗಳೂರಿನ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಕಿವಿ ಹರ್ಕೊಂಡು ಒಂದು ಕೊಂಬು ಮುರ್ಕೊಂಡಿರೋ ಕಾಡಾನೆ ಭೀಮಾ: ಕಾಫಿ ತೋಟದ ಬೇಲಿಗಳೆಲ್ಲಾ ಪುಡಿ ಪುಡಿ

ಮತ್ತೊಂದೆಡೆ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 29 ಜಾನುವಾರುಗಳನ್ನು ರಕ್ಷಿಸಿದ ಘಟನೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ಪಟ್ಟಣದಲ್ಲಿ ನಡೆದಿದ್ದು, ಇಬ್ಬರು ಸಾಗಣೆದಾರರನ್ನು ಬಂಧಿಸಲಾಗಿದೆ. ಈ ಗೋವುಗಳನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ ಸಿರಗುಪ್ಪ ಮಾರ್ಗವಾಗಿ ಕಾಸರಗೋಡಿಗೆ ಸಾಗಿಸಲಾಗುತ್ತಿತ್ತು. ಮಾಹಿತಿ ಅಧಾರಿಸಿ ಕೆಲ ಗೋರಕ್ಷಕರು ವಾಹನ ತಡೆದು ಪರಿಶೀಲನೆ ಮಾಡಿದಾಗ ಅಕ್ರಮ ಸಾಗಾಟದ ಬಗ್ಗೆ ಗೊತ್ತಾಗಿದೆ. ನಂತರ ಸಿರಗುಪ್ಪ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾರಿಯಲ್ಲಿದ್ದ 28 ಎತ್ತು ಒಂದು ಕೋಣ ಹಾಗೂ ಸಾಗಣೆಗೆ ಬಳಸಿದ ಕಂಟೇನರ್ ಅನ್ನು ವಶಕ್ಕೆ ಪಡೆದಿದ್ದಾರೆ. ಕಂಟೇನರ್ ಚಾಲಕ ಹುಸೇನ್ ಮತ್ತು ಸಹಾಯಕ ಸೌತಾಲಿಖಾನ್ ಅವರನ್ನು ಬಂಧಿಸಲಾಗಿದೆ.

Source link
ಚಿಕ್ಕಮಗಳೂರು: ಚೀಲದಲ್ಲಿ ಗೋವಿನ ಕಳೇಬರ ತುಂಬಿ ರಸ್ತೆಗೆಸೆದು ಹೋದ ದುಷ್ಕರ್ಮಿಗಳು : ಪ್ರತಿಭಟಿಸಿದವರ ವಿರುದ್ಧ FIR