ಚಿಕ್ಕಮಗಳೂರು, ಫೆಬ್ರವರಿ 25: ಭಜನೆ ಹಾಡು, ಜಾಗಟೆ, ಗಂಟೆ ಶಬ್ದದಿಂದ ಕಿರಿಕಿರಿ ಆಗುತ್ತಿದೆ ಎಂದು ಮುಸ್ಲಿಂ ವ್ಯಕ್ತಿಯೊಬ್ಬರು ಚಿಕ್ಕಮಗಳೂರು ನಗರದ ಹಳೇ ಉಪ್ಪಳ್ಳಿಯಲ್ಲಿರುವ ಈಶ್ವರ ದೇಗುಲ ಬಳಿ ಹೈಡ್ರಾಮಾ ನಡೆಸಿದ್ದಾನೆ. ಭಜನೆ ಹಾಕುವುದನ್ನು ನಿಲ್ಲಿಸಬೇಕು ಎಂದು ಪೊಲೀಸರಿಗೆ ಕರೆ ಮಾಡಿದ್ದು, ದೇವಾಲಯದಿಂದ ಬರುವ ಶಬ್ದದಿಂದ ಕಿರಿಕಿರಿ ಆಗುತ್ತಿದೆ. ಹೀಗಾಗಿ ಸಂಪೂರ್ಣ ಧ್ವನಿವರ್ಧಕ ಬಂದ್ ಮಾಡಿಸುವಂತೆ ಫಾರೂಕ್ ಎಂಬಾತ ಪಟ್ಟು ಹಿಡಿದಿದ್ದಾನೆ. ದೇಗುಲದ ಅಕ್ಕಪಕ್ಕದ ನಿವಾಸಿಗೆ ಇದರಿಂದ ತೊಂದರೆ ಆಗುತ್ತಿದೆ ಎಂದು ದೂರಿದ್ದು, ಈ ದೇವಾಲಯದ ಪಕ್ಕದಲ್ಲೇ ವಾಸವಿರುವುದು ಗೊತ್ತಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯು ಹೇಳುವಂತೆ, ಕೇವಲ ಮಂಗಳಾರತಿ ಸಮಯದಲ್ಲಿ ಹತ್ತು ನಿಮಿಷಗಳ ಅವಧಿಗೆ ಮಾತ್ರ ಭಜನೆಗಳನ್ನು ಹಾಕಲಾಗುವುದಿಲ್ಲ. ಮಂಗಳಾರತಿ, ಪೂಜೆಗೆ ಕನಿಷ್ಠ ಅರ್ಧ ಗಂಟೆ ಎಂದು ಸ್ಪಷ್ಟಪಡಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.