ಚಿಕ್ಕಮಗಳೂರು, ಜನವರಿ 1: ಬೆಂಗಳೂರಿನಿಂದ ಹೊಸ ವರ್ಷದ ಆಚರಣೆಗೆಂದು ಚಿಕ್ಕಮಗಳೂರಿಗೆ ಬಂದಿದ್ದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ರಂಪಾಟ ಮಾಡಿರುವುದು ವರದಿಯಾಗಿದೆ. ಚಹಾ ಕೊಡಲು ತಡವಾಯಿತು ಎಂಬ ಕಾರಣಕ್ಕೆ ಟೀ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗುತ್ತದೆ. ಚಿಕ್ಕಮಗಳೂರು ನಗರದ KSRTC ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಮೀಸಲು ಪೊಲೀಸ್ ಸಿಬ್ಬಂದಿ ಕೋರಮಂಗಲದ ಸಿಬ್ಬಂದಿ ಪುನೀತ್ ಹಲ್ಲೆ ನಡೆಸಿದ್ದಾರೆ.
ಮುಂಜಾನೆ ಸಮಯದಲ್ಲಿ ಪುನೀತ್ ಮತ್ತು ಅವರ ಸ್ನೇಹಿತರು ಬಸ್ ನಿಲ್ದಾಣದ ಬಳಿ ಇರುವ ಟೀ ಅಂಗಡಿಗೆ ತೆರಳಿದ್ದರು. ಈ ವೇಳೆ ಟೀ ಕೊಡಲು ತಡವಾದುದರಿಂದ ಕೋಪಗೊಂಡ ಪುನೀತ್ ಅಂಗಡಿ, ಕೆಲಸ ಮಾಡುವ ಕಾರ್ಮಿಕರ ಮೇಲೆ ಹಲ್ಲೆ. ಜೊತೆಗೆ ಪೊಲೀಸ್ ಟೀ ಅಂಗಡಿಯಲ್ಲಿ ದಾಂಧಲೆ ಎಬ್ಬಿಸಿ ಧ್ವಂಸ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಘಟನೆ ಚಿಕ್ಕಗಳೂರು ನಗರ ಪೊಲೀಸ್ ಠಾಣೆ ಠಾಣಾ ಪ್ರಕರಣ ನಡೆದಿದ್ದು, ಆರೋಪಿ ಪೊಲೀಸ್ ಕಾನ್‌ಸ್ಟೇಬಲ್ ಪುನೀತ್ ಅವರನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ