ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?: ಡ್ರೋನ್​​ನಲ್ಲಿ ಪತ್ತೆಯಾಯಿತು ಕೇರಳಂ ಹುಡುಗಿಯ ಶವ

ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?: ಡ್ರೋನ್​​ನಲ್ಲಿ ಪತ್ತೆಯಾಯಿತು ಕೇರಳಂ ಹುಡುಗಿಯ ಶವ


ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?: ಡ್ರೋನ್‌ನಲ್ಲಿ ಪತ್ತೆಯಾಯಿತು ಕೇರಳ ಹುಡುಗಿ ಶವ

ಚಿಕ್ಕಮಗಳೂರು, ಏ.10: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳಿಂದ ನಾಪತ್ತೆಯಾದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಇದೆ. ಇದೀಗ ಈ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದೆ. ಇದು ಕೊಲೆಯೋ? ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಿದ್ದಿರುವುದಾ? ಎಂಬೆಲ್ಲ ಪ್ರಶ್ನೆಗಳು ಮೂಡಿವೆ. ಇನ್ನು ಬಾಲಕಿಯ ಮೃತದೇಹವನ್ನು ಡ್ರೋನ್ ಮೂಲಕ ಪತ್ತೆ ಮಾಡಲಾಗಿದೆ. ದೇಹವೂ ಗಾಯಗಳಿಂದ ಕೂಡಿದೆ. ಏಪ್ರಿಲ್ 7 ರಂದು ನಾಪತ್ತೆಯಾದಾಗ ಯಾವ ಬಟ್ಟೆಯನ್ನು ಧರಿಸಿದ್ದಳೋ, ಅದೇ ಬಟ್ಟೆಯಲ್ಲಿ ಮೃತದೇಹ ಇದೆ. ಇದು ಬಾಲಕಿ ನಾಪತ್ತೆಯಾದ ಕೆಲವೇ ಹೊತ್ತಿನಲ್ಲಿ ಕಾಣಿಸಿಕೊಂಡಿರಬಹುದು ಎಂಬ ಶಂಕೆಯನ್ನು ಹೊಂದಿದೆ. ಬಹಳ ಕಡಿದಾದ ಮತ್ತು ಮನುಷ್ಯರು ಸುಲಭವಾಗಿ ತಲುಪಲಾಗದ 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವವಿದ್ದ ಕಾರಣ, ಡ್ರೋನ್ ಕ್ಯಾಮೆರಾಗಳು ಶವ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸದ್ಯಕ್ಕೆ ಶವವನ್ನು ಮೇಲೆತ್ತುವ ಕಾರ್ಯಾಚರಣೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಇದು ಕೊಲೆಯೋ ಅಥವಾ ಅಪಘಾತವೋ ಸತ್ಯ ಹೊರಬರಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *