
ಗಾಜಾ, ಏಪ್ರಿಲ್ 03: ಗಾಜಾ ಯುದ್ಧವು ಕೇವಲ ಪ್ರದೇಶದ ಮೇಲೆ ದಾಳಿಯಾಗಲಿಲ್ಲ, ಮನಸ್ಸುಗಳ ಮನಸ್ಸುಗಳ ಮೇಲೆ ನಡೆದ ಯುದ್ಧವೂ ಆಗಿದೆ. ಯಾವಾಗ ಏನಾಗುತ್ತೋ, ನಾಳೆ ನಾವು ಇರ್ತೀವೋ ಇಲ್ವೋ ಎಂಬ ಆತಂಕದಲ್ಲೇ ಜನರು ದಿನದೂಡ ಎಲ್ಲಾಗುತ್ತಿತ್ತು. ಎಷ್ಟೋ ಜನ ಮನೆ ಕಳೆದುಕೊಂಡು ಮಕ್ಕಳು ಬೀದಿ ಪಾಲಾಗಿದ್ದರು. ಗಾಜಾದ ಶೆಲ್ಟರ್ನಲ್ಲಿರುವ ಐವರು ಮಕ್ಕಳ ಆಟ ನೋಡಿದಾಗ ಈ ಯುದ್ಧ ಅವರ ಅಂತರಾಳವನ್ನು ಎಷ್ಟು ಘಾಸಿಗೊಳಿಸಿರಬಹುದು ಎಂಬುದು ನಮ್ಮ ಅರಿವಿಗೆ ಬರುತ್ತದೆ. ಪುಟ್ಟ ಪುಟ್ಟ ಮಕ್ಕಳು ಗೊಂಬೆಯ ಶವಯಾತ್ರೆ ನಡೆಸಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ