ಗ್ರಾಮೀಣ ಭಾಗದ ಬದುಕು ಸುಂದರ. ವಾಹನಗಳ ಓಡಾಟ, ಟ್ರಾಫಿಕ್‌ನಿಂದ ಗಿಜಿಗುಟ್ಟುವ ರಸ್ತೆಗಳಿಲ್ಲ. ಹಚ್ಚ ಹಸಿರಿನ ವಾತಾವರಣ, ಕಟಾವು ಮುಗಿಯುತ್ತಿದ್ದಂತೆ ಗದ್ದೆ ಉಳುವೆ, ಮತ್ತೆ ಕೃಷಿ ಕಾಯಕ ಶುರು. ಹಳ್ಳಿಯ ಮಕ್ಕಳು (ಮಕ್ಕಳು) ಕೂಡ ಗ್ರಾಮೀಣ ಭಾಗದ ಕ್ರೀಡೆ ಆಡುತ್ತ ಖುಷಿ ಪಡುತ್ತಾರೆ. ಇದೀಗ ಕೆಸರು ತುಂಬಿದ ಗದ್ದೆಯಲ್ಲಿ ಈಜಾಡುತ್ತಾ ಆಟ ಆಡುತ್ತಿದ್ದಾರೆ. ಗ್ರಾಮೀಣ ಬದುಕಿನ ಆಟದ ಪಾಠದ ಚಿತ್ರಣ ನೆಟ್ಟಿಗರ ಕಣ್ಮನ ಸೆಳೆಯುತ್ತಿದೆ.
Jp ಬಡಕೆರೆ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪುಟಾಣಿಗಳು ಕೆಸರು ಗದ್ದೆಯಲ್ಲಿ ಈಜಾಡುತ್ತಾ ಖುಷಿಪಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಕೆಸರುಗದ್ದೆ ಈಜುವ ಸ್ಪರ್ಧೆಯಲ್ಲಿ ಸಂಕೇತ್ ಮೇಲ್ಮನೆ ಪ್ರಥಮ, ದ್ವಿತೀಯ ನವೀನ. (ಸಮುದ್ರ ಮತ್ತು ಹೊಳೆಯಲ್ಲಿ ಈಜುವ ಸ್ಪರ್ಧೆ ನಾವೆಲ್ಲ ನೋಡಿದ್ದೀವಿ.. ಕೆಸರಲ್ಲಿ ಈಜುವ ಸ್ಪರ್ಧೆ ಇದೆ ಮೊದಲು) ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:ಶಾಲೆಗೆ ಬರಲು ಒಲ್ಲೆ ಎಂದ ಹುಡುಗನನ್ನು ಎತ್ತಿಕೊಂಡು ಹೋದ ಸಹಪಾಠಿಗಳು
ಈ ವಿಡಿಯೋ ಇದುವರೆಗೆ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಇದು ತುಂಬಾ ವಿಭಿನ್ನವಾಗಿದೆ. ಮತ್ತೊಬ್ಬರು ಈ ದೃಶ್ಯ ನೋಡಿ ನಗುವ ಇಮೋಜಿ ಕಳುಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:11 pm, ಗುರುವಾರ, 27 ನವೆಂಬರ್ 25