ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ

ಅಮೆರಿಕ ಏನೇ ಮಾಡಿದರೂ ಛಲ ಬಿಡದ ಚೀನಾ; ಇಯುವಿ ಮೆಷೀನ್​ನ ಪ್ರೋಟೋಟೈಪ್ ತಯಾರು; ಮುಂದಿದೆ ಟೆಕ್ನಾಲಜಿ ಜಟಾಪಟಿ


ನವದೆಹಲಿ, ಡಿಸೆಂಬರ್ 18: ಹಿಂದೆ ಕೋಲ್ಡ್ ವಾರ್ ಸಂದರ್ಭದಲ್ಲಿ ಪರಮಾಣು ತಂತ್ರಜ್ಞಾನ ಸಿದ್ಧಗೊಳ್ಳಲು ಪೈಪೋಟಿ ನಡೆದಿದೆ. ಈಗ ಚಿಪ್ ಟೆಕ್ನಾಲಜಿಗೆ ಜಿದ್ದಾಜಿದ್ದಿ ನಡೆದಿದೆ. ಎಐ ಬಳಕೆಗೆ ಬೇಕಾದ ಬಹಳ ಸೂಕ್ಷ್ಮ ಚಿಪ್‌ಗಳನ್ನು ತಯಾರಿಸುವ ಇಯುವಿ ಲಿಥೋಗ್ರಫಿ ತಂತ್ರಜ್ಞಾನವನ್ನು ಹೊಂದಿರುವುದು ಯೂರೋಪ್ನ ಎಸ್‌ಎಂಎಲ್ ಕಂಪನಿ ಮಾತ್ರ. ಈ ಟೆಕ್ನಾಲಜಲಿ ಅಪ್ಪಿತಪ್ಪಿಯೂ ಚೀನಾ ಕೈಗೆ ಹೋಗಬಾರದೆಂದು ಅಮೆರಿಕ ಹಲವು ವರ್ಷಗಳ ಕಾಲದಿಂದಲೂ ಯತ್ನಿಸುತ್ತಿದೆ. ಇದೇ ಹೊತ್ತಲ್ಲಿ ಅಮೆರಿಕಕ್ಕೆ ಶಾಕ್ ಎನಿಸುವಂತೆ, ಚೀನಾ ಇಯುವಿ ಲಿಥೋಗ್ರಫಿ ಮೆಷೀನ್ ನ ಪ್ರೋಟೋಟೈಪ್ ಅಳವಡಿಸಿದೆ. ಈ ಮೂಲಕ ಚಿಪ್ ರೇಸ್‌ನಲ್ಲಿ ಅಮೆರಿಕಕ್ಕೆ ಸರಿಸಮನಾಗಿ ಓಡಲು ಸಿದ್ಧ ಇರುವುದಾಗಿ ಚೀನಾ ಮೆಸೇಜ್ ರವಾನಿಸಿದ್ದಾರೆ.

ಏನಿದು ಯುವಿ ಲಿಥೋಗ್ರಫಿ ಮೆಷೀನ್?

ಇಯುವಿ ಎಂದರೆ ಎಕ್ಸ್‌ಟ್ರೀಮ್ ಅಲ್ಟ್ರಾವಯ್ಲೆಟ್ ಲೈಟ್. ಅಂದರೆ ಅತಿನೇರಳೆ ಬೆಳಕಿನಲ್ಲೇ ಅತಿರೇಕಕ್ಕೆ ಸೇರಿದ್ದು. ಐಸಿ ಚಿಪ್ಗಳನ್ನು ಬಳಸಲಾಗಿದೆ. ಇದರ ಹಿಂದಿರುವ ವಿಜ್ಞಾನ ಸರಳವಾದರೂ ಅದನ್ನು ಕಾರ್ಯರೂಪಕ್ಕೆ ಇಳಿಸಲು ಬೇಕಾದ ತಂತ್ರಜ್ಞಾನ ಸಿದ್ಧಿಸುವುದು ತೀರಾ ಕಷ್ಟ. ನೆದರ್ಲ್ಯಾಂಡ್ಸ್ ಮೂಲದ ಎಸ್‌ಎಸ್‌ಎಂಎಲ್ ಕಂಪನಿ ಮಾತ್ರವೇ ಈ ತಂತ್ರಜ್ಞಾನವನ್ನು ಹೊಂದಿರುವುದು.

ಈ ಟೆಕ್ನಾಲಜಿ ಬಳಸಿ ಎಸ್‌ಎಂಎಲ್ ಸಂಸ್ಥೆಯು ಇಯುವಿ ಲಿಥೋಗ್ರಫಿ ಮೆಷೀನ್ ತಯಾರಿಸಿದೆ. ಎನ್ ವಿಡಿಯೋ, ಇಂಟೆಲ್ ಇತ್ಯಾದಿ ಅನೇಕ ಚಿಪ್ ತಯಾರಕ ಸಂಸ್ಥೆಗಳು ಇವೇ ಮೆಷೀನ್ ಬಳಸಿ ಉನ್ನತ ಮಟ್ಟದ ಮತ್ತು ಅತೀ ಸೂಕ್ಷ್ಮ ಮತ್ತು ಪ್ರಬಲ ಚಿಪ್‌ಗಳನ್ನು ತಯಾರಿಸುತ್ತವೆ.

ಇದನ್ನೂ ಓದಿ:

ಕೈಗೆ ಸಿಗದ ತಂತ್ರಜ್ಞಾನ; ಜಿಡ್ಡಿಗೆ ಬಿದ್ದ ಚೀನಾ

ಅಮೆರಿಕ, ಯೂರೋಪಿಯನ್ ಕಂಪನಿಗಳನ್ನು ಬಿಟ್ಟರೆ ಸ್ಯಾಮ್‌ಸಂಗ್ ಮತ್ತು ಟಿಎಸ್‌ಎಂಸಿ (ತೈವಾನ್) ಕಂಪನಿಗಳಿಗೆ ಮಾತ್ರವೇ ಎಸ್‌ಎಂಎಲ್‌ನ ಇಯುವಿ ಲಿಥೋಗ್ರಫಿ ಮೆಷೀನ್‌ಗಳನ್ನು ಬಳಸಲಾಗುತ್ತದೆ. 2010ರಲ್ಲಿ ಎಸ್‌ಎಂಎಲ್ ಈ ಮೆಷೀನ್ ಅಭಿವೃದ್ದಿಪಡಿಸಿದ್ದು. 2017ರಿಂದ ಇದರ ಕಮರ್ಷಿಯಲ್ ಉತ್ಪಾದನೆ ಶುರುವಾಗಿದೆ. 2019 ರಲ್ಲಿ ಚೀನಾ ದೇಶವು ಇಯುವಿ ಮೆಷಿನ್‌ಗಳನ್ನು ಖರೀದಿಸಲು ಮುಂದಾಗಿತ್ತು. ಆದರೆ, ಅಮೆರಿಕಕ್ಕೆ ಇದನ್ನು ತಡೆಯಿತು.

ಆಗ ಚೀನಾ ಜಿದ್ದಿಗೆ ಬಿದ್ದಿತು. ಇಯುವಿ ಲಿಥೋಗ್ರಫಿ ಮೆಷೀನ್ ಸ್ಥಾಪಿಸಿಯೇ ತೀರುತ್ತೇವೆಂದು ಚೀನಾದವರು ಅಖಾಡಕ್ಕೆ ಅಡಿ ಇಟ್ಟೇ ಬಿಟ್ಟರು. ಇದು ಚೀನಾ ಪಾಲಿಗೆ ‘ಮ್ಯಾನ್ಹಾಟನ್ ಪ್ರಾಜೆಕ್ಟ್’ ಆಗಿಹೋಗಿತ್ತು. ಮ್ಯಾನ್ಹಾಟನ್ ಪ್ರಾಜೆಕ್ಟ್ ಹೆಸರು ಕೇಳಿರಬಹುದು. ಇದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪರಮಾಣು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಸೋವಿಯತ್ ರಷ್ಯಾ ಮತ್ತು ಜರ್ಮನಿಯನ್ನು ಹಿಂದಿಕ್ಕಲು ಅಮೆರಿಕವು ಮ್ಯಾನ್ಹ್ಯಾಟನ್ ಪ್ರಾಜೆಕ್ಟ್ ಅನ್ನು ಕೈಗೊಳ್ಳಲಾಯಿತು. ಅದರಲ್ಲಿ ಯಶಸ್ವಿಯೂ ಆಯಿತು. ಈಗ ಚೀನಾ ಇಯುವಿ ತಂತ್ರಜ್ಞಾನವನ್ನು ಸಿದ್ಧಪಡಿಸಲು ಕೈಗೊಂಡ ಯೋಜನೆ ರೆಫರೆನ್ಸ್ ಆಗಿ ಚೀನಾದ ‘ಮ್ಯಾನ್ಹಾಟನ್ ಪ್ರಾಜೆಕ್ಟ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:

ಈ ಟೆಕ್ನಾಲಜಿ ಪಡೆಯುವುದು ಚೀನಾಕ್ಕೆ ಸುಲಭವಾಗಿರಲಿಲ್ಲ. ಈಯುವಿಗಿಂತ ಮುಂಚೆಯೇ ಎಸ್‌ಎಂಎಲ್ ಸಂಸ್ಥೆಯು ಡಿಯುವಿ ಮೆಷೀನ್‌ಗಳನ್ನು ತಯಾರಿಸಿತ್ತು. ಇದೂ ಕೂಡ ಅಲ್ಟ್ರಾವಯಲೆಟ್ ಕಿರಣಗಳನ್ನು ಬಳಸಿ ಚಿಪ್ ತಯಾರಿಸುವ ತಂತ್ರಜ್ಞಾನ. ಆದರೆ, ಈಯುವಷ್ಟು ಸೂಕ್ಷ್ಮ ಮತ್ತು ಪ್ರಬಲ ಚಿಪ್ ಅನ್ನು ಡಿಯುವಿ ಮೂಲಕ ಆಗುವುದಿಲ್ಲ. ಚೀನಾದವರು ಡಿಯುವಿ ಮೆಷೀನ್‌ನಲ್ಲೇ ಏನೇನೋ ಬದಲಾವಣೆ ಮಾಡಿಕೊಂಡಿದ್ದಾರೆ. ಅದರಲ್ಲಿ ವಿಫಲವಾದರು.

ಡಿಯುವಿ ಇಟ್ಟುಕೊಂಡು ಇಯುವಿ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಸತ್ಯ ಕಂಡುಬಂದಿದೆ ಚೀನೀಯರು, ಆರಂಭಿಕ ಹಂತದಲ್ಲಿ ಯುಇವಿಯನ್ನು ಸಿದ್ಧಪಡಿಸುವುದೆಂದು ನಿರ್ಧರಿಸಿದರು. ಆಗ ಅವರಿಗೆ ಸಹಾಯಕ್ಕೆ ಸಿಕ್ಕವರು ಅದೇ ಎಸ್‌ಎಂಎಲ್ ಕಂಪನಿಯ ಮಾಜಿ ಉದ್ಯೋಗಿಗಳು. ಚೀನೀ ಮೂಲದ ಈ ಉದ್ಯೋಗಿಗಳನ್ನು ಇಟ್ಟುಕೊಂಡು ಬಹಳ ಕಸರತ್ತು ನಡೆಸಿ ಎಕ್ಸ್ ಟ್ರೀಮ್ ಅಲ್ಟ್ರಾವಯಲೆಟ್ ಲಿಥೋಗ್ರಫಿಯ ಪ್ರೋಟೋಟೈಪ್ ಮೆಷೀನ್ ಚೀನಾವನ್ನು ತಯಾರಿಸಿದೆ.

ಮೆಷೀನ್ ಮಾರಾಟವನ್ನು ತಡೆಯಬೇಡಿ ಎಂದು 2019ರಲ್ಲೇ ಎಚ್ಚರಿಸಿದ್ದರು ಎಸ್‌ಎಂಎಲ್ ಸಿಐಒ

2019 ರಲ್ಲಿ ಚೀನಾ ದೇಶವು ಇಯುವಿ ಮೆಷೀನ್ ಅನ್ನು ಕೇಳಿದಾಗ ಅಮೆರಿಕ ತಡೆದಿತ್ತು. ಆ ಸಂದರ್ಭದಲ್ಲಿ ಎಸ್‌ಎಂಎಲ್‌ನ ಸಿಐಒ ಆಗಿದ್ದ ಪೀಟರ್ ವೆನ್ನಿಂಕ್ ಅವರು ಚೀನಾವನ್ನು ತಡೆಯಬೇಡಿ ಎಂದಿದ್ದರು. ಚೀನಾಗೆ ಈ ಮೆಷೀನ್ ಸಿಗದಿದ್ದರೆ ಅವರು ಹೇಗಾದರೂ ಮಾಡಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ ಎಂದು ಎಚ್ಚರಿಸಿದ್ದಾರೆ. ಅವರು ಹೇಳಿದಂತೆಯೇ ಈಗ ಆಗುತ್ತಿದೆ.

ಇದನ್ನೂ ಓದಿ:

ಹಿಂದೆ ಮಾಡಲಾದ ಅಂದಾಜು ಪ್ರಕಾರ 2030ಕ್ಕೆ ಚೀನಾದವರು ಇಯುವಿ ಮೆಷೀನ್ ಮೂಲಕ ಚಿಪ್ ಉತ್ಪಾದನೆಯನ್ನು ಪ್ರಾರಂಭಿಸಬಹುದು. ಈಗ ಅದರ ವೇಗ 2028ಕ್ಕೆ ಮುನ್ನವೇ ಚಿಪ್ ತಯಾರಿಕೆ ಶುರುವಾಗಿದೆ ನೋಡಿದರೆ. ಇದು ಸಾಕಾರಗೊಂಡರೆ ಚೀನಾ ದೇಶ ಚಿಪ್ ತಯಾರಿಕೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಲು ಸಾಧ್ಯವಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *