30 ವರ್ಷದ ಹಿಂದೆ ನುಂಗಿದ್ದ ಲೈಟರ್​​ನ್ನು​ ಕಾಂಡೋಮ್​​ನಿಂದ ಹೊರತೆಗೆದ ವೈದ್ಯರು: ಅಚ್ಚರಿ ಅನ್ನಿಸಿದರೂ ಸತ್ಯ!

30 ವರ್ಷದ ಹಿಂದೆ ನುಂಗಿದ್ದ ಲೈಟರ್​​ನ್ನು​ ಕಾಂಡೋಮ್​​ನಿಂದ ಹೊರತೆಗೆದ ವೈದ್ಯರು: ಅಚ್ಚರಿ ಅನ್ನಿಸಿದರೂ ಸತ್ಯ!


ಚೀನಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. 30 ವರ್ಷಗಳ ಹಿಂದೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬರು ಸಿಗರೇಟ್ ಲೈಟರ್ (ಲೈಟರ್ ನುಂಗಿದ) ನುಂಗಿದ್ದರು. ಇದೀಗ ವೈದ್ಯರು ಕಾಂಡೋಮ್ ಬಳಸಿ ಹೊಟ್ಟೆಯಿಂದ ಸಿಗರೇಟ್ ಲೈಟರ್ ಅನ್ನು ಹೊರತೆಗೆದಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದೀಗ ಈ ವ್ಯಕ್ತಿ ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಈ ವ್ಯಕ್ತಿಯನ್ನು ಡೆಂಗ್ ಎಂದು ಗುರುತಿಸಲಾಗಿದೆ. ವೈದ್ಯರು ಈ ಸಾಧನೆ ವೈದ್ಯಕೀಯ ಇತಿಹಾಸದಲ್ಲಿ ಮೊದಲು ಹೇಳಿದರು. ಕಾಂಡೋಮ್ ಬಳಸಿ ಹೊಟ್ಟೆಯಿಂದ ಸಿಗರೇಟ್ ಲೈಟರ್ ತೆಗೆದಿರುವುದು ಎಲ್ಲ ಕಡೆ ಪ್ರಶಂಸೆ, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚಿಸಿದ್ದಾರೆ.

ಮೂರು ಹಿಂದೆ ಡೆಂಗ್, ಲೈಟರ್ ನುಂಗಿದ್ದು, ಇದರಿಂದ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಿಲ್ಲ. ಆದರೆ ಅಗ್ಗಕ್ಕೆ ಸಣ್ಣದಾಗಿ ಹೊಟ್ಟೆ ನೋವು ಬರುತ್ತಿತ್ತು. ತಕ್ಷಣ ಕಡಿಮೆ ಆಗುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಹೊಟ್ಟೆ ಉಬ್ಬರ ಮತ್ತು ನೋವಿನಿಂದ ನರಳುತ್ತಿತ್ತು. ಈ ಕಾರಣಕ್ಕೆ ವೈದ್ಯರ ಬಳಿ ಹೋಗಿದ್ದಾರೆ . ವೈದ್ಯರು ಗ್ಯಾಸ್ಟ್ರೋಸ್ಕೋಪಿ ಮಾಡುವಾಗ, ಅವರ ಹೊಟ್ಟೆಯ ಆಳದಲ್ಲಿ ಕಪ್ಪು ವಸ್ತು ಇದೆ. ವೈದ್ಯರು ಹೇಳಿರುವ ಪ್ರಕಾರ, ಡೆಂಗ್ ಅವರು 1991-92ರಲ್ಲಿ ಮದ್ಯಪಾನ ಮಾಡುವ ವೇಳೆ ಸ್ನೇಹಿತನೊಂದಿಗೆ ಬೆಟ್ಟಿಂಗ್ ಮಾಡಿಕೊಂಡಿದ್ದಾರೆ ಲೈಟರ್ ನುಂಗಿದ್ದಾರೆ. ಈ ಬಗ್ಗೆ ವೈದ್ಯರು ಡೆಂಗ್ ಅವರ ಪತ್ನಿ ಹಾಗೂ ಮಗನಿಗೆ ಹೇಳಿದಾಗ ಅವರು ಅಚ್ಚರಿಪಟ್ಟಿದ್ದಾರೆ.

ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ ಖಾಸಗಿ ವಿಡಿಯೋ ಹಾಕಿ ಸ್ನೇಹಿತನ ಮೇಲೆ ದೂರಿದ ಜೋಡಿ

ಇನ್ನು ವೈದ್ಯರು ಫೋರ್ಸ್‌ಪ್ಸ್ ಬಳಸಿ ಲೈಟರ್ ಅನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ವಸ್ತುವಿನ ಹೊರ ಮೇಲ್ಮೈ ತುಂಬಾ ಸೂಕ್ಷ್ಮವಾಗಿ, ಅವರು ಕಾಂಡೋಮ್ ಅನ್ನು ಬಳಸಿದ್ದಾರೆ. ಫೋರ್ಸ್ಪ್ಸ್ ಬಳಸಿ ಕಾಂಡೋಮ್ ಅನ್ನು ಬಾಯಿಯ ಮೂಲಕ ನಿಧಾನವಾಗಿ ಡೆಂಗ್ ಅವರ ಹೊಟ್ಟೆಯೊಳಗೆ ಹಾಕಿ, ನಿಧಾನವಾಗಿ ಲೈಟರ್ ಅನ್ನು ಹೊರೆತೆಗೆದಿದೆ. ಈ ಕಾರ್ಯಕ್ಕಾಗಿ ವೈದ್ಯರು 20 ನಿಮಿಷಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಲೈಟರ್‌ನ ಉದ್ದ ಸುಮಾರು 7 ಸೆಂಟಿಮೀಟರ್‌ಗಳಷ್ಟಿತ್ತು ಮತ್ತು ತುಕ್ಕು ಹಿಡಿದಂತೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *