ಪಾಕಿಸ್ತಾನದ ಸಿಪೆಕ್​ಗೆ ಚೀನಾ ಫಂಡಿಂಗ್ ಇಲ್ಲ; ಉಗ್ರರ ಉಪಟಳಕ್ಕೆ ಹೆದರಿತಾ? ಚೀನಾ ಸಾಲ ಕೊಡದೇ ಇರಲು ಏನು ಕಾರಣ?

ಪಾಕಿಸ್ತಾನದ ಸಿಪೆಕ್​ಗೆ ಚೀನಾ ಫಂಡಿಂಗ್ ಇಲ್ಲ; ಉಗ್ರರ ಉಪಟಳಕ್ಕೆ ಹೆದರಿತಾ? ಚೀನಾ ಸಾಲ ಕೊಡದೇ ಇರಲು ಏನು ಕಾರಣ?


ಜನವರಿ, ನವೆಂಬರ್ 11: ಹಲವು ವರ್ಷಗಳಿಂದ ಪೂರ್ಣಗೊಳಿಸಲು ಆಗದೆ ಒದ್ದಾಡುತ್ತಿರುವ ಪಾಕಿಸ್ತಾನಕ್ಕೆ ಈ ಹತಾಶೆಯ ಪರಿಸ್ಥಿತಿ ಮುಂದುವರಿಯುತ್ತದೆ. ಅದರ ಸಿಪೆಕ್ ಯೋಜನೆಗೆ ಫಂಡಿಂಗ್ ಕೊಡಲು ಚೀನಾ (ಚೀನಾ) ಹಿಂದೇಟು ಹಾಕುತ್ತಿದೆ. ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರ ಇತ್ತೀಚಿನ ಚೀನಾ ಭೇಟಿಯಲ್ಲಿ ಹೆಚ್ಚೇನೂ ಗೀಟಿದಂತಿಲ್ಲ. ಚೀನಾ ಪಾಕಿಸ್ತಾನ್ ಏಕನಾಮಿಕ್ ಕಾರಿಡಾರ್ (CPEC- China Pakistan Economic Corridor) ಎರಡನೇ ಯೋಜನೆಗೆ ಚೀನಾದ ಫಂಡಿಂಗ್ ಸಿಗದೆ ಷರೀಫ್ ವಾಪಸ್ಸಾಗಿದ್ದಾರೆ.

ಪಾಕಿಸ್ತಾನದಲ್ಲಿ ಕೃಷಿ, ಇಲಿಕ್ ವಾಹನ, ಸೌರಶಕ್ತಿ, ಆರೋಗ್ಯ, ಉಕ್ಕು ಮೊದಲಾದ ಕ್ಷೇತ್ರಗಳಲ್ಲಿ 8.5 ಬಿಲಿಯನ್ ಡಾಲ್ ಮೌಲ್ಯದ ಯೋಜನೆಗಳಿಗೆ ಚೀನಾದ ವಿವಿಧ ಕಂಪನಿಗಳು ಎಂಒಯು ಒಪ್ಪಂದಗಳನ್ನು ಮಾಡಿಕೊಂಡಿವೆ. ಇದು ಬಿಟ್ಟರೆ ಪ್ರಮುಖ ಹೂಡಿಕೆಗಳು ಚೀನಾದಿಂದ ಪಾಕಿಸ್ತಾನಕ್ಕೆ ಸಿಗುತ್ತಿಲ್ಲ.

ಏನಿದು ಸಿಪೆಕ್ ಯೋಜನೆ?

ಚೀನಾ ಪಾಕಿಸ್ತಾನ ಏಕನಾಮಿಕ್ ಕಾರಿಡಾರ್ ಯೋಜನೆಯು ಪಾಕಿಸ್ತಾನದೊಳಗೆ ಮೂಲಸೌಕರ್ಯಗಳನ್ನು ನಿರ್ಮಿಸುವ ಯೋಜನೆಯಾಗಿದೆ. ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಪ್ರಾಜೆಕ್ಟ್ ಒಂದು ಪ್ರಮುಖ ಭಾಗವಾಗಿದೆ. ಚೀನಾದ ಶಿನ್ಜಿಯಾಂಗ್ ಪ್ರಾಂತ್ಯದಿಂದ ಪಾಕಿಸ್ತಾನದ ಗ್ವಾದರ್ ಪೋರ್ಟ್‌ವರೆಗೆ ದೀರ್ಘ ಕಾರಿಡಾರ್ ನಿರ್ಮಿಸುವುದು ಸಿಪೆಕ್ ಯೋಜನೆ ಉದ್ದೇಶ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರತದ ಜಿಡಿಪಿ, ಹಣದುಬ್ಬರ, ಬಡ್ಡಿದರ ಟ್ರೆಂಡ್ ಹೀಗಿರುತ್ತದೆ: ಯುಬಿಎಸ್ ಅಂದಾಜು

ಬರೋಬ್ಬರಿ 3,000 ಕಿಮೀ ಉದ್ದದ ಈ ಕಾರಿಡಾರ್‌ನಲ್ಲಿ ರಸ್ತೆ, ಪೈಪ್‌ಲೈನ್‌ಗಳು ಪೈಪ್‌ಲೈನ್ ನೆಟ್‌ವರ್ಕ್ ಇರಲಿ. ಚೀನಾದಿಂದ ಸರಕುಗಳನ್ನು ಈ ಕಾರಿಡಾರ್ ಮೂಲಕ ಗ್ವಾದರ್ ಪೋರ್ಟ್ಗೆ ಕಳುಹಿಸಿ, ಅಲ್ಲಿಂದ ಮಧ್ಯಪ್ರಾಚ್ಯ, ಸೆಂಟ್ರಲ್ ಏಷ್ಯಾ, ಆಫ್ರಿಕಾ ದೇಶಗಳಿಗೆ ರಫ್ತು ಮಾಡುವುದು ಚೀನಾದ ಉದ್ದೇಶ. ಹೀಗಾಗಿ, ರಸ್ತೆ ಮತ್ತು ರೈಲು ಸಂಪರ್ಕ ಜಾಲವನ್ನು ಸುಧಾರಿಸಲಾಗುತ್ತಿದೆ.

ಸಿಪೆಕ್ ಯೋಜನೆ ಕಾಮಗಾರಿಗಳು ಕಳೆದ ಕೆಲ ವರ್ಷಗಳಿಂದ ಮಂದಗತಿಯಲ್ಲಿ ಸಾಗಿದೆ. ಎರಡನೇ ಯೋಜನೆ ಜಾರಿಗೆ ತರಲು 60 ಬಿಲಿಯನ್ ಡಾಲರ್ ಹಣ ಪಾಕಿಸ್ತಾನಕ್ಕೆ ಅಗತ್ಯವಿದೆ. ಚೀನಾ ಬೆಂಬಲಿತ ಯೋಜನೆಯಾದರೂ ಈ ಎಲ್ಲಾ ಕಾಮಗಾರಿಗಳ ವೆಚ್ಚವನ್ನು ಪಾಕಿಸ್ತಾನವೇ ಭರಿಸಬೇಕು. ಚೀನಾ ಈ ಹಿಂದೆ ಸಾಕಷ್ಟು ಸಾಲಗಳನ್ನು ಪಾಕಿಸ್ತಾನಕ್ಕೆ ಕೊಟ್ಟಿದೆ. ಈಗ ಸಾಲ ಕೊಡಲು ಹಿಂದೇಟು ಹಾಕುತ್ತಿದೆ. ಪಾಕಿಸ್ತಾನಕ್ಕೆ ಈಗ ಒಂದು ರೀತಿಯಲ್ಲಿ ನಡುನೀರಲ್ಲಿ ಕೈಬಿಟ್ಟಂತಹ ಸ್ಥಿತಿ ಬಂದಿದೆ.

ಚೀನಾ ಸಿಪೆಕ್ ಯೋಜನೆಗೆ ಫಂಡಿಂಗ್ ಕೊಡಲು ಹಿಂದೇಟು ಹಾಕುತ್ತಿರಬಹುದೇ?

ಪಾಕಿಸ್ತಾನದಲ್ಲಿ ಸಿಪೆಕ್ ಯೋಜನೆ ಜಾರಿಗೆ ಫಂಡಿಂಗ್ ನೀಡಲು ಚೀನಾ ಒಲ್ಲೆ ಎನ್ನಲು ಕೆಲವು ಸಂಭಾವ್ಯ ಕಾರಣಗಳು ಈ ಕೆಳಕಂಡಂತಿವೆ:

  • ಯೋಜನೆ ಕಾಮಗಾರಿ ಸ್ಥಳಗಳಲ್ಲಿ ಉಗ್ರರ ಉಪಟಳ ಹೆಚ್ಚಿರುವುದು
  • ಅಮೆರಿಕದ ಜೊತೆ ಪಾಕಿಸ್ತಾನ ಮತ್ತೆ ಸರಸವಾಡುತ್ತಿದೆ.
  • ಭಾರತದ ಜೊತೆ ಚೀನಾದ ಒಡನಾಟ ಹೆಚ್ಚುತ್ತಿದೆ.
  • ಚೀನಾದ ಹಿಂದಿನ ಸಾಲಗಳನ್ನೇ ಪಾಕಿಸ್ತಾನ ತೀರಿಸಿದಲ್ಲದೇ ಇರುವುದು.
  • ಹೊಸ ಸಾಲ ಕೊಟ್ಟರೆ ಅದು ಮರಳಬಹುದು ಎನ್ನುವ ವಿಶ್ವಾಸ ಚೀನಾಗೆ ಇಲ್ಲದಿರುವುದು.
  • ಚೀನಾದ ಆರ್ಥಿಕತೆಯೇ ಬಿಗಿ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಲು ಆಗದೇ ಇರಬಹುದು.

ಇದನ್ನೂ ಓದಿ: ಭಾರತದ 3 ರಾಜ್ಯಗಳಲ್ಲಿ ಹೊಸ ಚಿನ್ನದ ಗಣಿಗಳು ಪತ್ತೆ; ದೇಶದ ಸ್ವರ್ಣ ದಾಹಕ್ಕೆ ಇದು ಸಾಕಾಗುತ್ತಾ?

60 ಬಿಲಿಯನ್ ಡಾಲರ್ ಸಣ್ಣ ಮೊತ್ತವಲ್ಲ. ಚೀನಾದ ಆರ್ಥಿಕ ಪರಿಸ್ಥಿತಿ ಮೊದಲಿನಷ್ಟು ಸಲೀಸಾಗಿಲ್ಲ. ದೊಡ್ಡದೊಡ್ಡ ಯೋಜನೆಗಳಿಗೆ ಫಂಡಿಂಗ್ ಕೊಡುವುದು ಇವತ್ತಿನ ಸಂದರ್ಭದಲ್ಲಿ ಚೀನಾಗೆ ರಿಸ್ಕಿ ಎನಿಸಿದೆ. ಪಾಕಿಸ್ತಾನಕ್ಕೆ ಸಾಲ ಕೊಟ್ಟರೆ ಅದು ಮರಳುತ್ತದೆ ಎನ್ನುವ ನಂಬಿಕೆ ಚೀನಾಗೆ ಇದ್ದಂತಿಲ್ಲ. ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ 60 ಬಿಲಿಯನ್ ಡಾಲರ್ ಪಡೆಯಲು ಎಡಿಬಿಗೆ ಸಾಲದ ಅರ್ಜಿ ಹಾಕಿ ಕಾದು ಕುಳಿತುಕೊಳ್ಳುವುದೇ ಉಳಿದಿರುವ ಮಾರ್ಗ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 7:27 pm, ಮಂಗಳವಾರ, 11 ನವೆಂಬರ್ 25



Source link

Leave a Reply

Your email address will not be published. Required fields are marked *