Headlines

ಎಲ್ಲ ದಾಖಲೆ ಉಡೀಸ್, ಬಾಕ್ಸ್ ಆಫೀಸ್​ನಲ್ಲಿ 18 ಸಾವಿರ ಕೋಟಿ ಗಳಿಸಿದ ಅನಿಮೇಟೆಡ್ ಸಿನಿಮಾ

ಎಲ್ಲ ದಾಖಲೆ ಉಡೀಸ್, ಬಾಕ್ಸ್ ಆಫೀಸ್​ನಲ್ಲಿ 18 ಸಾವಿರ ಕೋಟಿ ಗಳಿಸಿದ ಅನಿಮೇಟೆಡ್ ಸಿನಿಮಾ


ಭಾರತದ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಒಂದು ಸಾವಿರ ಕೋಟಿ ಗಳಿಸುವುದು ಮಹಾನ್ ಸಾಧನೆಯಾಗಿದೆ. ಆದರೆ ನೆರೆಯ ಚೀನಾದ ಸಿನಿಮಾ ಒಂದು ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 19 ಸಾವಿರ ಕೋಟಿ ರೂಪಾಯಿ ಗಳಿಸಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟರು ಯಾರೂ ಇಲ್ಲ. ‘ಅವತಾರ್’, ‘ಮಿಷನ್ ಇಂಪಾಸಿಬಲ್’, ‘ಸ್ಪೈಡರ್ ಮ್ಯಾನ್’ ಇನ್ನೂ ಹಲವು ದೊಡ್ಡ ಹಾಲಿವುಡ್ ಸಿನಿಮಾಗಳ ದಾಖಲೆಯೂ ಸಹ ಈ ಚೀನೀಸ್ ಸಿನಿಮಾ ಹಿಂದಿಕ್ಕಿದ್ದು, ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಗಳೇ ಬರೆಯುತ್ತಿವೆ.

ಅನಿಮೇಷನ್ ಸಿನಿಮಾ ‘ನೆ ಜ್ಹಾ 2’ ಸಿನಿಮಾ ಇದೀಗ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸುತ್ತಿದೆ. ಸುಮಾರು 700 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಅನಿಮೇಷನ್ ಸಿನಿಮಾ ಈವರೆಗೆ ಬಾಕ್ಸ್ ಆಫೀಸ್‌ನಲ್ಲಿ 18 ಸಾವಿರ ಕೋಟಿಗಳಷ್ಟು ಹೆಚ್ಚಿನ ಮೊತ್ತವನ್ನು ಹೊಂದಿದೆ. ಸಿನಿಮಾ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿದೆ, ಕಲೆಕ್ಷನ್ ಮೊತ್ತ ಸುಮಾರು 25 ಸಾವಿರ ಕೋಟಿ ಮುಟ್ಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘ನೆ ಝಾ 2’ ಸಿನಿಮಾ ಬಿಡುಗಡೆ ಆಗಿರುವುದು 2025ರ ಜನವರಿ ತಿಂಗಳಿನಲ್ಲಿ. ಆಗಿನಿಂದ ಈಗಿನವರೆಗೂ ಸಿನಿಮಾ ಭರ್ಜರಿ ಕಲೆಕ್ಷನ್ ಆಗುತ್ತಲೇ ಇದೆ. ಸಿನಿಮಾದ ಬಜೆಟ್ ಕೇವಲ 71 ಕೋಟಿ ರೂಪಾಯಿಗಳು. ಆದರೆ ಗಳಿಕೆ ಮಾಡಿರುವುದು 18 ಸಾವಿರ ಕೋಟಿ. ಇದೇ ವರ್ಷ ಬಿಡುಗಡೆಯಾದ ಕೆಲವು ಭಾರಿ ಬಜೆಟ್‌ನ ಹಾಲಿವುಡ್ ಸಿನಿಮಾಗಳಿಗೆ ಸಾಧ್ಯವಾಗದ ಯಶಸ್ಸನ್ನು ಈ ಚೈನೀಸ್ ಸಿನಿಮಾ ಮಾಡಿದೆ.

ಇದನ್ನೂ ಓದಿ:’ಅವತಾರ್ 3′ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದ ಮತ್ತೊಂದು ಹಾಲಿವುಡ್ ಸಿನಿಮಾ

‘ನೆ ಝಾ 2’ ಸಿನಿಮಾ ಆಕ್ಷನ್ ಸಿನಿಮಾ ಆಗಿದ್ದು, ಭಾರತದ ಚೋಟಾ ಭೀಮ್ ರೀತಿಯಲ್ಲಿಯೇ ಪುಟ್ಟ ಬಾಲಕನೊಬ್ಬ ತನ್ನ ವಯಸ್ಸು, ಆಕಾರಕ್ಕೆ ಮೀರಿದ ಸಾಹಸಗಳನ್ನು ಮಾಡುವ ಕಥೆ ‘ನೆ ಝಾ 2’ ಸಿನಿಮಾ ಒಳಗೊಂಡಿದೆ. ಹೆಸರೇ ಸೂಚಿಸುತ್ತಿರುವಂತೆ ಇದು ‘ನೆ ಝಾ’ ಸರಣಿಯ ಎರಡನೇ ಸಿನಿಮಾ. ಸಿನಿಮಾ ಇದೇ ವರ್ಷಾರಂಭದ ಜನವರಿ 29 ರಂದು ಬಿಡುಗಡೆಯಾಗಿದೆ, ಅಂದಿನಿಂದ ಇಂದಿನವರೆಗೆ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಲೇ ಇದೆ.

ವಿಶೇಷವೆಂದರೆ ‘ನೆ ಝಾ 2’ ಭಾರತದಲ್ಲೂ ಬಿಡುಗಡೆಯಾಗುತ್ತಿದೆ ಆದರೆ ಸದ್ದು ಮಾಡಲಿಲ್ಲ. ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಈ ಸಿನಿಮಾ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಕೇವಲ ಹಿಂದಿ ಡಬ್ ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಸಹ ಇಂಗ್ಲೀಷ್ ಬಿಡುಗಡೆ ಮಾಡಲಾಗಲಿಲ್ಲ. ವಾರ್ನರ್ಸ್ ಬ್ರದರ್ಶ್, ಎನ್ ಕೋರ್ ಸೇರಿ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆದರೆ ನಿರೀಕ್ಷಿತ ಮಟ್ಟದ ಯಶಸ್ಸನ್ನು ಭಾರತದಲ್ಲಿ ಈ ಸಿನಿಮಾ ಗಳಿಸಲಿಲ್ಲ.

‘ನೆ ಝಾ 2’ ಸಿನಿಮಾ ಒಟಿಟಿಗೆ ಸಹ ಬಂದಿದೆ. ಆದರೆ ಭಾರತದಲ್ಲಿ ವೀಕ್ಷಣೆಗೆ ಲಭ್ಯವಿಲ್ಲ. ಎಚ್‌ಬಿಓ ಮ್ಯಾಕ್ಸ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ಗಳಲ್ಲಿ ಈ ಸಿನಿಮಾ ಲಭ್ಯವಿದೆ ಆದರೆ ಭಾರತದಲ್ಲಿ ವೀಕ್ಷಿಸಲು ಲಭ್ಯವಿಲ್ಲ, ಆದರೆ ಶೀಘ್ರವೇ ಭಾರತದಲ್ಲಿಯೂ ಸಹ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗುವ ಸಾಧ್ಯತೆಯಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 11:36 am, ಮಂಗಳವಾರ, 30 ಡಿಸೆಂಬರ್ 25



Source link

Leave a Reply

Your email address will not be published. Required fields are marked *