
ನಿಮ್ಮ ವಾರ್ಡ್‌ಡ್ರೋಬ್‌ಗೆ ಬಂದ್ರೆ ಸ್ವಲ್ಪ ಬ್ರೈಟ್, ಬೋಲ್ಡ್ ಆಗಿರೋ, ಅದರಲ್ಲಿಯೂ ವಿಶೇಷವಾಗಿ ರೆಡ್ ಆಗಿರೋ ಬಟ್ಟೆಯನ್ನೇ ಆರಿಸಿ ಧರಿಸಿ ಕೊಳ್ಳಬೇಕು. ಲೂನಾರ್ ಹೊಸ ವರ್ಷಕ್ಕೆ ರೆಡ್ ಅತ್ಯಂತ ಪ್ರಶಸ್ತ ಬಣ್ಣ. ಈ ಬಣ್ಣದ ಬಟ್ಟೆ ಧರಿಸಿದರೆ ಲಕ್ ನಿಮ್ಮನ್ನು ಫಾಲೋ ಮಾಡುತ್ತೆ. ಅಲ್ಲದೇ ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ಕಾಪಾಡಲಿದೆ. ಕೆಂಪು ಕವರ್‌ನಲ್ಲಿ ದುಡ್ಡಿಟ್ಟರೆ ದುಷ್ಟ ದೃಷ್ಟಿಯಿಂದ ದೂರವಾಗುತ್ತೀರಿ. ಬ್ಲ್ಯಾಕ್ ಆ್ಯಂಡ್ ವೈಟ್ ಆವೈಡ್ ಮಾಡಿದರೆ ಒಳ್ಳೇದು.
ಉಳಿತಾಯ ಖಾಲಿ ಆಗದಿರಲಿ:
ಮೊದಲು ಮಾಡಬೇಕಾಗಿರುವುದು ಕಸವನ್ನು ಡಸ್ಟ್‌ಬಿನ್‌ನಲ್ಲಿಯೇ ಉಳಿಸಿಕೊಳ್ಳಬೇಕು. ಭಾರತದಲ್ಲಿ ರಾತ್ರಿ ಕಸ ಗುಡಿಸಬಾರದು, ಎಸೆಯಬಾರದೆಂಬ ನಂಬಿಕೆ ಇದೆ. ಅದರಂತೆ ನೆಲ ಸ್ವಚ್ಛಗೊಳಿಸಿ, ಕಸವನ್ನು ಎಸೆಯಬಾರದು. ಮೊದಲ 15 ದಿನಗಳು ಕಸವನ್ನು ಹೊರ ತೆಗೆದುಕೊಂಡು ಹೋಗುವುದೂ ಸಂಪತ್ತು, ಅದೃಷ್ಟವನ್ನು ಹೊರಗೆ ಎಸೆದಂತೆ ಎಂಬ ನಂಬಿಕೆ ಇದೆ.