
ಝೋ ಯುವಾನ್ ಲೈಂಗಿಕ ಬುದ್ಧಿಮತ್ತೆ ಎಂದು ಕರೆಯುವ ಖಾಸಗಿ ತರಬೇತಿ ಕೋರ್ಸ್‌ನ್ನು ಆರಂಭಿಸಿದರು. ತನ್ನನ್ನು ಚೀನೀ ಲೈಂಗಿಕ ಬುದ್ಧಿಮತ್ತೆ ಮಾಸ್ಟರ್ ಎಂದು ಬ್ರಾಂಡ್ ಮಾಡಿಕೊಳ್ಳುವ ಆಕೆ, ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಕೋರ್ಸ್‌ಗಳನ್ನು ಮಾರಾಟ ಮಾಡಿದ್ದರು.
ಅವರ ಪ್ರಮುಖ ಕೊಡುಗೆಗಳಲ್ಲಿ ಒಂದಾದ ‘ಪುರುಷರನ್ನು ವಶಪಡಿಸಿಕೊಳ್ಳುವ’ ಉನ್ನತ ಶ್ರೇಣಿಯ ಕೋರ್ಸ್‌ಗೆ ಆಕೆ 88,000 ಯುವಾನ್ (US$12,668)ಬೆಲೆ ನಿಗದಿ ಮಾಡಿದ್ದಳು. ಕೆಲವು ವರದಿಗಳ ಪ್ರಕಾರ ಆಕೆಯ ಕೆಲ ಕೋರ್ಸ್‌ಗಳ ಬೆಲೆಗಳು 100,000 ಯುವಾನ್‌ಗಳವರೆಗೆ ಇರುತ್ತಿದ್ದವು. ಚೀನಾದ ಮಾಧ್ಯಮಗಳ ಅಂದಾಜಿನ ಪ್ರಕಾರ ಅವರ ಕಾರ್ಯಕ್ರಮಗಳು ಹತ್ತಾರು ಸಾವಿರ ಮಹಿಳೆಯರನ್ನು ಆಕರ್ಷಿಸಿ 24ರಿಂದ 27 ಮಿಲಿಯನ್ ಯುವಾನ್ ಆದಾಯವನ್ನು (ಅಂದರೆ ಸುಮಾರು ₹31 ಕೋಟಿ) ಗಳಿಸಿದವು.