ಶಿರಾ : ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಹಾಗೂ ಕಟ್ಟಡಗಳಿಗೆ ಸುಣ್ಣ-ಬಣ್ಣದ ಜೊತೆ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಚಿಣ್ಣರ ಚಿತ್ತಾರ ಎನ್ನುವ ಅದ್ಭುತ ಕಾರ್ಯವನ್ನು ಮಾಡುತ್ತ ಬರುತ್ತಿರುವ ಜೀನಿ ಸಂಸ್ಥೆಯ ಈ ಸಮಾಜಮುಖಿ ಕಾರ್ಯ ಜನಮೆಚ್ಚುವಂತದ್ದು ಎಂದು ಯಲಿಯೂರು ಗ್ರಾ. ಪಂ. ಕಾರ್ಯದರ್ಶಿ ನಾಗರಾಜು ಹೇಳಿದರು.
ಯಲಿಯೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಸುಣ್ಣ – ಬಣ್ಣದ ಜೊತೆ ಗೋಡೆಗಳ ಮೇಲೆ ಮೂಡಿರುವ ಬಗೆ ಬಗೆಯ ಚಿತ್ರಗಳು ವೀಕ್ಷಣೆ ಮಾಡಿ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆ, ಅಂಗನವಾಡಿಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದು, ಬನ್ನಿ ಉಳಿಸಿ ಬೆಳೆಸೋಣ ಎನ್ನುವ ದ್ಯೇಯ ವಾಕ್ಯದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಆಹಾರ ಉತ್ಪನ್ನಗಳ ತಯಾರಿಕ ಹೆಸರಾಂತ ಜೀನಿ ಸಂಸ್ಥೆಯ ಸಂಸ್ಥಾಪಕ ದಿಲೀಪ್ ಕುಮಾರ್ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಸ್ಮರಣೀಯ,
ಸಮಾಜ ನಮಗೆ ನೀಡಿದ್ದಾದರು ಏನು ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಡುಗೆ ನೀಡಿದೆವು ಎನ್ನುವುದು ಅತಿ ಮುಖ್ಯ, ಇವರ ಈ ಉತ್ತಮವಾದ ಕೆಲಸ ಇತರರಿಗೂ ಸ್ಫೂರ್ತಿಯಾಗಲಿ ಎಂದರು.

ಯಲಿಯೂರು ಗ್ರಾ. ಪಂ. ಸದಸ್ಯ ಸತೀಶ್ ಕುಮಾರ್ ಮಾತನಾಡಿ : ಅಳಿವಿನ ಅಂಚಿನಲ್ಲಿರುವ ಅಂಗನವಾಡಿ ಕೇಂದ್ರಗಳತ್ತ ಚಿಣ್ಣರು ಹೆಚ್ಚು ಆಕರ್ಷಿತರಾಗಬೇಕೆಂದು ಪ್ರಥಮವಾಗಿ ಶಿರಾ ತಾಲೂಕಿನಿಂದ ಪ್ರಾರಂಭಗೊಂಡಿರುವ ಈ ಅಬ್ದುತ ಕಲ್ಪನೆಯ ಕಾರ್ಯಕ್ರಮ ಚಿಣ್ಣರ ಚಿತ್ತಾರ ತಾಲ್ಲೂಕಿನಾದ್ಯಂತ ಅಪಾರ ಜನಮೆಚ್ಚಿಗೆಗಳಿಸಿದೆ, ಎಲ್ಲಾ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜೀನಿ ಸಂಸ್ಥೆ ಮುಂದಾಗಿದ್ದು, ದುಡಿಮೆಯ ಒಂದು ಭಾಗವನ್ನು ಸಮಾಜಮುಖಿ ಸೇವೆಗೆ ಮೀಸಲಿಟ್ಟಿರುವ ಜೀನಿ ಸಂಸ್ಥೆಯ ಸಂಸ್ಥಾಪಕ ದಿಲೀಪ್ ಕುಮಾರ್ ರವರಿಗೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಹಾಗೂ ದೇಶದ ಜನತೆ ಜೀನಿ ಆಹಾರ ಸಂಸ್ಥೆ ತಯಾರಿಸುವ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಹೆಚ್ಚು ಖರೀದಿಸಿ ಇವರ ಸಮಾಜಮುಖಿ ಕಾರ್ಯಕ್ಕೆ ನಾವೆಲ್ಲರೂ ಸಹ ಕೈಜೋಡಿಸಿ ಇನ್ನಷ್ಟು ಉತ್ತಮವಾದ ಕೆಲಸಕ್ಕೆ ಅವರ ಕೈಗಳನ್ನು ಬಲಪಡಿಸೋಣ ಎಂದರು.
ಯಲಿಯೂರು ಗ್ರಾ. ಪಂ. ಸದಸ್ಯರಾದ ನವೀನ್ ವೈ.ಟಿ, ಆಶಾಲೋಹಿತ್, ಭಾಗ್ಯಮ್ಮ ರಂಗನಾಥ್,ಪಿಡಿಓ ತುಳಸಿರಾಮ್, ಎಸ್. ಡಿ. ಎ ವೆಂಕಟರಾಮು, ಅಂಗನವಾಡಿ ಕೇಂದ್ರ ಶಿಕ್ಷಕಿ ಈರಮ್ಮ, ಸಹಾಯಕಿ ಜ್ಯೋತಿ, ಗ್ರಾಮದ ಕದುರಪ್ಪ, ಲೋಕೇಶ್, ಕೃಷ್ಣಯ್ಯ, ಮೋಹನ್ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.