
ಇವೆಲ್ಲವುಗಳ ನಡುವೆ ಅವರ ಕುರಿತು ಸಕತ್ ಇಂಟರೆಸ್ಟಿಂಗ್ ಹಳೆಯ ವಿಡಿಯೋ ಒಂದು ಪುನಃ ವೈರಲ್ ಆಗುತ್ತದೆ. ಗೋಕುಲಂಲೋ ಸೀತಾ, ಸುಸ್ವಾಗತಮ್, ತಮ್ಮುಡು, ಬದ್ರಿ, ಖುಶಿ, ಜಲ್ಸಾ, ಗಬ್ಬರ್ ಸಿಂಗ್, ಸರ್ದಾರ್ ಗಬ್ಬರ್ ಸಿಂಗ್, ಕ್ಯಾಮೆರಾಮೆನ್ ಗಂಗತೋ ರಾಂಬಾಬು ಇತ್ಯಾದಿ ಚಿತ್ರಗಳಲ್ಲಿನ ತಮ್ಮ ನಟನೆಯಿಂದ ಹೆಸರುವಾಸಿಯಾಗಿದ್ದಾರೆ .ಭಾರತದ 2013 ರ ಫೋರ್ಬ್ಸ್ ಟಾಪ್ 100 ಖ್ಯಾತನಾಮರ ಪಟ್ಟಿಯಲ್ಲಿ ಅವರು 26 ನೇ ಸ್ಥಾನ ಪಡೆದ ಈ ನಟ, ನಟನೆಗೆ ಬರದಿದ್ದರೆ ನಕ್ಸಲ್ ಆಗಿಬಿಡ್ತಿದ್ರಾ ಎನ್ನುವ ಪ್ರಶ್ನೆ ಕಾಡಿದೆ. ಅದಕ್ಕೆ ಕಾರಣ, ಅವರ ಅಣ್ಣ , ನಟ ಚಿರಂಜೀವಿಯವರೇ (Chiranjeevi) ಇದನ್ನು ಹೇಳಿದ್ದು. ಹಳೆಯ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.