ಕೆವಿಎನ್ ಬೆಂಬಲಕ್ಕೆ ನಿಂತ ಚಿರಂಜೀವಿ; ದೊಡ್ಡ ಕರೆಕೊಟ್ಟ ನಟ

ಕೆವಿಎನ್ ಬೆಂಬಲಕ್ಕೆ ನಿಂತ ಚಿರಂಜೀವಿ; ದೊಡ್ಡ ಕರೆಕೊಟ್ಟ ನಟ


ಕೆವಿಎನ್ ಬೆಂಬಲಕ್ಕೆ ನಿಂತ ಚಿರಂಜೀವಿ; ದೊಡ್ಡ ಕರೆಕೊಟ್ಟ ನಟ

ದಳಪತಿ ವಿಜಯ್ ಅವರ ‘ಜನ ನಾಯಕನ್’ (ಜನ ನಾಯಗನ್) ಸಿನಿಮಾಗೆ ತೊಂದರೆ ಆಗುತ್ತಿದೆ. ಮೊದಲು ಸಿನಿಮಾ ರಿಲೀಸ್ ವಿಳಂಬವಾಯಿತು. ಆ ಬಳಿಕ ತಂಡದವರು ಕೋರ್ಟ್‌ಗೆ ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗ ಪುನರ್ ಸಮಿತಿಗೆ ಸಿನಿಮಾನ ಸಲ್ಲಿಕೆ ವಿಮರ್ಶೆ ಮಾಡಿದ್ದರೂ, ಅಲ್ಲಿ ಇನ್ನಷ್ಟೇ ವೀಕ್ಷಿಸಬೇಕಿದೆ. ಹೀಗಿರುವಾಗಲೇ ಚಿತ್ರದ ಪ್ರಮುಖ ದೃಶ್ಯಗಳು ಲೀಕ್ ಆಗಿದೆ. ಕೆಲವು ವರದಿ ಪ್ರಕಾರ ಇಡೀ ಚಿತ್ರವೇ ಲೀಕ್ ಆಗಿದೆ ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಚಿರಂಜೀವಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಕೆವಿಎನ್‌ಗೆ ಬೆಂಬಲ ಕೊಟ್ಟಿದ್ದಾರೆ.

ಚಿರಂಜೀವಿ ಅವರು ಚಿತ್ರರಂಗದ ಆಗು ಹೋಗುಗಳ ಬಗ್ಗೆ ಮಾತನಾಡುತ್ತಾರೆ.ಅವರು ಸದಾ ಚಿತ್ರರಂಗದ ಪರವಾಗಿ ನಿಲ್ಲುತ್ತಾ ಬಂದಿದ್ದಾರೆ. ಈಗ ಅವರು ಜನ ನಾಯಕನ್ ಸಿನಿಮಾ ಪರವಾಗಿ ಮಾತನಾಡಿದ್ದಾರೆ. ಈ ರೀತಿಯ ಅನ್ಯಾಯ ಯಾರಿಗೂ ಆಗಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ‘ಜನ ನಾಯಕನ್’ ದೃಶ್ಯ ಲೀಕ್: ದಳಪತಿ ವಿಜಯ್ ಸಿನಿಮಾಗೆ ಸಂಕಷ್ಟ

‘ಜನನಾಯಕನ್ ಸೋರಿಕೆ ಆಗಿದ್ದು ತುಂಬಾನೇ ಕಳವಳಕಾರಿ ವಿಷಯ. ಸಿನಿಮಾ ಎಂಬುದು ನಂಬಿಕೆ, ಪ್ರಯತ್ನ ಮತ್ತು ಅನೇಕರ ಕನಸಿನಿಂದ ಕೂಡಿದೆ. ಇಂತಹ ಘಟನೆಗಳು ಉದ್ಯಮದಲ್ಲಿರುವ ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ. ಸಿನಿಮಾಗೆ ಆದ ಹಾನಿಯನ್ನು ತಡೆಗಟ್ಟುವಲ್ಲಿ ಮತ್ತು ಅಪರಾಧಿಗಳನ್ನು ಶಿಕ್ಷಿಸುವಲ್ಲಿ ನಾವು ಕೆವಿಎನ್ ಪ್ರೊಡಕ್ಷನ್ಸ್ ಜೊತೆಗಿದ್ದೇವೆ. ಸಿನಿಮಾವನ್ನು ಗೌರವಿಸಲು ಮತ್ತು ರಕ್ಷಿಸಲು ನಾವೆಲ್ಲರೂ ನಮ್ಮ ಬೆಂಬಲವನ್ನು ನೀಡೋಣ. ಪೈರಸಿಯನ್ನು ನಾಶ ಮಾಡಿ, ಸಿನಿಮಾ ಉಳಿಸಿ’ ಎಂದು ಕರೆ ಕೊಟ್ಟಿದ್ದಾರೆ.

ಸಿನಿಮಾ ಲೀಕ್ ಪ್ರಕರಣ ಇಡೀ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ವಿಚಾರವಾಗಿ ಚಿತ್ರತಂಡ ಕಾನೂನು ಹೋರಾಟಕ್ಕೆ ಮುಂದಾಗುತ್ತಿದೆ. ಸಿನಿಮಾದ ದೃಶ್ಯಗಳನ್ನು ಶೇರ್ ಮಾಡಿ ಮತ್ತು ಡೌನ್‌ಲೋಡ್ ಮಾಡಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *