ಚಿತ್ರದುರ್ಗ, (ಡಿಸೆಂಬರ್ 25): ಜಿಲ್ಲೆಯ ಹಿರಿಯೂರು (ಹಿರಿಯೂರು) ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತದಲ್ಲಿ ಹಲವು ಸಾವು ನೋವು ಸಂಭವಿಸಿವೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟ್ಟಿದ್ದ ಸಿಬರ್ಡ್ ಬಸ್ ಗೆ ಲಾಡಿ ಬಂದು ಗುದ್ದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಸುತ್ತು ಕರಕಲಾಗಿದೆ. ದುರಂತದಲ್ಲಿ ಈವರೆಗೂ ಐವರ ಮೃತದೇಹಗಳು, ಕೆಲವು ದುರಂತ ಸಂಭವಿಸಿದೆ. ಆದರೆ, ಒಟ್ಟು ಎಷ್ಟು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂಬ ನಿಖರ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸ್, ಸೋಕೋ ತಂಡ ಪರಿಶೀಲನೆ ನಡೆಸಿದೆ. ಇನ್ನು ಈ ದುರಂತದಿಂದ ಹಲವು ಗ್ರೇಟ್ ಎಸ್ಕೇಪ್ ಆಗಿದ್ದು, ಪ್ರಾಣ ಉಳಿಸಿಕೊಂಡವರು ಒಂದೊಂದು ಕಥೆ ರೋಚಕವಾಗಿದೆ. ಹಾಗದ್ರೆ, ಯಾರೆಲ್ಲಾ ಹೇಗೆ ಜೀವ ಉಳಿಸಿಕೊಂಡಿದ್ದಾರೆ ಎನ್ನುವುದನ್ನು ನೋಡಿ.