Chitradurga: ಅಧ್ಯಾಪಕನೊಂದಿಗೆ ಸಂಬಂಧ ಅಪಪ್ರಚಾರ; ನೇಣಿಗೆ ಶರಣಾದ BAMS ವಿದ್ಯಾರ್ಥಿನಿ ನಿಖಿತಾ

Chitradurga: ಅಧ್ಯಾಪಕನೊಂದಿಗೆ ಸಂಬಂಧ ಅಪಪ್ರಚಾರ; ನೇಣಿಗೆ ಶರಣಾದ BAMS ವಿದ್ಯಾರ್ಥಿನಿ ನಿಖಿತಾ

Chitradurga: ಅಧ್ಯಾಪಕನೊಂದಿಗೆ ಸಂಬಂಧ ಅಪಪ್ರಚಾರ; ನೇಣಿಗೆ ಶರಣಾದ BAMS ವಿದ್ಯಾರ್ಥಿನಿ ನಿಖಿತಾ

ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಬಿಎಎಂಎಸ್ ವಿದ್ಯಾರ್ಥಿನಿ ನಿಖಿತಾ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ತನ್ನ ಸಾವಿಗೆ ಅಧ್ಯಾಪಕ ಡಾ. ರಾಜು ಮತ್ತು ಕೆಲ ವಿದ್ಯಾರ್ಥಿನಿಯರು ಕಾರಣ ಎಂದು ಉಲ್ಲೇಖಿಸಿದ್ದಾರೆ.

ಬಿಎಎಂಎಸ್ ವಿದ್ಯಾರ್ಥಿನಿ 23 ವರ್ಷದ ನಿಖಿತಾ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್‌ನಲ್ಲಿರುವ ಮನೆಯಲ್ಲಿ ನಿಖಿತಾ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.

ಮೃತ ನಿಖಿತಾ ಮಲ್ಲಾಡಿಹಳ್ಳಿಯ ಮೆಡಿಕಲ್ ಕಾಲೇಜಿನಲ್ಲಿ ಬಿಎಎಂಎಸ್ ಓದುತ್ತಿದ್ದರು. ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿರುವ ನಿಖಿತಾ, ತನ್ನ ಸಾವಿಗೆ ಕಾರಣವಾಗಿರುವ ಕಾನೂನುಕ್ರಮ ಜರಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಅಧ್ಯಾಪಕ ಮತ್ತು ಕೆಲ ವಿದ್ಯಾರ್ಥಿನಿಯರ ಹೆಸರನ್ನು ನಿಖಿತಾ ಉಲ್ಲೇಖಿಸಿದ್ದಾರೆ.

ಅಧ್ಯಾಪಕ ಡಾಕ್ಟರ್ ರಾಜು, ಪತ್ನಿ ನಿಶಾ ಮತ್ತು ಕೆಲ ವಿದ್ಯಾರ್ಥಿಗಳ ವಿರುದ್ಧ ಹೆಸರುಗಳನ್ನು ನಿಖಿತಾ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಅಧ್ಯಾಪಕ ರಾಜು ಜೊತೆ ನಿಖಿತಾ ಅವರಿಗೆ ಸಂಬಂಧ ಕಲ್ಪಿಸಿ ಕೆಲವರು ಅಪಪ್ರಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಅಪಪ್ರಚಾರದಿಂದ ನೊಂದ ನಿಖಿತಾ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಡೆತ್‌ನೋಟ್ ವಶಕ್ಕೆ ಪಡೆದುಕೊಂಡಿದ್ದು, ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಧ್ಯಾಪಕ ರಾಜು, ಪತ್ನಿ ನಿಶಾ, ಕೆಲ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂಬಿಬಿಎಸ್‌ ವಿದ್ಯಾರ್ಥಿಯೊಬ್ಬ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಹಾರಿ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಗರದ ಅತ್ತಾವರ ಸ್ಟರಕ್ ರಸ್ತೆಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಸಾರ್ಥಕ್ ಮೌರ್ಯ (23) ಮೃತರು. ನಗರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 4ನೇ ವರ್ಷದ ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದ ಸಾರ್ಥಕ್‌ ಅವರು ಸೋಮವಾರ ಮಧ್ಯಾಹ್ನ ತನ್ನ ಗೆಳತಿ ಉಳಿದುಕೊಂಡಿದ್ದ ಅತ್ತಾವರದ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು.

ಅಲ್ಲಿನ ಸೆಕ್ಯುರಿಟಿ ಕೌಂಟರ್‌ನಲ್ಲಿ ಗೆಳತಿಯ ಮನೆಗೆ ಹೋಗುವ ಬಗ್ಗೆ ಮಾಹಿತಿ ನಮೂದಿಸಿ, ಆಕೆ ಉಳಿದುಕೊಂಡಿದ್ದ 12ನೇ ಮಹಡಿ ಕಡೆಗೆ ತೆರಳಿದ್ದಾರೆ. ಆದರೆ ಆಕೆಯ ಮನೆಗೆ ಹೋಗುವ ಬದಲು ವಿರುದ್ಧ ದಿಕ್ಕಿಗೆ ತೆರಳಿ ಕೆಳಗೆ ಹಾರಿದ್ದಾರೆ. ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

Source link

Leave a Reply

Your email address will not be published. Required fields are marked *