ಚಿತ್ರದುರ್ಗ, ಫೆಬ್ರವರಿ 27: ಪೊಲೀಸ್ ಸಮ್ಮುಖದಲ್ಲಿ ಪ್ರೇಯಸಿಗೆ ಶಿಕ್ಷಕ (ಶಿಕ್ಷಕ) ತಾಳಿ ಕಟ್ಟಿರುವಂತಹ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಪೊಲೀಸ್ ಠಾಣೆ ಬಳಿ ದೇವಸ್ಥಾನದಲ್ಲಿ ನಡೆದಿದೆ. 8 ವರ್ಷದಿಂದ ಪ್ರೀತಿಸಿ ಬಳಿಕ ಶಿಕ್ಷಕ ಹರೀಶ್ ವಂಚನೆಗೆ ಯತ್ನಿಸಿದ ಆರೋಪ ಕೇಳಿಬಂದಿತ್ತು. ಹರೀಶ್ ವಿರುದ್ಧ ಭರಮಸಾಗರ ಠಾಣೆಗೆ ಕಾವ್ಯಾ ದೂರು ನೀಡಿದ್ದರು. ಹೀಗಾಗಿ ಪೊಲೀಸರ ಸಮ್ಮುಖದಲ್ಲಿ ಚರ್ಚೆ ವೇಳೆ ಒಪ್ಪಿದ ಹಿನ್ನಲೆ ಇಬ್ಬರಿಗೂ ಮದುವೆ ಮಾಡಲಾಗಿತ್ತು.
ನಡೆದಿದ್ದೇನು?
ಚಿತ್ರದುರ್ಗ ತಾಲೂಕಿನ ತಣಿಗೆಹಳ್ಳಿಯ ಹರೀಶ್ ಪರಶುರಾಂಪುರ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಇಸಾಮುದ್ರ ಗೊಲ್ಲರಹಟ್ಟಿ ಕಾವ್ಯಾ ಮತ್ತು ಹರೀಶ್ ವರ್ಷವಾಗಿದ್ದರೆ 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ನಿಶ್ಚಿತಾರ್ಥ ಕೂಡ ಆಗಿದೆ.
ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಚಾಕು ಇರಿತ: ಸಿಡಿದೆದ್ದ ಹಿಂದೂ ಸಂಘಟನೆಗಳು, ಚಿತ್ರದುರ್ಗ ರಣಾಂಗಣ
ಈ ವರದಕ್ಷಿಣೆ ಆಸೆಗೆ ಹರೀಶ್ ಬೇರೆ ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದರು. ಹೀಗಾಗಿ ಹರೀಶ್ ವಿರುದ್ಧ ಭರಮಸಾಗರ ಠಾಣೆಗೆ ಕಾವ್ಯಾ ದೂರು ನೀಡಿದ್ದಾರೆ. ಹರೀಶ್ ವಿರುದ್ಧ ಕಾವ್ಯಾ ಮತ್ತು ಆವರಣ ಕಾನೂನು ಕ್ರಮಕ್ಕೆ ಇದ್ದರು. ಇನ್ನು ಶಿಕ್ಷಕ ಹರೀಶ್‌ನನ್ನು ಠಾಣೆಗೆ ಕರೆಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಸಮ್ಮುಖದಲ್ಲಿ ಚರ್ಚೆ ವೇಳೆ ಕಾವ್ಯಾರನ್ನು ವಿವಾಹವಾಗಲು ಹರೀಶ್ ಒಪ್ಪಿದ್ದು, ಅಲ್ಲೇ ಪೊಲೀಸ್ ಠಾಣೆ ಬಳಿ ದೇಗುಲದಲ್ಲಿ ಪೊಲೀಸರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ.
ಪೋಷಕರ ವಿರೋಧದ ಆತಂಕ: ರಕ್ಷಣೆ ಕೋರಿ ಎಸ್ಪಿ ಕಚೇರಿ ಮೆಟ್ಟಿಲೇರಿದ ನವಜೋಡಿ
ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರ ವಿರೋಧದ ಆತಂಕ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ನವಜೋಡಿ ಆಗಮಿಸಿದ ಘಟನೆ ನಡೆದಿದೆ. ಮನೆಯವರು ಎದುರಿಸುವ ಆತಂಕವಿದೆ, ಹೀಗಾಗಿ ರಕ್ಷಣೆ ಬೇಕು ಅಂತ ಚಿನ್ಮಯಿ ಮತ್ತು ಬಸವರಾಜ್ ಮೇಟಿ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆ ವೇಳೆ ಬೆಚ್ಚಿಬಿದ್ದ ಖಾಕಿ: ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿ ಮಾದಕ ದ್ರವ್ಯ ಜಾಲ ಬಯಲು
ನವಜೋಡಿ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ನಿವಾಸಿಗಳು. ಚಿನ್ಮಯಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಬಸವರಾಜ್ ಮೇಟಿ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ. ಹುಬ್ಬಳ್ಳಿಯಲ್ಲಿ ಜನವರಿ 14ರಂದು ಮದುವೆ ಆಗಿದ್ದಾರೆ. ಇದೀಗ ಚಿನ್ಮಯಿ ಕುಟುಂಬದವರು ವಿರೋಧ ಮಾಡುವ ಆತಂಕ ಹಿನ್ನಲೆಯಲ್ಲಿ ಕೊಪ್ಪಳ ಎಸ್ಪಿ ಕಚೇರಿಗೆ ಬಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.