ಚೋರ್ಲಾ ಘಾಟ್ ಬಳಿ 400 ಕೋಟಿ ದರೋಡೆಗಿಲ್ಲ ಪ್ರತ್ಯಕ್ಷದರ್ಶಿಗಳು: ಎಸ್​​ಐಟಿಗೆ ಸವಾಲಾದ ತನಿಖೆ!

ಚೋರ್ಲಾ ಘಾಟ್ ಬಳಿ 400 ಕೋಟಿ  ದರೋಡೆಗಿಲ್ಲ ಪ್ರತ್ಯಕ್ಷದರ್ಶಿಗಳು: ಎಸ್​​ಐಟಿಗೆ ಸವಾಲಾದ ತನಿಖೆ!


ಚೋರ್ಲಾ ಘಾಟ್ ಬಳಿ 400 ಕೋಟಿ  ದರೋಡೆಗಿಲ್ಲ ಪ್ರತ್ಯಕ್ಷದರ್ಶಿಗಳು: ಎಸ್​​ಐಟಿಗೆ ಸವಾಲಾದ ತನಿಖೆ!

ಬೆಳಗಾವಿ, ಜನವರಿ 28: ಚೋರ್ಲಾ ಘಾಟ್ ಬಳಿ 400 ಕೋಟಿ ದರೋಡೆ ಪ್ರಕರಣ ಸಂಬಂಧ ಪ್ರತ್ಯಕ್ಷದರ್ಶಿಗಳಿಗಾಗಿ ಮೂರು ರಾಜ್ಯಗಳ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಹೋಗ್ತಿದ್ದ ಅಮಾನ್ಯಗೊಂಡ 2000 ಮುಖ ಬೆಲೆಯ 400 ಕೋಟಿ ಹಣ ತುಂಬಿದ್ದ ಕಂಟೇನರ್ ಹೈಜಾಕ್ ಎನ್ನಲಾಗಿದ್ದರೂ ಆ ಬಗ್ಗೆ ಸಾಕ್ಷಿಗಳೇ ಪೊಲೀಸರಿಗೆ ಸಿಗುತ್ತಿಲ್ಲ. ಸಾಲು ಸಾಲು ಪ್ರಶ್ನೆಗಳು ತನಿಖೆ ವೇಳೆ ಎದುರಾಗಿದ್ದು, ಇವುಗಳಿಗೆ ಉತ್ತರ ಹುಡುಕುವುದೇ ಈಗ ಖಾಕಿಗೆ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.

ಪ್ರಕರಣ ಸಂಬಂಧ ಉದ್ಭವಿಸಿರೋ ಪ್ರಶ್ನೆಗಳೇನು?

  • ಗೋವಾ ರಾಜ್ಯದ ಯಾವ ಸ್ಥಳದಲ್ಲಿ ಕಂಟೇನರ್ ಗಳಿಗೆ ಹಣ ತುಂಬಲಾಯ್ತು?
  • ಕಂಟೇನರ್ ಗೆ ಹಣ ತುಂಬಿದ್ದನ್ನು ಕಣ್ಣಾರೆ ನೋಡುವವರು ಯಾರು?
  • ಯಾವ ಮಾರ್ಗವಾಗಿ ಆ ಕಂಟೇನರ್‌ಗಳು ಚೋರ್ಲಾ ಘಾಟ್ ಪ್ರವೇಶಿಸಿದ್ದಾರೆ?
  • ಚೋರ್ಲಾ ಘಾಟ್‌ನ ಯಾವ ಸ್ಥಳದಲ್ಲಿ ಹಣ ತುಂಬಿದ್ದ ಕಂಟೇನರ್ ಹೈಜಾಕ್ ಆಗಿವೆ?
  • ಆ ಕಂಟೇನರ್ ವಾಹನದ ನಂಬರ್ ಏನು? ಅವರ ಮಾಲೀಕ ಯಾರು?

ಇದನ್ನೂ ಓದಿ: 400 ಕೋಟಿ ರಾಜಧಾನಿ ರಾಜಕಾರಣಿಯಾ? ದೇಶದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್!

ಈ ಪ್ರಕರಣ ಸಂಬಂಧ ಕಿಡ್ನಾಪ್ ಆಗಿದ್ದ ಸಂದೀಪ್ ಪಾಟೀಲ್ ಕೂಡ ದರೋಡೆಗೆ ಕಣ್ಣಾರೆ ನೋಡಿಲ್ಲ.ಕಿಡ್ನಾಪ್ ಮಾಡಿದವರು ಹೇಳಿದ್ದನ್ನೇ ದೂರಿದ್ದಾರೆ. ಈ ನಡುವೆ ಕಿಂಗ್‌ಪಿನ್ ಕಿಶೋರ್ ಸಾಳ್ವೆ ಬಗ್ಗೆ ಸಾಕ್ಷಿ ಎಸ್‌ಐಟಿ ಸಂಗ್ರಹಿಸಿದ್ದು, ಮತ್ತೊಂದೆಡೆ ಅರೆಸ್ಟ್ ಆಗಿರೋ ಏಳು ಜನ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದೆ. ಹೀಗಿದ್ದರೂ ಮಹಾರಾಷ್ಟ್ರ ಎಸ್ಐಟಿಗೆ ಸಂಬಂಧ ಐ ವಿಟ್ನೆಸ್ ಇನ್ನೂ ಸಿಕ್ಕಿಲ್ಲ.

ದರೋಡೆ ಪ್ರಕರಣದಲ್ಲಿ ರಾಜಕೀಯ ನಾಯಕನೋರ್ವನ ಹೆಸರೂ ತಳಕು ಹಾಕಿಕೊಂಡಿದ್ದು, ವೈರಲ್ ಆಗಿರೋ ಸಂಭಾಷಣೆ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದ ಎಸ್‌ಐಟಿ ಮುಖ್ಯಸ್ಥ ಆದಿತ್ಯ ಮೀರಖೇಲಕರ್ ನೇತೃತ್ವದಲ್ಲಿ ತನಿಖೆಯಲ್ಲಿ ಗುಜರಾತನ ದೊಡ್ಡ ರಾಜಕಾರಣಿ ಯಾರು? ಗುಜರಾತ್ ನ ಅಹಮದಾಬಾದ್ ಮೂಲದ ಆಶ್ರಮ ಯಾವುದು? ಹಣ ಎಲ್ಲಿದೆ? ಆಶ್ರಮದಲ್ಲಿಯೇ ಬ್ಲಾಕ್ ಆಯಂಡ್ ವೈಟ್ ದಂಧೆ ಮಾಡುತ್ತಿದ್ದಾರಾ? ಎಂಬ ಹಲವು ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *