Headlines

ಬೇರೆಯವರ ಪತಿಯ ಮೇಲೆ ಬಿತ್ತು ಈ ಸ್ಟಾರ್​ ನಟಿಯರ ಕಣ್ಣು: ಟಾಪ್​ ಲಿಸ್ಟ್​ನಲ್ಲಿ ಯಾರಿದ್ದಾರೆ ನೋಡಿ!

ಬೇರೆಯವರ ಪತಿಯ ಮೇಲೆ ಬಿತ್ತು ಈ ಸ್ಟಾರ್​ ನಟಿಯರ ಕಣ್ಣು: ಟಾಪ್​ ಲಿಸ್ಟ್​ನಲ್ಲಿ ಯಾರಿದ್ದಾರೆ ನೋಡಿ!

ಬೇರೆಯವರ ಪತಿಯ ಮೇಲೆ ಬಿತ್ತು ಈ ಸ್ಟಾರ್​ ನಟಿಯರ ಕಣ್ಣು: ಟಾಪ್​ ಲಿಸ್ಟ್​ನಲ್ಲಿ ಯಾರಿದ್ದಾರೆ ನೋಡಿ!
ಸಿನಿಮಾ ರಂಗದಲ್ಲಿ ಸಂಬಂಧಗಳು ವಿಚಿತ್ರ ತಿರುವುಗಳನ್ನು ಪಡೆಯುತ್ತವೆ. ನಯನತಾರಾ, ಕಂಗನಾ, ಹನ್ಸಿಕಾ ಸೇರಿದಂತೆ ಹಾಲಿವುಡ್‌ನ ಏಂಜಲೀನಾ ಜೋಲೀ, ಬ್ರಿಟ್ನಿ ಸ್ಪಿಯರ್ಸ್‌ರಂತಹ ಖ್ಯಾತ ನಟಿಯರು ಬೇರೊಬ್ಬರ ಪತಿಯೊಂದಿಗೆ ಸಂಬಂಧ ಹೊಂದುವ ಮೂಲಕ ವಿವಾದಕ್ಕೆ ಸಿಲುಕಿದ ಘಟನೆಗಳನ್ನು ಈ ಲೇಖನ ವಿವರಿಸುತ್ತದೆ.
ರಿಲೇಷನ್ನು, ಡೇಟಿಂಗ್​, ಬ್ರೇಕಪ್​ ಎನ್ನುವ ಶಬ್ದಗಳೆಲ್ಲಾ ಸಿನಿಮಾ ಕ್ಷೇತ್ರದಲ್ಲಿ ಚಾಲ್ತಿಯಲ್ಲಿ ಇದ್ದು ಬಹಳ ದಶಕಗಳೇ ಕಳೆದು ಹೋಗಿವೆ. ಇದೇ ಟ್ರೆಂಡಿಂಗ್​ ಈಗ ಜನಸಾಮಾನ್ಯರ ಜೀವನದಲ್ಲಿಯೂ ಮಾಮೂಲು ಎನ್ನಿಸುವಷ್ಟರ ಮಟ್ಟಿಗೆ ಸಂಬಂಧಗಳ ಬೆಲೆ ಕುಸಿದು ಹೋಗಿವೆ. ಅದರಲ್ಲಿಯೂ ದಾಂಪತ್ಯ ಜೀವನ, ಅಕ್ರಮ ಸಂಬಂಧ, ಬೇರೊಬ್ಬರ ಪತ್ನಿಯನ್ನೋ, ಪತಿಯನ್ನೋ ಮದುವೆಯಾಗುವುದು, ಸಂಬಂಧ ಹೊಂದುವ ಸುದ್ದಿಗಳು ಆಗಾಗ್ಗೆ ಬರುತ್ತಲೇ ಇರುತ್ತದೆ. ಆದರೆ ಸೆಲೆಬ್ರಿಟಿಗಳ ಲೈಫ್​ನಲ್ಲಿ ಇದು ಸ್ವಲ್ಪ ಹೆಚ್ಚು ಸದ್ದು ಮಾಡುವುದು ಇದೆ.

ಅದೇ ರೀತಿ ಕೆಲವು ಸ್ಟಾರ್​ ನಟಿಯರ ವಿಷಯವನ್ನು ಇಲ್ಲಿ ಹೇಳಲಾಗಿದೆ. ದಕ್ಷಿಣ ಭಾರತದಿಂದ ಆರಂಭಿಸುವುದಾದರೆ, ನಟಿ ನಯನತಾರಾ (Nayanatara) 2022 ರಲ್ಲಿ ವಿಘ್ನೇಶ್ ಶಿವನ್ (Vighnesh Shivan) ಅವರನ್ನು ವಿವಾಹವಾದರು. ಆದರೆ ಅದಕ್ಕೂ ಕೆಲವು ವರ್ಷಗಳ ಹಿಂದೆ ಅವರು ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ಪ್ರಭುದೇವ ಅವರೊಂದಿಗೆ ಪ್ರಣಯ ಸಂಬಂಧವನ್ನು ಹೊಂದಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಇಬ್ಬರ ಸಂಬಂಧ ಇತ್ತು. ಈ ವೇಳೆ ಪ್ರಭುದೇವ ಅವರು ನಯನತಾರಾ ಅವರಿಗಾಗಿ ಪತ್ನಿ ರಮ್ಲತಾ ಅವರನ್ನು ಬಿಟ್ಟಿದ್ದರು ಎನ್ನಲಾಗಿದೆ. ಆ ವೇಳೆ ರಮ್ಲತಾ ಅವರು ರಂಪಾಟ ಮಾಡಿ, ನಯನತಾರಾ ತಮ್ಮ ಪತಿಯನ್ನು ಕದ್ದಿರುವುದಾಗಿ ಹೇಳಿಕೊಂಡಿದ್ದರು.

ಬಾಲಿವುಡ್ ನಟಿ ಕಂಗನಾ ರಣಾವತ್​ (Kangana Ranawat) ಈಗ ಸಂಸದೆಯೂ ಆಗಿದ್ದಾರೆ. ಜೊತೆಗೆ ಅವಿವಾಹಿತರಾಗಿಯೇ ಉಳಿದಿದ್ದಾರೆ. ಈಕೆಯ ಹೆಸರು ಕೆಲವೊಬ್ಬರ ಜೊತೆ ಥಳಕು ಹಾಕಿಕೊಂಡಿದೆ. ಆ ಪೈಕಿ ಆದಿತ್ಯ ಪಾಂಚೋಲಿ (Adithya Pancholi) ಕೂಡ ಒಬ್ಬರು. ಆದರೆ ಆದಿತ್ಯ ಪಂಚೋಲಿ ಅವರಿಗೆ ಮದುವೆಯಾಗಿದೆ. ಕಂಗನಾ ತಮ್ಮ ಪತಿಯನ್ನು ಕದ್ದಿರುವುದಾಗಿ ಆದಿತ್ಯ ಪಂಚೋಲಿಯವರ ಪತ್ನಿ ಜರೀನಾ ವಹಾಬ್ ಹೇಳಿಕೊಂಡಿದ್ದರು. ಆದಿತ್ಯ ಅವರ ಜೊತೆ ಕಂಗನಾ ಸುಮಾರು ಒಂದೂವರೆ ವರ್ಷ ಡೇಟಿಂಗ್​ನಲ್ಲಿದ್ದು. ತಾವಿಬ್ಬರೂ ಒಟ್ಟಿಗೇ ದಂಪತಿಯಂತೆ ಬದುಕಿದ್ದನ್ನು ಖುದ್ದು ಆದಿತ್ಯ ಪಂಚೋಲಿಯವರೂ ಒಪ್ಪಿಕೊಂಡಿದ್ದಾರೆ. ಈ ಮೂಲಕ ಕಂಗನಾ ಬೇರೊಬ್ಬರ ಪತಿಯನ್ನು ಕದ್ದಿರುವ ಆರೋಪ ಎದುರಿಸುತ್ತಿದ್ದಾರೆ. ಬಳಿಕ ಹೃತಿಕ್​ ರೋಷನ್​ ಅವರನ್ನೂ ನಟಿ ಮದುವೆಯಾಗುತ್ತಾರೆ ಎನ್ನಲಾಗಿತ್ತು. ಆಗಲೂ ಹೃತಿಕ್​ ಅವರಿಗೆ ಮದುವೆಯಾಗಿತ್ತು.

ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಬೇರೊಬ್ಬರ ಗಂಡನನ್ನು ಕದ್ದಿದ್ದಾರೆ ಎಂಬ ಆರೋಪ ಕಳೆದ ವರ್ಷ ಭಾರಿ ಕೇಳಿಬಂದಿತ್ತು. ಹಂಸಿಕಾ ಮೋಟ್ವಾನಿ ಪತಿ ಸೊಹೈಲ್ ಖತುರಿಯಾ ಹಂಸಿಕಾ ಅವರ ಆತ್ಮೀಯ ಸ್ನೇಹಿತೆ ರಿಂಕಿಯ ಪತಿ. ಈ ಮೂಲಕ ಹಂಸಿಕೆ ತನ್ನ ಆತ್ಮೀಯ ಸ್ನೇಹಿತೆಯ ಪತಿಯನ್ನು ಕದ್ದಿದ್ದಾರೆ ಎಂಬ ಆರೋಪವಿದೆ. ಆದರೆ, ಇದನ್ನು ನಟಿ ಅಲ್ಲಗಳೆಯುತ್ತಲೇ ಬಂದಿದ್ದಾರೆ ಅನ್ನಿ.

ಇನ್ನು ಹಾಲಿವುಡ್​ ವಿಷಯಕ್ಕೆ ಬರುವುದಾದರೆ, ಹಾಲಿವುಡ್​ನ ಖ್ಯಾತ ತಾರೆ ಏಂಜಲೀನಾ ಜೋಲೀ (Angelina Jolie) 2014 ರಲ್ಲಿ ಬ್ರಾಡ್ ಪಿಟ್ ಅವರನ್ನು ವಿವಾಹವಾದರು. ಅಸಲಿಗೆ ಬ್ರಾಡ್​ ಪಿಟ್​ ಅವರು ಹಾಲಿವುಡ್ ನಟಿ ಜೆನ್ನಿಫರ್ ಅನಿಸ್ಟನ್ ಅವರ ಪತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಜೆನ್ನಿಫರ್​ ಅವರ ಪತಿಯನ್ನು ಕದ್ದ ಆರೋಪ ಏಂಜಲೀನಾ ಅವರ ಮೇಲಿದೆ. ಇಷ್ಟೆಲ್ಲಾ ಗಲಾಟೆಯಾದ ಮೇಲೆ ಬ್ರಾಡ್​ ಪಿಟ್​ ಅವರು ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟರು.

ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ (Britney Spears) ಮೂರು ಬಾರಿ ಮದುವೆಯಾಗಿದ್ದಾರೆ. 2004 ರಲ್ಲಿ ಕೆವಿನ್ ಫೆಡೆರ್ಲೈನ್ ​​ಅವರೊಂದಿಗೆ ಬ್ರಿಟ್ನಿ ಅವರ ಎರಡನೇ ಮದುವೆಯಾಯಿತು. ಆದರೆ ಕೆವಿನ್​ ಅವರಿಗೆ ಅದಾಗಲೇ ಮದುವೆಯಾಗಿತ್ತು. ನಟಿ ಶಾರ್ ಜಾಕ್ಸನ್ ಅವರು ಗರ್ಭಿಣಿಯಾಗಿದ್ದಾಗ ಅವರನ್ನು ಬಿಟ್ಟು ಕೆವಿನ್​ ಬ್ರಿಟ್ನಿ ಜೊತೆ ಮದುವೆಯಾಗಿದ್ದರು. ಬ್ರಿಟ್ನಿ ತಮ್ಮ ಪತಿಯನ್ನು ಕದ್ದಿರುವುದಾಗಿ ನಟಿ ಶಾರ್​ ಜಾಕ್ಸನ್​ ಆರೋಪಿಸಿದ್ದರು. ಹೀಗೆ ಬೇರೊಬ್ಬರ ಪತಿಯನ್ನು ಕದ್ದು ಮದುವೆಯಾದರೂ ಈ ದಂಪತಿ ಹೆಚ್ಚು ಕಾಲ ಒಟ್ಟಿಗೇ ಇರಲಿಲ್ಲ. ಇವರಿಬ್ಬರು 2007 ರಲ್ಲಿ ವಿಚ್ಛೇದನ (Divorce) ಪಡೆದುಕೊಂಡರು.

Source link

Leave a Reply

Your email address will not be published. Required fields are marked *