ಬೆಂಗಳೂರು, ಫೆಬ್ರವರಿ 25): ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ (ಸಿಜೆ ರಾಯ್)ಆತ್ಮಹತ್ಯೆಗೆ ಹವಾಲಾ ಹಣ(ಹವಾಲಾ ವ್ಯವಹಾರ) ಕಾರಣ ಈ ಹಿಂದೆ ಬಟಾಬಯಾ ಮಾಡಲಾಗಿದೆ. ಆದರೆ ಆ ಹವಳ ಹಣ ಎಷ್ಟು ಎಂದು ಗೊತ್ತಿರಲಿಲ್ಲ. ಸದ್ಯ Tv9ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸಿಜೆ ರಾಯ್ ಆತ್ಮಹತ್ಯೆಗೆ ಬರೋಬ್ಬರಿ 500 ಕೋಟಿ ರೂಪಾಯಿ ಹವಲಾ ಹಣ ಕಾರಣ ಎಂದು ಹೇಳಲಾಗಿದೆ. 500 ಕೋಟಿ ರೂ. ಹವಾಲಾ ವ್ಯವಹಾರದ ಬಗ್ಗೆ ಲೆಕ್ಕ ಕೊಡಲಾಗದ ಸಿಜೆ ರಾಯರು ಸಂಕಷ್ಟಕ್ಕೆ ಸಿಲುಕಿದ್ದರು. ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿ ಹೋಗಿದ್ದು. ಇದರಿಂದ ಪ್ರಾಣಕಳೆದುಕೊಂಡಿದ್ದಾರೆ.
500 ಕೋಟಿ ಮತ್ತು ಸಿ.ಜೆ.ರಾಯ
ಸಿ.ಜೆ.ರಾಯರ ವ್ಯವಹಾರದಲ್ಲಿ 500 ಕೋಟಿ ರೂ. ಮಿಸ್ ಮ್ಯಾಚ್ ಆಗಿದ್ದು, ಕೇರಳ, ಕೊಚ್ಚಿ ಪ್ರಾಜೆಕ್ಟ್ ಬೆನ್ನಲ್ಲೇ ಡಿಸೆಂಬರ್ ನಲ್ಲೇ ತನಿಖೆ ನಡೆಸುತ್ತಿದ್ದ ಐಟಿ ಇಲಾಖೆ 500 ಕೋಟಿ ಲೆಕ್ಕ ಕೇಳಿತ್ತು. ಇದರಿಂದ ರಾಯರು ದುಬೈನಿಂದ ಭಾರತಕ್ಕೆ ವಾಪಸ್ ಬಾರದೆ ಮೀನಾಮೇಷ ಎನಿಸಿಕೊಳ್ಳುತ್ತಾರೆ. ಅಲ್ಲದ ಐಟಿ ಅಧಿಕಾರಿಗಳು ಸಂಪರ್ಕಕ್ಕೆ ಸಿಗದೆ ಐಟಿ ರೇಡ್ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗೂ ಭಾರತಕ್ಕೆ ಬಂದ ಸಿಜೆ ರಾಯರಿಗೆ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಹೀಗಾಗಿಯೇ ತಮ್ಮ ಪಾರ್ಟ್ನರ್, ಸಿಎ ರಾಯ್ ಕೋರ್ಟ್ ಹಾಕಿದ್ದಕ್ಕಾಗಿ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು. ಕೊನೆಗೆ 500 ಕೋಟಿ ರೂಪಾಯಿ ಮೂಲ ನೀಡಲಾಗದೆ, ತಮಗೆ ಬಂದಿದ್ದ ಹವಾಲಾ ಹಣದ ಲೆಕ್ಕ ಕೊಡದೆ ಸಿ.ಜೆ.ರಾಯರು ಪರದಾಡಿದ್ದರು.
ಇದನ್ನೂ ಓದಿ: ಸಿಜೆ ರಾಯರ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!
ಹೀಗೆ 500 ಕೋಟಿ ರೂ. ಹವಾಲಾ ವ್ಯವಹಾರದ ಬಗ್ಹೆ ಲೆಕ್ಕ ಕೊಡಲಾಗದ ಸಿಜೆ ರಾಯರಿಗೆ ಅತ್ತ ದಾರಿ ಇತ್ತ ಪುಲಿ ಅನ್ನೋ ಪರಿಸ್ಥಿತಿ ಇದೆ. ಇದರಿಂದ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆದರೂ ಆತ್ಮಹತ್ಯೆ ದಿನ ಐಟಿಗೆ ಉತ್ತರಿಸುವುದಾಗಿ ಹೇಳಿದ್ದ ರಾಯ, ಅಂದು ಮಾನಸಿಕ ಖಿನ್ನತೆಯ ಟ್ಯಾಬ್ಲೆಟ್ ಕೂಡ ಸೇವಿಸಲಿಲ್ಲ. ಮಾತ್ರೆ ಸೇವಿಸದೆ ಇದ್ದಿದ್ದು ಖಿನ್ನತೆಯ ತೀವ್ರತೆಗೆ ಕಾರಣವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಸದ್ಯ ಇಂತಹ ವ್ಯವಹಾರದ ಬಗ್ಗೆ ಸಿಜೆ ರಾಯ್, ಕೇರಳ ಮೂಲದ ಬ್ಯುಸಿನೆಸ್ ಪಾರ್ಟನರ್, ಐಟಿ ಅಧಿಕಾರಿಗಳು & ಸಿಜೆ ರಾಯ್ ಸಿಎಗೆ ಗೊತ್ತಿರೋದು 500 ಕೋಟಿ ರೂ. ಕುತೂಹಲ ಜೀವಂತವಾಗಿಸಿದೆ.
ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ರಾ ರಾಯ್?
ಸಿಜೆ ರಾಯರು ತಮ್ಮ ಕಚೇರಿಗೂ ಮುನ್ನ ಇದ್ದಂತ ಖಾಸಗಿ ಹೋಟೆಲ್ ನಲ್ಲಿ ಸಜೀವ ಗುಂಡು ಸಿಕ್ಕಿದ್ದವು. ಹೀಗಾಗಿ ಖಾಸಗಿ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ಕೊನೆಗೆ ಖಾಸಗಿ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತ ಸ್ಥಳವಲ್ಲ ಎಂದು ನಿರ್ಧರಿಸಲಾಗಿದೆ ಹೋಟೆಲ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಕಚೇರಿಯ ಚೇಂಬರ್ನಲ್ಲಿ ಪಾಯಿಂಟ್ ಬ್ಲ್ಯಾಂಕ್ನಲ್ಲಿ ಎದೆಗೆ ಗುರಿ ಇಟ್ಟು ಫೈರ್ ಮಾಡಿಕೊಂಡಿದ್ದ ರಾಯ ಕ್ಯಾಬಿನ್ನಲ್ಲೇ ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದ್ದರು. ಆದರೆ ಆತ್ಮಹತ್ಯೆ ಸ್ಥಳದಲ್ಲಿ ಹನಿ ರಕ್ತ ಮಾತ್ರ ಚೆಲ್ಲಿತ್ತು . ಯಾಕೆಂದ್ರೆ ಸಿಡಿದ ಗುಂಡು ದೇಹದಿಂದ ಹೊರ ಬಾರದ ಹಿನ್ನೆಲೆ, ರಾಯರ ದೇಹದಿಂದ ಹೆಚ್ಚು ರಕ್ತ ಸೋರಿಕೆಯಾಗಿರಲಿಲ್ಲ. ಬುಲೇಟ್ ರಾಯ್ ಹೃದಯ ಸೀಳಿ, ಕಿಡ್ನಿಗೆ ತಾಗಿದೆ. ಬಳಿಕ ರಿಬ್ಸ್ ನಲ್ಲಿ ಗುಂಡು ಸಿಲುಕಿದ್ದ ಹಿನ್ನೆಲೆ ರಕ್ತ ಬಂದಿಲ್ಲ.
ಒಟ್ಟಿನಲ್ಲಿ ಸಿಜೆ ರಾಯ ಆತ್ಮಹತ್ಯೆ ಪ್ರಕರಣಕ್ಕೆ ಹವಾಲ ಹಣ ಮ್ಯಾಟರ್ ತಗ್ಲಾಕೊಂಡಿರುವುದು ಗೊತ್ತಾಗಿದೆ. ಆದರೆ ಈ ಹಣ ಯಾರದ್ದು, ಯಾಕಾಗಿ ನೀಡಿದ್ರು ತನಿಖೆಯಿಂದ ಬಯಲಾಗಬೇಕಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ