Headlines

ಅಡುಗೆ ಮನೆ ವಾಸನೆ ಬಾರದ ಹಾಗೆ ಈ ರೀತಿ ಕ್ಲೀನ್ ಮಾಡಿ, ಯಾರಾದ್ರೂ ಬಂದ್ರೆ ಮೂಗ್ ಮುಚ್ಕೋಳಲ್ಲ

ಅಡುಗೆ ಮನೆ ವಾಸನೆ ಬಾರದ ಹಾಗೆ ಈ ರೀತಿ ಕ್ಲೀನ್ ಮಾಡಿ, ಯಾರಾದ್ರೂ ಬಂದ್ರೆ ಮೂಗ್ ಮುಚ್ಕೋಳಲ್ಲ

ಅಡುಗೆ ಮನೆ ವಾಸನೆ ಬಾರದ ಹಾಗೆ ಈ ರೀತಿ ಕ್ಲೀನ್ ಮಾಡಿ, ಯಾರಾದ್ರೂ ಬಂದ್ರೆ ಮೂಗ್ ಮುಚ್ಕೋಳಲ್ಲ

cleaning tips : ಎಷ್ಟೇ ಕ್ಲೀನ್ ಮಾಡಿದ್ರೂ, ಹೊಳೆಯುತ್ತಿರೋ ಅಡುಗೆ ಮನೆಯಿಂದ್ಲೂ ವಾಸನೆ ಬರ್ತಿದ್ಯಾ? ಅಡುಗೆ ಮನೆಗೆ ಬಂದ್ರೆ ಮೂಗು ಮುಚ್ಚಿಕೊಳ್ತಿದ್ದೀರಾ? ಇದಕ್ಕೆ ಕಾರಣ ಅಡುಗೆ ಮನೆಯಲ್ಲೇ ಅಡಗಿದೆ.

ಪ್ರತಿ ದಿನ ಅಡುಗೆ ಮನೆಯನ್ನು ನಾವೆಲ್ಲ ಕ್ಲೀನ್ ಮಾಡ್ತೇವೆ. ಗ್ಯಾಸ್ ಕ್ಲೀನ್ ಮಾಡೋದು, ಪಾತ್ರೆ ತೊಳೆಯೋದು, ಸುತ್ತಮುತ್ತಲಿನ ಜಾಗವನ್ನು ಒರೆಸುವ ಕೆಲ್ಸ ಮಾಡ್ತೇವೆ. ಅಡುಗೆ ಮನೆ ಮೇಲ್ನೋಟಕ್ಕೆ ತುಂಬಾ ಸುಂದರವಾಗಿ ಕಾಣುತ್ತೆ. ಆದ್ರೆ ಕೆಟ್ಟ, ಕೊಳೆತ ವಾಸನೆ ಆಗಾಗ ಅಡುಗೆ ಮನೆಯಿಂದ ಬರ್ತಿರುತ್ತೆ. ಅದಕ್ಕೆ ಕಾರಣ ಇದೆ. ಬಹುತೇಕ ಎಲ್ಲರೂ ಅಡುಗೆ ಮನೆಯ ಕೆಲ ಮುಖ್ಯ ಜಾಗವನ್ನು ನಿರ್ಲಕ್ಷ್ಯ ಮಾಡ್ತಾರೆ. ಕ್ಲೀನ್ ಮಾಡೋದನ್ನು ಸಂಪೂರ್ಣ ಮರೆಯುತ್ತಾರೆ. ಇದೇ ಅಡುಗೆ ಮನೆ ವಾಸನೆಗೆ ಕಾರಣ. ಅಡುಗೆ ಮನೆ ಸದಾ ಸುಹಾಸನೆಯಿಂದ ಕೂಡಿರ್ಬೇಕು, ಫ್ರೆಶ್ ಆಗಿರಬೇಕು ಅಂದ್ರೆ ತಪ್ಪದೆ ಕೆಲ ಜಾಗವನ್ನು ಕ್ಲೀನ್ ಮಾಡಿ.

ಅಡುಗೆ ಮನೆಯಲ್ಲಿರುವ ಕಸವನ್ನು ಹೊರಗೆ ಎಸೆದು, ಅದೇ ಕಸದ ಬುಟ್ಟಿಗೆ ಮತ್ತೆ ಕಸ ತುಂಬ್ತೇವೆ. ಕೆಲವರು ಡಸ್ಟ್ ಬಿನ್ ಒಳಭಾಗ ಕ್ಲೀನ್ ಮಾಡ್ತಾರೆ ಆದ್ರೆ ಹೊರ ಭಾಗ ಕ್ಲೀನ್ ಮಾಡೋದು ಮರಿತಾರೆ. ಎಷ್ಟೋ ದಿನಗಳಿಂದ ಡಸ್ಟ್ ಬಿನ್ ಹೊರ ಭಾಗ, ಕೆಳಗಿನ ಭಾಗ ಕ್ಲೀನ್ ಆಗಿರೋದಿಲ್ಲ. ಕೊಳಕು, ನೀರು, ಕಸ, ಆಹಾರ ಅದ್ರಲ್ಲಿ ಸಿಕ್ಕಿರುತ್ತದೆ. ಅದರಿಂದ ವಾಸನೆ ಬರ್ತಿರುತ್ತದೆ. ನೀವು ಪ್ರತಿ ದಿನ ಅಲ್ದೆ ಹೋದ್ರೂ ವಾರಕ್ಕೆ ಒಂದು ಬಾರಿಯಾದ್ರೂ ಡಸ್ಟ್ ಬಿನ್ ಸಂಪೂರ್ಣ ಕ್ಲೀನ್ ಮಾಡಿ. ಬಿಸಿ ನೀರು, ಸೋಡಾ ಬಳಸಿ ಅದನ್ನು ಸ್ವಚ್ಛಗೊಳಿಸಿ.

ಪ್ರತಿ ದಿನ ಮೂರ್ನಾಲ್ಕು ಬಾರಿ ಸಿಂಕ್ ನಲ್ಲಿ ರಾಶಿ ರಾಶಿ ಪಾತ್ರೆ ತೊಳಿದಿರ್ತೇವೆ. ಸೋಪ್ ಹಾಕಿ ಸಿಂಕ್ ಕೂಡ ಕ್ಲೀನ್ ಮಾಡ್ತೇವೆ. ಆದ್ರೆ ಸಿಂಕ್ ಪೈಪ್ ಬಗ್ಗೆ ಗಮನ ನೀಡೋದಿಲ್ಲ. ಈ ಸಿಂಕ್ ಪೈಪ್ ನಲ್ಲಿ ಕೊಳಕು ಸೇರಿರುತ್ತೆ. ಇದು ಅಡುಗೆ ಮನೆ ವಾತಾವರಣ ಹಾಳು ಮಾಡುತ್ತೆ. ಅಡುಗೆ ಮನೆಯಲ್ಲಿ ಕೆಟ್ಟ ವಾಸನೆ ಬರಲು ಇದು ಕಾರಣ. ಮಾರ್ಕೆಟ್ ನಲ್ಲಿ ಸಿಂಕ್ ಪೈಪ್ ಕ್ಲೀನರ್ ಸಿಗುತ್ತದೆ. ಅದನ್ನು ನೀವು ಬಳಸಬಹುದು. ಇಲ್ಲವೆ ರಾತ್ರಿ ಎರಡು ಚಮಚ ಅಡುಗೆ ಸೋಡಾ ಹಾಗೂ ಸ್ವಲ್ಪ ಬಿಳಿ ವಿನಿಗರನ್ನು ಸಿಂಕ್ ನೀರು ಹೋಗುವ ಜಾಗಕ್ಕೆ ಸುರಿಯಿರಿ. 10 ನಿಮಿಷ ಬಿಟ್ಟು ಬಿಸಿ ನೀರನ್ನು ಪೈಪ್ ಗೆ ಹಾಕಿ.

ಪಾತ್ರೆ ಕ್ಲೀನ್ ಮಾಡಲು ಸ್ಪಾಂಜ್ ಬಳಕೆ ಮಾಡ್ತೇವೆ. ಪಾತ್ರೆ ತೊಳೆದ ಮೇಲೆ ಅನೇಕರು ಸ್ಪಾಂಜ್ ತೊಳೆಯೋದಿಲ್ಲ. ಈ ಸ್ಪಾಂಜ್ ನಲ್ಲಿ ಅತಿ ಹೆಚ್ಚು ಕೀಟಾಣುಗಳಿರುತ್ತವೆ. ಇವು ರೋಗ ಹರಡೋದಲ್ಲದೆ ಅಡುಗೆ ಮನೆ ವಾಸನೆಗೆ ಕಾರಣವಾಗುತ್ವೆ. ನೀವು ಪ್ರತಿ ಬಾರಿ ಪಾತ್ರೆ ತೊಳೆದ ನಂತ್ರ ಸ್ಪಾಂಜ್ ಸ್ವಚ್ಛಗೊಳಿಸಬೇಕು. ನೀರನ್ನು ಹಿಂಡಿ ಒಣಗಿಸಬೇಕು. ವಾರದಲ್ಲಿ ಒಂದು ದಿನ ಬಿಸಿ ನೀರಿನಲ್ಲಿ ಕುದಿಸಬೇಕು. 15 ದಿನಕ್ಕೆ ಸ್ಪಾಂಜ್ ಬದಲಿಸಬೇಕು.

ಗ್ಯಾಸ್ ಸ್ಟೌವ್ ಪ್ರತಿದಿನ ಕ್ಲೀನ್ ಮಾಡುವ ಮಹಿಳೆಯರು ಅದ್ರ ಕೆಳಗಿನ ಜಾಗವನ್ನು ಮರೆಯುತ್ತಾರೆ. ಒಲೆಯ ಹಿಂದೆ ಅಥವಾ ರೆಫ್ರಿಜರೇಟರ್ ಅಡಿಯಲ್ಲಿ ಬೀಳುವ ಸಣ್ಣ ಆಹಾರದ ತುಂಡುಗಳಿಗೆ ಹೆಚ್ಚು ಗಮನ ನೀಡೋದಿಲ್ಲ. ಇದೇ ಆಹಾರ ಕೊಳೆತು ಆಮೇಲೆ ವಾಸನೆ ಬರಲು ಶುರುವಾಗುತ್ತದೆ. ವಾರಕ್ಕೊಮ್ಮೆಯಾದ್ರೂ ನೀವು ಗ್ಯಾಸ್ ಸ್ಟೌವ್ ಅಡಿ ಹಾಗೂ ಫಿಜ್ ಕೆಳಗೆ ಕ್ಲೀನ್ ಮಾಡಿ. ಫ್ರಿಜ್ ಕೆಳಗೆ ಕ್ಲೀನ್ ಮಾಡುವಾಗ ಫ್ರಿಜ್ ಸ್ವಿಚ್ ಆಫ್ ಮಾಡಲು ಮರೆಯಬೇಡಿ.

ಅಡುಗೆಮನೆಯ ಎಲ್ಲಾ ಹೊಗೆ, ಎಣ್ಣೆ ಮತ್ತು ಮಸಾಲೆಗಳ ವಾಸನೆ ಎಕ್ಸಾಸ್ಟ್ ಫ್ಯಾನ್ ಅಥವಾ ಚಿಮಣಿಯ ಮೂಲಕ ಹೊರ ಹೋಗುತ್ತದೆ. ದೀರ್ಘಕಾಲದವರೆಗೆ ಇವುಗಳನ್ನು ಸ್ವಚ್ಛಗೊಳಿಸದೆ ಬಿಟ್ಟರೆ, ದಪ್ಪ, ಜಿಗುಟಾದ ಎಣ್ಣೆಯ ಪದರ ಇವುಗಳ ಮೇಲೆ ಸಂಗ್ರಹವಾಗುತ್ತದೆ. ಈ ಜಿಗುಟು ಹಳಸಿದ ಮತ್ತು ಕೊಳೆತ ವಾಸನೆಯುಂಟು ಮಾಡುತ್ತದೆ. ಕನಿಷ್ಠ ತಿಂಗಳಿಗೊಮ್ಮೆ, ಫಿಲ್ಟರ್ಗಳು ಅಥವಾ ಬ್ಲೇಡ್ಗಳನ್ನು ಬಿಸಿನೀರು ಮತ್ತು ಪಾತ್ರೆ ತೊಳೆಯುವ ದ್ರವದಲ್ಲಿ ನೆನೆಸಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿ.

Source link

Leave a Reply

Your email address will not be published. Required fields are marked *