ಸಿಎಂ ತವರಲ್ಲೇ ಇನ್ನೂ ಜೀವಂತ ಬಹಿಷ್ಕಾರ ಪದ್ದತಿ, ವಿದ್ಯುತ್‌ ಕಂಬ ಮುಟ್ಟಿದ್ದಕ್ಕೆ ಹಲ್ಲೆ!

ಸಿಎಂ ತವರಲ್ಲೇ ಇನ್ನೂ ಜೀವಂತ ಬಹಿಷ್ಕಾರ ಪದ್ದತಿ, ವಿದ್ಯುತ್‌ ಕಂಬ ಮುಟ್ಟಿದ್ದಕ್ಕೆ ಹಲ್ಲೆ!



ಸಿಎಂ ತವರಲ್ಲೇ ಇನ್ನೂ ಜೀವಂತ ಬಹಿಷ್ಕಾರ ಪದ್ದತಿ, ವಿದ್ಯುತ್‌ ಕಂಬ ಮುಟ್ಟಿದ್ದಕ್ಕೆ ಹಲ್ಲೆ!
<p>ಸಿಎಂ ತವರು ಕ್ಷೇತ್ರದಲ್ಲಿ ಅನಿಷ್ಟ ಸಾಮಾಜಿಕ ಬಹಿಷ್ಕಾರ ಪದ್ಧತಿ ಜೀವಂತವಿದೆ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರಕ್ಕೊಳಗಿದ್ದ ದಂಪತಿ, ಇದೀಗ ಎಲೆಕ್ಟ್ರಿಕ್ ಕಂಬ ಮುಟ್ಟಿದ್ದಕ್ಕೆ ಹಲ್ಲೆಗೊಳಗಾದ ಘಟನೆ ನಡೆದಿದೆ.</p><img><p>ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಗ್ರಾಮದ ನಿವಾಸಿಗಳಾದ ವಸಂತ ಹಾಗೂ ನಟನಾಯಕ ದಂಪತಿ ಪುತ್ರಿ ಅಂತರ್ಜಾತಿ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದರು. ಈ ಸಂಬಂಧ ಗ್ರಾಮದ ಕೆಲವರು ವಸಂತ ನಾಯಕ ಅವರ ಕುಟುಂಬ ಸೇರಿದಂತೆ ಅವರ ಸಂಬಂಧಿಕರಿಗೆ ಕಳೆದ ತಿಂಗಳು ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಈ ಬಹಿಷ್ಕಾರಕ್ಕೆ ಒಳಗಾದವರಲ್ಲಿ ಎಲೆಕ್ಟ್ರಿಷಿಯನ್ ವೆಂಕಟೇಶ್ ನಾಯಕ್ ಕೂಡ ಒಬ್ಬರಾಗಿದ್ದಾರೆ.</p><img><p>ಇಂದು ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ರಿಪೇರಿ ಮಾಡಿಕೊಡುವಂತೆ ಕರೆ ಬಂದಿತ್ತು. ವೃತ್ತಿಯಿಂದ ಎಲೆಕ್ಟ್ರಿಷಿಯನ್ ಆಗಿರುವ ವೆಂಕಟೇಶ್ ನಾಯಕ್ ಅವರು ವಿದ್ಯುತ್ ಕಂಬವನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ಬಹಿಷ್ಕಾರಕ್ಕೆ ಒಳಗಾದವರು ಕಂಬವನ್ನು ಮುಟ್ಟುವಂತಿಲ್ಲ ಎಂದು ಗ್ರಾಮದ ರತ್ನಾಕರ, ರವಿ ಹಾಗೂ ಕೆಲವು ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿ ವಾಗ್ವಾದಕ್ಕೆ ಇಳಿದಿದ್ದಾರೆ</p><img><p>ವಿದ್ಯುತ್ ಕಂಬ ಪರಿಶೀಲಿಸುತ್ತಿದ್ದ ವೆಂಕಟೇಶ್ ನಾಯಕ್ ಹಾಗೂ ಅವರ ಮಗನ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಅಮಾನವೀಯವಾಗಿ ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಿಂದಾಗಿ ಬಹಿಷ್ಕಾರಕ್ಕೆ ಒಳಗಾದ ಕುಟುಂಬಗಳು ತೀವ್ರ ಭೀತಿಯಲ್ಲಿ ದಿನ ಕಳೆಯುವಂತಾಗಿದೆ.</p>



Source link

Leave a Reply

Your email address will not be published. Required fields are marked *