
ಮೈಸೂರು, (ಮಾರ್ಚ್ 14): ಗಲ್ಫ್ ರಾಷ್ಟ್ರದಲ್ಲಿ ಯುದ್ಧ ನಡೆಯುತ್ತಿರುವುದರಿಂದ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಉಂಟಾಗಿದೆ. ಇದು ಹೋಟೆಲ್ ಉದ್ಯಮದ ಕತ್ತು ಹಿಸುಕುವಂತೆ ಮಾಡಿದೆ. ಗ್ಯಾಸ್ ಎಮರ್ಜೆನ್ಸಿ ಗ್ರಾಹಕರು ಉಸಿರುಗಟ್ಟಿಸಿದ್ದಾರೆ. ಕಮರ್ಷಿಯಲ್ ಸಿಲಿಂಡರ್‌ಗಳು ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಒನ್ ಟು ಡಬಲ್ ರೇಟ್‌ಗೆ ಸೇಲ್ ಮಾಡುತ್ತಿದ್ದಾರೆ. 1 ಸಾವಿರ 950 ರೂಪಾಯಿ ಇರುವ ಸಿಲಿಂಡರ್ನ 5 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.ಇದರಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯನವರು ತಮ್ಮ ವರುಣಾ ಕ್ಷೇತ್ರದ ವರಕೋಡು ಗ್ರಾಮದ ಜಾತ್ರೆಗೆ ಪ್ರಭಾವ ಬಳಿಸಿ ಒಂದು ಲೋಡ್ ಗ್ಯಾಸ್ ಸಿಲಿಂಡರ್ ಕೊಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಂತ ಮೈಸೂರು ಜಿಲ್ಲಾ ಹೋಟೆಲ್ ಸಂಘದ ಅಧ್ಯಕ್ಷ ಸಿ ನಾರಾಯಣ ಗೌಡ ಅವರು ಆರೋಪಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ, ಮುಖ್ಯಮಂತ್ರಿಗಳ ಮನಸ್ಸು ಮಾಡಿದರೆ ತಕ್ಷಣ ಈ ಸಮಸ್ಯೆ ಬಗೆಹರಿಯಬಹುದು. ನಿನ್ನೆ (ಮಾರ್ಚ್ 13) ಸಿಎಂ ವರಕೋಡು ಹಬ್ಬಕ್ಕೂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ದಾರೆ. ಸಿದ್ದರಾಮಯ್ಯ ವರುಣಗೆ ಮಾತ್ರ ಸಿಎಂ ಅಲ್ಲ. ಅವರು ರಾಜ್ಯದ ಸಿಎಂ ಕೇವಲ ವರಕೋಡು ಗ್ರಾಮದ ಜಾತ್ರೆಗೆ ಗ್ಯಾಸ್ ಕೊಡಿಸದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಮನಸ್ಸು ಮಾಡಿದರೆ ಏನೂ ಬೇಕಾದರೂ ಆಗುತ್ತದೆ. ಜಾತ್ರೆಗೂ ಎರಡು ದಿನ ಮೊದಲೇ ಡಿಸಿ ಜೊತೆ ಮಾತನಾಡಿ ಸಿಲಿಂಡರ್ ಕೊಡಿಸಿದ್ದಾರೆ. ಹೀಗಾಗಿ ಹೋಟೆಲ್‌ಗಳು ಕೂಡ ದಿನಕ್ಕೆ ಒಂದೋ ಎರಡೋ ಸಿಲಿಂಡರ್ ಕೊಡಲು ಸಿಎಂ ಪ್ರಭಾವ ಬೀರಬೇಕು. ಮೈಸೂರಿನಲ್ಲಿ ಪ್ರತಿನಿತ್ಯ 4,000 ಸಿಲಿಂಡರ್ ನೀಡಲಾಗಿದೆ. ಅಷ್ಟು ಸಾಧ್ಯವಿಲ್ಲವೆಂದರೂ ಕನಿಷ್ಠ 700-800 ಸಿಲಿಂಡರ್ ಲಭ್ಯವಾಗುವಂತೆ ಸಿಎಂ ಮಾಡಬೇಕು ಎಂದು ಮನವಿ ಮಾಡಲಾಗಿದೆ.