ಬೆಂಗಳೂರು, ಅಕ್ಟೋಬರ್ 24: ಉತ್ತರಾಧಿಕಾರಿ ಬಗ್ಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ನಾನಾ ವಿಶ್ಲೇಷಣೆಯೂ ನಡೆಯುತ್ತಿದೆ. ಸದ್ಯ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಪ್ರತಿಕ್ರಿಯಿಸಿದ್ದು, ಈ ಹೇಳಿಕೆ ಬಗ್ಗೆ ಎಂಎಲ್ಸಿ ಡಾ.ಯತೀಂದ್ರ ಬಳಿಯೇ ಕೇಳಿದೆ. ಅದು ಸೈದ್ಧಾಂತಿಕವಾಗಿ ಮಾತ್ರ ಅಂತ ಹೇಳಿದರು. ಇಂಥವರೇ ಸಿಎಂ ಆಗಬೇಕು ಎಂದು ಡಾ.ಯತೀಂದ್ರ ಹೇಳಿಲ್ಲ. ತಿರುಚಿ ಏನಾದ್ರೂ ಹೇಳಿದ್ದಾರಾ ಎಂದು ಡಾ.ಯತೀಂದ್ರಗೆ ಕೇಳಿದೆ. ಇಲ್ಲ, ನಾನು ಸೈದ್ಧಾಂತಿಕವಾಗಿ ಮಾತಾಡಿದ್ದು ಇತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.