ಕೊಪ್ಪಳ, ಅಕ್ಟೋಬರ್ 21: ತುಂಗಭದ್ರಾ ನದಿ ಅಕ್ರಮ ಮರಳುಗಾರಿಕೆ ಬಗ್ಗೆ ಆರ್ಥಿಕ ಸಿಎಂ ಸಲಹೆಗಾರ ರಾಯರೆಡ್ಡಿ (ಬಸವರಾಜ ರಾಯರೆಡ್ಡಿ)
ಬರೆದಿದ್ದ ಲೆಟರ್ ಮತ್ತು ಇದಕ್ಕೆ ಪ್ರತಿಯಾಗಿ ಇಲಾಖೆ ಅಧಿಕಾರಿಗಳು ವರ್ಗದಿಂದಲೂ ಪತ್ರ ವಿಚಾರದಲ್ಲಿ ಸಿಎಂ ಕಚೇರಿಗೆ ಮಧ್ಯ ಪ್ರವೇಶ ಮಾಡಿದೆ. ಕೊಪ್ಪಳ ಗಣಿ ಇಲಾಖೆಯ ಹಿರಿಯ ಅಧಿಕಾರಿ ಪುಷ್ಪಲತಾಗೆ ಸಿಎಂ ಕಚೇರಿಯಿಂದ ಕರೆ ಹೋಗಿದ್ದು, ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂಬ ಟಿವಿ9ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ದೊರಕಿದೆ.
ಇಲಾಖೆ ಸಿಬ್ಬಂದಿ ಜೊತೆ ಪುಷ್ಪಲತಾ ಸಭೆ
ರಾಯರೆಡ್ಡಿಗೆ ಕೌಂಟರ್ ಆಗಿ ಸಹಿ ಇರುವ ಪತ್ರ ವೈರಲ್ ವಿಚಾರ ಸಂಬಂಧ ಸಿಬ್ಬಂದಿ ಸಿಬ್ಬಂದಿ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ ಸಭೆ. ಬಸವರಾಜ ರಾಯರೆಡ್ಡಿಗೆ 20 ಪ್ರಶ್ನೆ ಕೇಳಿದ್ದು ಸಹಿ ಇಲ್ಲದೆ ಲೆಟರ್ ವೈರಲ್ ಆಗಿದೆ. ರಾಜಧನ, ಅಕ್ರಮದ ವಿಚಾರವಾಗಿ ಅದನ್ನು ಪ್ರಶ್ನಿಸಲಾಗಿದೆ. ಈ ವಿಚಾರವನ್ನ ಇಲಾಖೆ ಗಂಭೀರವಾಗಿ ಪರಿಗಣಿಸಿರುವ ಹಿನ್ನಲೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ.
ಇದನ್ನೂ ಓದಿ: ಆರ್ಎಸ್ಎಸ್ ಬಿಸಿಬಿಸಿ ಚರ್ಚೆಗೆ ತುಪ್ಪ ಸುರಿದ ವಿವಾದದ ಕಿಡಿ ಹೊತ್ತಿಸಿದ ಸಚಿವ ಶಿವರಾಜ್ ತಂಗಡಗಿ
ಘಟನೆ ಏನು?
ತುಂಗಭದ್ರಾ ನದಿಯಿಂದ ಸುಮಾರು 85 ಕಿ.ಮೀ. ದೂರದ ಪ್ರದೇಶಗಳಲ್ಲಿ ಪ್ರತಿದಿನ ಅಕ್ರಮವಾಗಿ 100 ರಿಂದ 150 ಟ್ರಕ್ ಮರಳು ಮತ್ತು ಜಲ್ಲಿಕಲ್ಲು ಸಾಗಾಟವಾಗುತ್ತಿದೆ. 200ಕ್ಕೂ ಹೆಚ್ಚು ಈ ಕೆಲಸದಲ್ಲಿ ಭಾಗವಹಿಸಿದ್ದು, ಇದನ್ನು ತಡೆಯಬೇಕಿದ್ದ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಅಕ್ರಮಕ್ಕೆ ಸಾಥ್ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ರಾಯರೆಡ್ಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪತ್ರವನ್ನೂ ಬರೆದಿದ್ದಾರೆ. ಇಲಾಖೆಯಲ್ಲಿರುವ ಕೆಲ ಅಧಿಕಾರಿಗಳು ಕಳೆದ 12–13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಈ ಕೂಡಲೇ ವಗರ್ಗವಣೆ ಮಾಡಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ಕ್ರಮ ಕೈಗೊಳ್ಳಬೇಕು ಎಂದಿದ್ದರು. ಮರಳು ಮಾಫಿಯಾ ವಿರುದ್ಧ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೇ ಈ ರೀತಿ ಧ್ವನಿ ಎತ್ತಿರುವ ಕಾರಣ ವಿಷಯ ಗಂಭೀರವಾಗಿದೆ.
ಇತ್ತ ರಾಯರೆಡ್ಡಿ ಅವರ ಆರೋಪಕ್ಕೆ ಅಧಿಕಾರಿ ವಲಯದಿಂದಲೂ ಕೌಂಟರ್ ಆಗಿತ್ತು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಿಗೆ 20 ಪ್ರಶ್ನೆ ಕೇಳಿರುವ ಸಹಿ ಇಲ್ಲದ ಪತ್ರ ವೈರಲ್ ಆಗುತ್ತಿದೆ. ವಿಚಾರವೀಗ ಸಿಎಂ ಸಿದ್ದರಾಮಯ್ಯ ಅವರ ಕಚೇರಿ ತಲುಪಿದ್ದು, ಈ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕೊಪ್ಪಳ ಗಣಿ ಇಲಾಖೆಯ ಅಧಿಕಾರಿಗಳ ವಿರುದ್ಧ ರಾಯರ ವಿರುದ್ಧ ಪತ್ರ ಬರೆದಿದ್ದ ಮತ್ತು ವೈರಲ್ ಆಗಿರುವ ಪ್ರಶ್ನೆಗಳ ಬಗ್ಗೆಯೂ ವಿಚಾರಣೆಗೆ ಹಾಜರಾಗಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.