
ಹೊಸ ಕಾರು ಖರೀದಿಸುವಾಗ ಅನೇಕರ ಮನಸ್ಸಿನಲ್ಲಿ ಮೂಡುವ ದೊಡ್ಡ ಪ್ರಶ್ನೆಯೆಂದರೆ, ‘ಪೆಟ್ರೋಲ್ ಕಾರು ಖರೀದಿಸಬೇಕೇ ಅಥವಾ ಸಿಎನ್ಜಿ ಕಾರೇ?’ ಎಂಬುದು. ಅದರಲ್ಲೂ ₹10 ಲಕ್ಷದೊಳಗಿನ ಬಜೆಟ್ನಲ್ಲಿ ಕಾರು ಹುಡುಕುವವರಿಗೆ ಈ ನಿರ್ಧಾರ ಇನ್ನಷ್ಟು ಕಷ್ಟಕರವಾಗಿರುತ್ತದೆ.
ಪೆಟ್ರೋಲಾ ಅಥವಾ ಸಿಎನ್ಜಿನಾ – ಯಾವುದು ಉತ್ತಮ?
ಪೆಟ್ರೋಲ್ ಕಾರುಗಳು ಉತ್ತಮ ಪಿಕಪ್ ಮತ್ತು ಸ್ಮೂತ್ ಡ್ರೈವಿಂಗ್ ಅನುಭವ ನೀಡುತ್ತವೆ. ಆದರೆ, ಸಿಎನ್ಜಿ ಕಾರುಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ಮೈಲೇಜ್ ಕೊಡುತ್ತವೆ. ಹೀಗಾಗಿ ಎರಡೂ ಕಾರುಗಳಿಗೂ ತಮ್ಮದೇ ಆದ ಅನುಕೂಲ ಹಾಗೂ ಅನಾನುಕೂಲಗಳಿವೆ.