Headlines

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ – ಜೆ.ಪಿ. ತುಮಿನಾಡು

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ  – ಜೆ.ಪಿ. ತುಮಿನಾಡು

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ  – ಜೆ.ಪಿ. ತುಮಿನಾಡು

ಎಲ್ಲರ ಬದುಕಿನಲ್ಲಿ ಇರುವ ಹಾಗೆ ಶಾಲೆಯಲ್ಲಿ ಹುಡುಗಿಯ ಮೇಲೆ ಕ್ರಶ್ ಆಗುವುದು, ಗೆಳೆಯರೊಂದಿಗೆ ಆ ಬಗ್ಗೆ ಕಾಲೆಳೆಸಿಕೊಳ್ಳುವುದು ಇತ್ಯಾದಿ ಘಟ್ಟ ದಾಟಿದ ಮೇಲೆ ನಾನು ಲವ್‌ ಲೆಟರ್‌ ಬರೆಯಲು ಶುರು ಮಾಡಿದ್ದು. ಆದರೆ ಅದು ನನಗಲ್ಲ, ಸ್ನೇಹಿತರಿಗೆ.

ನನ್ನ ಪ್ರೇಮಕಥೆ ಶುರುವಾದದ್ದು ನಾನು ರಂಗಭೂಮಿಗೆ ಬಂದಾದ ಮೇಲೆ. ಆಗ ತುಳು ನಾಟಕಗಳನ್ನು ಬರೆಯುತ್ತಿದ್ದೆ, ಜೊತೆಗೆ ರಂಗದ ಮೇಲೆ ಅಭಿನಯಿಸುತ್ತಿದ್ದೆ.

ಒಂದು ತಂಪು ಹೊತ್ತಲ್ಲಿ ನಮ್ಮ ನಾಟಕ ಟೀಮ್‌ಗೆ ಒಬ್ಬ ಹುಡುಗಿ ಬಂದಳು. ಆ ಹೊತ್ತಿಗೆ ಪ್ರದರ್ಶನಗೊಳ್ಳುತ್ತಿದ್ದ ನಾಟಕದಲ್ಲಿ ರಂಗದ ಮೇಲೆ ನಾವಿಬ್ಬರೂ ಪ್ರೇಮಿಗಳಾಗಿ ನಟಿಸಬೇಕಿತ್ತು.

. ನಟನೆಯೇನೋ ಮಾಡುತ್ತಿದ್ದೆವು, ಆದರೆ ಆರಂಭದಲ್ಲಿ ಎಲ್ಲವೂ ಸರಿ ಇರಲಿಲ್ಲ. ಆ ಹುಡುಗಿ ಯಾವುದೋ ಕಾರಣಕ್ಕೆ ನನ್ನ ಮೇಲೆ ಸಿಡಿಮಿಡಿಗೊಳ್ಳುತ್ತಿದ್ದಳು, ಚೆನ್ನಾಗಿ ಬೈಯ್ಯುತ್ತಿದ್ದಳು. ಆದರೆ ಅವಳಂದುಕೊಂಡ ಹಾಗೆ ನಾನಿರಲಿಲ್ಲ. ಆ ವಿಚಾರ ಅವಳಿಗೆ ತಿಳಿದದ್ದು ತಡವಾಗಿ. ಅಷ್ಟರಲ್ಲಿ ನನಗೆ ಭರಪೂರ ಬೈಗುಳದ ಸಂದಾಯವಾಗಿತ್ತು. ಸತ್ಯ ತಿಳಿದ ಮೇಲೆ ಅವಳಿಗೆ ಪಶ್ಚಾತಾಪ ಆಯ್ತು, ಅದು ಕಾಳಜಿಯಾಗಿ ಬದಲಾಯ್ತು

ಕ್ರಮೇಣ ಅಕ್ಕರೆಯಲ್ಲಿ ಮಾತನಾಡಿಸತೊಡಗಿದಳು. ಹಾಗೆ ಹತ್ತಿರವಾದ ಹುಡುಗಿ ನನ್ನ ಬದುಕಿನ ಪ್ರೇಮರಶ್ಮಿಯಾದಳು. ನಮ್ಮ ಪ್ರೀತಿಗೀಗ ಹದಿನಾಲ್ಕು ವರ್ಷ. ಇನ್ನು ಕೆಲವೇ ಸಮಯದಲ್ಲಿ ಆಕೆಯ ಜೊತೆಗೆ ಸಪ್ತಪದಿ ತುಳಿಯಲಿದ್ದೇನೆ.

Source link

Leave a Reply

Your email address will not be published. Required fields are marked *