ಅಲ್ಲು ಅರ್ಜುನ್ (Allu Arjun) ಪ್ಯಾನ್ ಇಂಡಿಯಾ ಸ್ಟಾರ್ ನಟ. ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳ ನಂತರ ಅವರ ಜನಪ್ರಿಯತೆ ವಿಶ್ವಮಟ್ಟದಲ್ಲಿ ಹರಡಿದೆ. ಇದೀಗ ಅಟ್ಲಿ ಜೊತೆಗೆ ಭಿನ್ನ ರೀತಿಯ ಸಿನಿಮಾ ಮಾಡುತ್ತಿದೆ, ಆ ಸಿನಿಮಾ ಅಲ್ಲು ಅರ್ಜುನ್ ಹಾಲಿವುಡ್ ಲೆವೆಲ್ ಸ್ಟಾರ್ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅರ್ಜುನ್ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿರುವ ಹೊತ್ತಿನಲ್ಲಿ ಅಲ್ಲ ಅವರ ತುಳಿಯುವ ಪ್ರಯತ್ನಗಳು ಸಹ ಮರೆಯಾಗದಂತೆ ತೋರುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚೆಗಷ್ಟೇ ಅಲ್ಲ ಅರ್ಜುನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಯಿತು.
ಅಲ್ಲು ಅರ್ಜುನ್ ಅವರನ್ನು ಯಾರೇ ಭೇಟಿ ಆಗಬೇಕೆಂದರೂ ಅವರು 42 ನಿಯಮಗಳು ಪಾಲಿಸಬೇಕು, ಅವರಿಂದ ದೂರ ನಿಂತೇ ಮಾತನಾಡಬೇಕು, ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು, ಅವರೊಟ್ಟಿಗೆ ಸೆಲ್ಫಿ ಕೇಳಬಾರದು, ಅವರೊಟ್ಟಿಗೆ ಮಾತನಾಡಬಾರದು ಎಂಬುದನ್ನಾದರೂ ಎಲ್ಲರೂ ಪಾಲಿಸಬೇಕು, ಅಲ್ಲು ಅರ್ಜುನ್ ಅವರಿಗೆ ಈ ನಿಯಮಗಳು ಹೇರಿವೆ ಎಂದೆಲ್ಲ ಸುದ್ದಿ ಹರಿಬಿಡಲಾಗಿದೆ. ಆದರೆ ಅರ್ಜುನ್ ತಂಡ ಇದನ್ನು ಅಪ್ಪಟ ಸುಳ್ಳೆಂದು ಸ್ಪಷ್ಟನೆ ನೀಡಿದ್ದು, ಈ ರೀತಿಯ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿತ್ತು.
ಇದೀಗ ಅಲ್ಲು ಅರ್ಜುನ್ ಜೊತೆಗೆ ನಟನೆ ಮಾಡಿರುವ ನಟ ಅಲ್ಲು ಅರ್ಜುನ್ ಅವರು ಅಂಥಹ ನಿಯಮ ಹೇರಿದ್ದಾರೆಯೇ ಅಲ್ಲು ಅರ್ಜುನ್ ಸೆಟ್ ನಲ್ಲಿ ಯಾರೊಟ್ಟಿಗೂ ಬೆರೆಯುವುದಿಲ್ಲವೇ ಇತರ ವಿಷಯಗಳ ಬಗ್ಗೆ ತಾವು ಕಂಡಿದ್ದನ್ನು ಹೇಳಿದ್ದಾರೆ. ಮಲೆಯಾಳಂ ಮೂಲದ ನಟ ಶಿವ ಹರಿಹರನ್ ಇತ್ತೀಚೆಗೆ ಜಾಹೀರಾತೊಂದಕ್ಕಾಗಿ ಅಲ್ಲು ಅರ್ಜುನ್ ಅವರೊಟ್ಟಿಗೆ ನಟನೆ ಮಾಡಿದ್ದರಂತೆ. ಅವರು ಅಲ್ಲು ಅರ್ಜುನ್ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ಅಲ್ಲು ಅರ್ಜುನ್ ಬಗ್ಗೆ ಹರಿದಾಡುತ್ತಿರುವ 42 ನಿಯಮಗಳ ಸುದ್ದಿ ಅಪ್ಪಟ ಸುಳ್ಳು.
ಇದನ್ನೂ ಓದಿ:ಅಲ್ಲು ಅರ್ಜುನ್ ಭೇಟಿಗೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?
ಅಲ್ಲು ಅರ್ಜುನ್ ಜೊತೆಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿರುವ ನಟ ಶಿವ ಹರಿಹರನ್, ಅಲ್ಲು ಅರ್ಜುನ್ ಬಹಳ ಮಾನವೀಯ ಬಹಳ ಸ್ನೇಹಮಯ ವ್ಯಕ್ತಿತ್ವ ಉಳ್ಳ ವ್ಯಕ್ತಿ. ‘ನಾನು ಕೆಲಸ ಮಾಡಿರುವ ಅತ್ಯಂತ ಕೂಲ್ ಮತ್ತು ಮಾನವೀಯ ನಟರಲ್ಲಿ ಅರ್ಜುನ್ ಒಬ್ಬರು. ಅವರು ನಿಜವಾಗಿಯೂ ಮಾನವೀಯತೆ ಇರುವ ವ್ಯಕ್ತಿ, ಶೂಟಿಂಗ್ ಸಮಯದಲ್ಲಿ ನಾವು ಅವರೊಂದಿಗೆ ಫೋಟೋವನ್ನು ಕೇಳಲು ಹಿಂಜರಿಯುತ್ತೇವೆ ಎಂದು ಅರ್ಥಮಾಡಿಕೊಂಡು, ನಿಮಗೆ ಫೋಟೋ ಬೇಕಾ ಎಂದು ಕೇಳಿದರು, ನಂತರ ಕಾದಿದ್ದು ನಮಗೆ ಫೋಟೋವನ್ನು ತೋರಿಸಿದ್ದಾರೆ ನಮಗೆ ಫೋಟೋಗಳು ಸಿಕ್ಕಿವೆ ಎಂದು ಮ್ಯಾನೇಜರ್ ಮೂಲಕ ಖಚಿತಪಡಿಸಿಕೊಂಡರು. ‘ಹ್ಯಾಪಿ’ ಸಿನಿಮಾದ ಬಳಿಕ ಅವರ ಎಲ್ಲಾ ಮಲಯಾಳಿ ಅಭಿಮಾನಿಗಳಂತೆ ಈಗ ಅಭಿಮಾನಿಗಳ ಸಂಖ್ಯೆ ದ್ವಿಗುಣಗೊಂಡಿದೆ’ ನಟ ಶಿವ ಹರಿಹರನ್.
ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಅಟ್ಲಿ ನಿರ್ದೇಶಕ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಅದೇ ಸಿನಿಮಾದಲ್ಲಿ ರಶ್ಮಿಕಾ ಸಹ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಕತೆ ಹಾಲಿವುಡ್ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯಲ್ಲಿ ಇರಲಿದೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ