Headlines

ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ಕಾಂಡೋಮ್ ಪತ್ತೆ! ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ

ವಿಮಾನ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ಕಾಂಡೋಮ್ ಪತ್ತೆ! ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ


ಕೊಲಂಬಿಯಾದ (ಕೊಲಂಬಿಯಾ) ಮೆಡೆಲಿನ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ನಾಲ್ಕು ಜನರನ್ನು ಬಂಧಿಸಲಾಯಿತು. ಈ ನಾಲ್ಕು ಜನರ ಮೇಲೆ ವಿಮಾನ ನಿಲ್ದಾಣ ಅಧಿಕಾರಿಗಳು ಅನುಮಾನ ಪಟ್ಟು ಹಿಡಿದಿದ್ದರು ಎಂದು ಹೇಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ತಪಾಸಣೆ ನಡೆಸುತ್ತಿದ್ದರೆ, ಈ ನಾಲ್ಕು ಜನರ ಬ್ಯಾಗ್‌ನಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದಿವೆ. ಅಧಿಕಾರಿಗಳು ಈ ಬಗ್ಗೆ ನಾಲ್ಕು ಜನರನ್ನು ಪ್ರಶ್ನಿಸಿದ್ದಾರೆ. ಆದರೆ ಅಧಿಕಾರಿಗಳ ಪ್ರಶ್ನೆಗೆ ಸರಿಯಾದ ಉತ್ತರವನ್ನು ಈ ನಾಲ್ಕು ಜನ ನೀಡಿಲ್ಲ. ಇದರಿಂದ ಅನುಮಾನ ಬಂದು ನಾಲ್ವರನ್ನು ಬಂಧಿಸಿದ್ದಾರೆ. ನಂತರ ಅವರ ಲಗೇಜ್ ಪರಿಶೀಲನೆ ನಡೆಸಿದಾಗ 100ಕ್ಕೂ ಹೆಚ್ಚು ಕಾಂಡೋಮ್ ಪ್ಯಾಕೆಟ್‌ಗಳು ಸೇರಿವೆ.

ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಇವರು ಇಷ್ಟೊಂದು ಕಾಂಡೋಮ್ಗಳನ್ನು ತಂದಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಅಧಿಕಾರಿಗಳು ಈ ನಾಲ್ಕು ಜನರನ್ನು ಅವರ ಬಳಿಗೆ ವಾಪಸ್ ಕಳಿಸಿದ್ದು, ಮೂವರ ಪನಾಮಕ್ಕೆ ಹಾಗೂ ಮತ್ತೊಬ್ಬರನ್ನು ಮಿಯಾಮಿಗೆ ಕಳುಹಿಸಲಾಗಿದೆ. ಈ ಅಧಿಕಾರಿಗಳು ಯಾವುದೇ ಕಾರಣಕ್ಕೂ ದೇಶದೊಳಗೆ ಬರಲು ಬಿಡುವುದಿಲ್ಲ ಹಾಗೂ ಆಂಟಿಯೋಕ್ವಿಯಾದಲ್ಲಿ ವಲಸೆ ನಿಯಂತ್ರಣಗಳನ್ನು ಬಿಗಿಗೊಳಿಸಿದ್ದು, ಪ್ರವಾಸೋದ್ಯಮ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಇಟಲಿ ರಾಯಭಾರಿ ಹೆಸರಿಸಿದ ಬೆಂಗಳೂರಿನ ಬೆಸ್ಟ್ 9 ಹೋಟೆಲ್‌ಗಳು ಯಾವುವು ಗೊತ್ತೇ?

ಇಂತಹ ವಸ್ತುಗಳನ್ನು ದೇಶದ ಒಳಗೆ ತರುವುದನ್ನು ನಿಷೇಧಿಸಲಾಗಿದೆ. 224ರಿಂದ ಇಂತಹ ಕೃತ್ಯದಲ್ಲಿ ತೊಡಗಿದ್ದ ಸುಮಾರು 102 ಜನರು ಪ್ರವೇಶಿಸಿರುವುದನ್ನು ನಿಷೇಧಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಅಮೇರಿಕದ ನಾಗರಿಕರು ಎಂದು ಹೇಳಲಾಗಿದೆ. ಕೊಲಂಬಿಯಾ ಸರ್ಕಾರವು ಪ್ರವಾಸೋದ್ಯಮ ಮತ್ತು ಶೋಷಣೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚು ಕೇಳಿ ಬರುತ್ತಿವೆ. ದೇಶದ ಮಕ್ಕಳು ಮತ್ತು ನಾಗರಿಕರನ್ನು ಇಂತಹ ಕೃತ್ಯಗಳಲ್ಲಿ ಬಳಸದಂತೆ ಪ್ರಬಲ ಕಾನೂನು ರೂಪಿಸಲಾಗಿದೆ. ಹಾಗೂ ಅವರನ್ನು ಇದರಿಂದ ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:49 pm, ಗುರುವಾರ, 27 ನವೆಂಬರ್ 25



Source link

Leave a Reply

Your email address will not be published. Required fields are marked *