ನಂದಗೋಕುಲ ಧಾರಾವಾಹಿಯಲ್ಲಿ, ಅಮೂಲ್ಯ ಮತ್ತು ವಲ್ಲಭ ತಮ್ಮ ಮದುವೆಯ ಸತ್ಯವನ್ನು ಕಾಲೇಜಿನಲ್ಲಿ ಮುಚ್ಚಿಟ್ಟು ಜಗಳವಾಡುತ್ತಿರುತ್ತಾರೆ. ಸೆಮಿನಾರ್ ಸವಾಲಿನ ವೇಳೆ ಮಂಚದ ವಿಷಯವಾಗಿ ಜಗಳವಾಡಿ, ತಮ್ಮ ಮದುವೆಯ ರಹಸ್ಯವನ್ನು ಸ್ನೇಹಿತರ ಮುಂದೆ ತಿಳಿಯದೆ ಬಾಯ್ಬಿಡುತ್ತಾರೆ.
ನಂದಗೋಕುಲ ಸೀರಿಯಲ್‌ನಲ್ಲಿ ಅಮೂಲ್ಯ ಮತ್ತು ವಲ್ಲಭ ಕಿತ್ತಾಡಿಕೊಳ್ಳೋದನ್ನು ನೋಡೋದೇ ಚೆಂದ. ಪ್ರಿಯಕರ ಕೈ ಕೊಟ್ಟಿದ್ದರಿಂದ ಅಮ್ಮನ ಒತ್ತಾಯದ ಮೇರೆಗೆ ಅಮೂಲ್ಯಳನ್ನು ವಲ್ಲಭ ಮದುವೆಯಾಗಿರುತ್ತಾರೆ. ಇಬ್ಬರ ಕುಟುಂಬದ ನಡುವೆ ದ್ವೇಷವಿರೋ ಕಾರಣ ಮದುವೆಗೂ ಮುಂಚೆಯೇ ಕಾಲೇಜಿನಲ್ಲಿ ಕಿತ್ತಾಡಿಕೊಳ್ಳುತ್ತಿರುತ್ತಾರೆ.

ಅಮೂಲ್ಯ ಮತ್ತು ವಲ್ಲಭ ಮದುವೆಯಾಗಿರುವ ವಿಷಯವನ್ನು ಕಾಲೇಜಿನಲ್ಲಿ ಯಾರ ಬಳಿಯಲ್ಲಿಯೂ ಹೇಳಿಕೊಂಡಿಲ್ಲ. ಮದುವೆಯಾದ್ರೂ ಮೊದಲಿನಂತೆಯೇ ಕಾಲೇಜಿನಲ್ಲಿ ಇಬ್ಬರು ಕಿತ್ತಾಡಿಕೊಳ್ಳುತ್ತಲೇ ಓಡಾಡಿಕೊಂಡಿದ್ದರು. ಇದೀಗ ಜಗಳದ ವೇಳೆ ಬಚ್ಚಿಟ್ಟ ಸತ್ಯವನ್ನು ಇಬ್ಬರು ಬಾಯ್ಬಿಟ್ಟಿದ್ದಾರೆ. ಇವರ ಮಾತುಗಳನ್ನು ಕೇಳಿ ಸ್ನೇಹಿತರು ಶಾಕ್ ಆಗಿದ್ದಾರೆ.

ಒಪ್ಪಿಗೆ ಇಲ್ಲದ ಮದುವೆಯಾಗಿದ್ದರಿಂದ ವಲ್ಲಭ ಮತ್ತು ಅಮೂಲ್ಯ ರೂಮ್‌ನಲ್ಲಿಯೂ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಮಂಚಕ್ಕಾಗಿಯೂ ಇಬ್ಬರ ನಡುವೆ ಜಗಳ ನಡೆದಿತ್ತು. ಮಂಚದ ಮೇಲೆ ವಲ್ಲಭ ಮಲಗಿದ್ರೆ, ಕೆಳಗೆ ಅಮೂಲ್ಯ ಮಲಗುತ್ತಾಳೆ. ಇದೀಗ ಸ್ನೇಹಿತರ ಮುಂದೆ ಇದೇ ವಿಷಯದ ಬಗ್ಗೆ ಮಾತನಾಡಿ ತಗ್ಲಾಕೊಂಡಿದ್ದಾರೆ.

ನಾನು ಲ್ಯಾಪ್‌ಟಾಪ್ ಕೊಟ್ಟಿದ್ದರಿಂದಲೇ ನಿನ್ನ ಸೆಮಿನಾರ್ ರೆಡಿಯಾಗಿದೆ ಎಂದು ವಲ್ಲಭ ಹೇಳಿದ್ರೆ, ಕೊಟ್ಟೆ ಅಷ್ಟೆ. ಆದ್ರೆ ಬೆವರು ಸುರಿಸಿ ರಾತ್ರಿಯೆಲ್ಲಾ ಕುಳಿತು ಪ್ರಸೆಂಟೇಷನ್ ರೆಡಿ ಮಾಡಿದ್ದು ನಾನು ಎಂದು ಅಮೂಲ್ಯ ತಿರುಗೇಟು ಕೊಡ್ತಾಳೆ. ಸೆಮಿನಾರ್‌ನಲ್ಲಿ ನಾನೇ ಗೆಲ್ಲೋದು ಎಂದು ಪರಸ್ಪರ ಸವಾಲು ಹಾಕಿಕೊಳ್ಳುತ್ತಾರೆ. ಕೊನೆಗೆ ಸೋತವರು ಏನು ಕೊಡೋದು ಎಂದು ಅಮೂಲ್ಯ ಕೇಳಿದಾಗ ವಲ್ಲಭ ಮಂಚ ಎಂದು ಹೇಳುತ್ತಾನೆ.

ಇದನ್ನೂ ಓದಿ: ನಂದಗೋಕುಲ ಧಾರಾವಾಹಿಯಲ್ಲಿ ಅಣ್ಣನ ಮದುವೆ, ರಿಯಲ್ ಆಗಿ ತಂಗಿ ಮದುವೆ; ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ!

ವಲ್ಲಭ ಮಂಚ ಅಂತ ಹೇಳುತ್ತಿದ್ದೆಲ್ಲಾ ಗೆಳೆಯರು ಶಾಕ್ ಆಗಿದ್ದಾರೆ. ಇತ್ತ ಅಮೂಲ್ಯ ಜೊತೆ ಉಪನ್ಯಾಸಕನೋರ್ವ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದಕ್ಕೆ ಅಮೂಲ್ಯ ಕಪಾಳಕ್ಕೆ ಏಟು ನೀಡಿದ್ದಾಳೆ. ಇದರಿಂದ ಕೋಪಗೊಂಡ ಉಪನ್ಯಾಸಕ, ಅಮೂಲ್ಯಾಳ ಲ್ಯಾಪ್‌ಟಾಪ್ ಬೀಳುವಂತೆ ಮಾಡಿದ್ದಾನೆ.

ಇದನ್ನೂ ಓದಿ: ಓ ಹಿರಿಯ ಸೊಸೆ ಪ್ರಿಯಾ ಎಲ್ಲಾ ಓಕೆ ಅಮ್ಮಾ? ಕೊನೆಗೆ ಯಾಕೆ ಇಷ್ಟು ಕೆಟ್ಟ ಬುದ್ದಿ, ಅಮ್ಮು-ಮೀನಾ ಪಾಪ!

Source link
ಬೆಡ್‌ರೂಮ್ ಮಂಚಕ್ಕಾಗಿ ಕಾಲೇಜಿನಲ್ಲಿ ಕಿತ್ತಾಡಿಕೊಂಡ ಅಮೂಲ್ಯ-ವಲ್ಲಭ; ಬಯಲಾಯ್ತು ಬಚ್ಚಿಟ್ಟ ರಹಸ್ಯ!