Headlines

ಶೀಘ್ರದಲ್ಲಿ Bhargavi LLB Serial ಮುಗಿತಿದ್ಯಾ? ಹೊಸ ಅಧ್ಯಾಯದ ಸೂಚನೆಯಾ?

ಶೀಘ್ರದಲ್ಲಿ Bhargavi LLB Serial ಮುಗಿತಿದ್ಯಾ? ಹೊಸ ಅಧ್ಯಾಯದ ಸೂಚನೆಯಾ?

ಶೀಘ್ರದಲ್ಲಿ Bhargavi LLB Serial ಮುಗಿತಿದ್ಯಾ? ಹೊಸ ಅಧ್ಯಾಯದ ಸೂಚನೆಯಾ?

’ಭಾರ್ಗವಿ LLB’ ಧಾರಾವಾಹಿಯಲ್ಲಿ ಏನಾಗಲಿದೆ ಎಂಬ ಕುತೂಹಲ ಶುರುವಾಗಿದೆ. ವಿಶಿಷ್ಟ ಕಥೆ ಮೂಲಕ ಮನಗೆದ್ದಿರುವ ಈ ಸೀರಿಯಲ್‌, ಈಗ ಸೀರಿಯಲ್ ದಿಕ್ಕನ್ನೇ ಬದಲಿಸುವ ತಿರುವಿನಲ್ಲಿದೆ. ಇಷ್ಟುದಿನ ವಕೀಲೆಯಾಗಿ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಭಾರ್ಗವಿಯ ಬದುಕಿನಲ್ಲಿ ಈಗ ವಿಧಿ ಆಟ ಆಡಿದೆ.

ಭಾರ್ಗವಿಯ ತಂದೆ ರವೀಂದ್ರ ಭಟ್ಕಳ್‌ ಅವರು ಪ್ರಭಾವಿ ವಕೀಲ ಜೆಪಿ ಪಾಟೀಲ್‌ನಿಂದ ವಕೀಲಿಕೆ ತ್ಯಜಿಸಿದ್ದರು. ಆಮೇಲೆ ಭಾರ್ಗವಿಯು ಕೆಲ ಕೇಸ್‌ಗಳನ್ನು ಗೆದ್ದು, ಮತ್ತೆ ಅದೇ ಕೋರ್ಟ್‌ಗೆ ತನ್ನ ತಂದೆಯ್ನು ಕರೆತರಬೇಕು ಎಂದುಕೊಂಡಿದ್ದಳು. ಭಾರ್ಗವಿಯ ಕನಸು ಈಡೇರಿತ್ತು. ಇದೀಗ ಆ ಗೆಲುವನ್ನು ಸಂಭ್ರಮಿಸಲು ಅವಳ ಅಪ್ಪನೇ ಇಲ್ಲ!

ಬಂದಿದ್ದನ್ನೆಲ್ಲ ಎದುರಿಸಿದ್ದ ಭಾರ್ಗವಿಗೆ ಈಗ ಅಪ್ಪ ಇಲ್ಲ ಎನ್ನೋದು ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ತಂದೆ ರವೀಂದ್ರ ಭಟ್ಕಳ್ ತೀರಿಕೊಂಡಿದ್ದಾರೆ. ಈ ಸಾವು ನಿಜಕ್ಕೂ ಕೇವಲ ಅಪಘಾತವೋ ಅಥವಾ ಭಾರ್ಗವಿಯ ಶತ್ರುಗಳು ಮಾಡಿದ ಸಂಚು ಇರಬಹುದಾ ಎಂಬ ಪ್ರಶ್ನೆ ಮೂಡಿದೆ.

ತಂದೆಯ ಸಾವಿನಿಂದ ಭಾರ್ಗವಿ ತಾಯಿ ಕಂಗಾಲಾಗಿದ್ದಾಳೆ. ಅಪ್ಪನ ಸಾವಿಗೆ ವಕೀಲ ವೃತ್ತಿಯೇ ಕಾರಣ, ನೀನು ಕೆಲಸ ಬಿಡು ಎಂದು ತಾಯಿ ಹೇಳಿದ್ದಾಳೆ. ಅಪ್ಪನ ಚಿತೆಯ ಮುಂದೆಯೇ ಭಾರ್ಗವಿಯು ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ತಾಯಿ ಹೇಳುವವರೆಗೂ ವಕೀಲಿಕೆಯ ಕೋಟ್‌ ಧರಿಸುವುದಿಲ್ಲ ಎಂದು ಅವಳು ಶಪಥ ಮಾಡಿದ್ದಾಳೆ. ಈ ಮೂಲಕ ಭಾರ್ಗವಿ ತನ್ನ ವೃತ್ತಿಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾಳೆ.

ಲಾಯರ್‌ ಕೋಟ್‌ ಕಳಚಿಟ್ಟು ಭಾರ್ಗವಿ ಮುಂದೆ ಏನು ಮಾಡುತ್ತಾಳೆ? ಈಗ ಅವಳು ಸಾಮಾನ್ಯ ಯುವತಿಯಾಗಿ ಬದುಕುತ್ತಾಳಾ? ರವೀಂದ್ರ ಭಟ್ಕಳರ ಸಾವು ಕೊಲೆಯಾಗಿದ್ದರೆ, ಅದರ ಹಿಂದಿರುವವರು ಯಾರು? ಕೋರ್ಟ್ ಮೆಟ್ಟಿಲು ಹತ್ತದೆ, ಭಾರ್ಗವಿ ತನ್ನ ತಂದೆಯ ಸಾವಿಗೆ ನ್ಯಾಯ ಕೊಡುತ್ತಾಳಾ? ಇದನ್ನೆಲ್ಲ ನೋಡಿದರೆ ಭಾರ್ಗವಿ ಧಾರಾವಾಹಿ ಕಥೆ ಇಲ್ಲಿಗೆ ಮುಗಿಯಿತೇ ಅಥವಾ ಇದು ಹೊಸ ಅಧ್ಯಾಯದ ಆರಂಭವೇ ಎಂಬ ಪ್ರಶ್ನೆ ಬರುವುದು.

ಮುಂದಿನ ಸಂಚಿಕೆಗಳಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಭಾರ್ಗವಿಯ ಈ ಹೊಸ ಅವತಾರ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ‘ಭಾರ್ಗವಿ LLB’ ಬದಲಾದ ಸಮಯದಲ್ಲಿ ರಾತ್ರಿ 9:30ಕ್ಕೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Source link

Leave a Reply

Your email address will not be published. Required fields are marked *