BBK 12: ದೇವರ ದಯೆಯಿಂದ‌ ನಿನ್ನ ಮೈಕೈ ಮೂಳೆ ಮುರಿಯೋ ಟಾಸ್ಕ್‌ ಸಿಗಲಿ-ಗಿಲ್ಲಿ ನಟನಿಗೆ ಒಪನ್‌ ಆಗಿ ಹೇಳಿದ ರಜತ್! | Colors Kannada Bigg Boss Kannada Season 12 Rajath On Gilli Nata Task

BBK 12: ದೇವರ ದಯೆಯಿಂದ‌ ನಿನ್ನ ಮೈಕೈ ಮೂಳೆ ಮುರಿಯೋ ಟಾಸ್ಕ್‌ ಸಿಗಲಿ-ಗಿಲ್ಲಿ ನಟನಿಗೆ ಒಪನ್‌ ಆಗಿ ಹೇಳಿದ ರಜತ್! | Colors Kannada Bigg Boss Kannada Season 12 Rajath On Gilli Nata Task


15

ಬಿಗ್‌ ಬಾಸ್‌ ಏನಾದರೂ ನ್ಯಾಯ ಒದಗಿಸುತ್ತಾರೆ ಅಂದ್ರೆ

Image Credit : colors kannada

ಬಿಗ್‌ ಬಾಸ್‌ ಏನಾದರೂ ನ್ಯಾಯ ಒದಗಿಸುತ್ತಾರೆ ಅಂದ್ರೆ

ಬಿಗ್‌ ಬಾಸ್‌ ನಿನ್ನ ಆಟವನ್ನು ನೋಡುತ್ತಿರುತ್ತಾರೆ. ದೇವರ ದಯೆಯಿಂದ ಬಿಗ್‌ ಬಾಸ್‌ ಮನೆಯಲ್ಲಿ ಬಿಗ್‌ ಬಾಸ್‌ ಏನಾದರೂ ನ್ಯಾಯ ಒದಗಿಸುತ್ತಾರೆ ಅಂದ್ರೆ ನಿನ್ನ ಮೈ ಕೈ ಮೂಳೆ ಮುರಿಯಬೇಕು ಅಂತ ಟಾಸ್ಕ್‌ ಕೊಡಬೇಕು ಎಂದು ರಜತ್‌ ಅವರು ಹೇಳಿದ್ದಾರೆ.

25

ಧನುಷ್‌ ಜೊತೆ ಫೈಟ್‌ ಮಾಡು

Image Credit : colors kannada

ಧನುಷ್‌ ಜೊತೆ ಫೈಟ್‌ ಮಾಡು

ನೀನು ರಘು ಅಣ್ಣನ ಜೊತೆ ಫೈಟ್‌ ಮಾಡೋದು ಬೇಡ, ಧನುಷ್‌ ನಿನ್ನ ಸೈಜ್‌ ಇದ್ದಾನೆ. ಧನುಷ್‌ ಜೊತೆ ಫೈಟ್‌ ಮಾಡು ಎಂದು ರಜತ್‌ ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ಏನೂ ಬೇಡ ಧನುಷ್‌ ನನ್ನ ಜೊತೆ ಫೈಟ್‌ ಮಾಡೋಕೆ ರೆಡಿ ಇಲ್ಲ, ಕಷ್ಟಪಟ್ಟು ಹನ್ನೆರಡನೇ ವಾರಕ್ಕೆ ಬಂದಿದ್ಯಾ, ಸುಮ್ನಿರು” ಎಂದಿದ್ದಾರೆ. ಆಗ ರಜತ್‌ ಅವರು, “ಧನುಷ್‌ ಏನು ಬೇಕಿದ್ರೂ ಆಗಲಿ, ನೀನು ಆಟ ಆಡು” ಎಂದು ಹೇಳಿದ್ದಾರೆ.

35

ಟ್ರೈ ಮಾಡು ಧನುಷ್

Image Credit : colors kannada

ಟ್ರೈ ಮಾಡು ಧನುಷ್

ರಜತ್‌ ಅವರು, “ಗಿಲ್ಲಿ ನಟ ಸ್ಟ್ರಾಂಗ್‌ ಇರಬಹುದು, ಫೈಟ್‌ ಕೊಡಬಹುದು. ನೀನು ಫೈಟ್‌ ಮಾಡು, ಸೋತರೂ ಪರವಾಗಿಲ್ಲ. ಕೊನೇಪಕ್ಷ ಟ್ರೈ ಮಾಡು” ಎಂದು‌ ಧನುಷ್‌ ಗೌಡಗೆ ಹೇಳಿದ್ದಾರೆ. ಸ್ಪಂದನಾ ಸೋಮಣ್ಣ ಅವರು ಧನುಷ್‌ಗೆ ಟ್ರೈ ಮಾಡು ಎಂದಿದ್ದಾರೆ.

45

ಈಗ ಟಾಸ್ಕ್‌ ಆಡಲೇಬೇಕು

Image Credit : colors kannada

ಈಗ ಟಾಸ್ಕ್‌ ಆಡಲೇಬೇಕು

ಧನುಷ್‌ ಅವರು “ಹನ್ನೆರಡು ವಾರದಿಂದ ಟಾಸ್ಕ್‌ ಆಡದೆ ಇಲ್ಲಿಯವರೆಗೆ ಬಂದೆ. ಈ ವಾರ ತಪ್ಪಿಸಿಕೊಳ್ಳೋಕೆ ಆಗೋದಿಲ್ಲ. ಎರಡು ಟಾಸ್ಕ್‌ ಆಡಬೇಕು” ಎಂದು ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ನೀನು ಯೋಚನೆ ಮಾಡಬೇಡ. ಫೀನಿಕ್ಸ್‌ ಥರ ಎದ್ದು ಬರ್ತೀನಿ” ಎಂದಿದ್ದಾರೆ.

55

ಫೀನಿಕ್ಸ್‌ ಥರ ಎದ್ದು ಬರ್ತೀನಿ

Image Credit : colors kannada

ಫೀನಿಕ್ಸ್‌ ಥರ ಎದ್ದು ಬರ್ತೀನಿ

ಗಿಲ್ಲಿ ನಟ ಅವರು ಫೀನಿಕ್ಸ್‌ ಥರ ಎದ್ದು ಬರ್ತೀನಿ ಎಂದಿರೋದನ್ನು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೊಂದು ಕಡೆ ಗಿಲ್ಲಿ ನಟನ ಮೂಳೆ ಮುರಿಬೇಕು ಎಂದಿರೋದಕ್ಕೆ ಅನೇಕರು ಬೇಸರ ಹೊರಹಾಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

Padmashree Bhat

ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.



Source link

Leave a Reply

Your email address will not be published. Required fields are marked *