ಧ್ರುವಂತ್​ಗೆ ಸೀಸನ್ ಚಪ್ಪಾಳೆ ಬದಲು ವಾರದ ಚಪ್ಪಾಳೆ; ನಿರ್ಧಾರ ಬದಲಿಸಿದ ಬಿಗ್ ಬಾಸ್

ಧ್ರುವಂತ್​ಗೆ ಸೀಸನ್ ಚಪ್ಪಾಳೆ ಬದಲು ವಾರದ ಚಪ್ಪಾಳೆ; ನಿರ್ಧಾರ ಬದಲಿಸಿದ ಬಿಗ್ ಬಾಸ್


ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ (Kicchana Chappale) ಸೇರಿಸಲಾಗಿದೆ. ಪ್ರತಿ ವಾರ ಚೆನ್ನಾಗಿ ಆಡಿದ ಸ್ಪರ್ಧಿಗೆ ಈ ಗೌರವ ಸಿಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ಇಡೀ ಸೀಸನ್ ಅನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಚಪ್ಪಾಳೆ ನೀಡಿದ್ದರು. ಆದರೆ ಅವರ ಈ ನಿರ್ಧಾರಕ್ಕೆ ವೀಕ್ಷಕರಿಂದ ವಿರೋಧ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅದರ ಪರಿಣಾಮವಾಗಿ ಬಿಗ್ ಬಾಸ್ (BBK 12) ಆಯೋಜಕರು ನಿರ್ಧಾರ ಬದಲಾಯಿಸಿದ್ದಾರೆ. ಧ್ರುವಂತ್ (ಧ್ರುವಂತ್) ಅವರಿಗೆ ಸೀಸನ್ ನ ಚಪ್ಪಾಳೆ ಬದಲಿಗೆ ವಾರದ ಚಪ್ಪಾಳೆ ನೀಡಲಾಗುತ್ತದೆ.

‘ಮೊಟ್ಟ ಮೊದಲ ಕಿಚ್ಚನ ಸೀಸನ್ ಚಪ್ಪಾಳೆ’ ಎಂದು ಧ್ರುವಂತ್ ಅವರ ಫೋಟೋವನ್ನು ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈಗ ‘ಈ ವಾರದ ಕಿಚ್ಚನ ಚಪ್ಪಾಳೆ’ ಎಂದು ಹೊಸ ಪೋಸ್ಟ್ ಹಾಕಲಾಗಿದೆ. ಈ ಮೊದಲು ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಲಾಗಿದೆ.

ಬಿಗ್ ಬಾಸ್ ಆಯೋಜಕರು ನಿರ್ಧಾರ ಬದಲಿಸಿದ್ದಕ್ಕೆ ವೀಕ್ಷಕರಿಗೆ ಖುಷಿ ಆಗಿದೆ. ಇಡೀ ಸೀಸನ್ ನ ಚಪ್ಪಾಳೆ ಪಡೆಯುವಷ್ಟು ಉತ್ತಮ ಧ್ರುವಂತ್ ಆಡಿಲ್ಲ ಎಂಬುದು ವೀಕ್ಷಕರ ಅಭಿಪ್ರಾಯ. ಇಡೀ ಸೀಸನ್ ಚಪ್ಪಾಳೆ ಗಿಲ್ಲಿಗೆ ಸಲ್ಲಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ವಾರದ ಚಪ್ಪಾಳೆಯನ್ನು ಅಶ್ವಿನಿ ಗೌಡ ಅವರಿಗೆ ನೀಡಲಾಗಿದೆ.

ಧ್ರುವಂತ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದ ಮಧ್ಯೆ ಸೋಲು ಒಪ್ಪಿಕೊಂಡಿದ್ದರು. ತಾವಾಗಿಯೇ ಆಟ ತೊರೆಯುವ ನಿರ್ಧಾರ ಮಾಡಿದೆ. ಆದರೆ ಸುದೀಪ್ ಅವರು ಪ್ರೋತ್ಸಾಹದ ಮಾತುಗಳನ್ನು ಹೇಳಿದ ನಂತರ ಆಟ ಮುಂದುವರಿಸಿದ್ದರು. ಇಡೀ ಮನೆಯಲ್ಲಿ ಅವರು ಹೆಚ್ಚು ಬೆರೆತಿದ್ದು ಅಶ್ವಿನಿ ಗೌಡ ಮತ್ತು ಮಲ್ಲಮ್ಮ ಜೊತೆ ಮಾತ್ರ. ಅವರಿಂದ ವೀಕ್ಷಕರಿಗೆ ಹೆಚ್ಚು ಮನರಂಜನೆ ಸಿಕ್ಕಿಲ್ಲ. ಅವರಿಗೆ ಇಡೀ ಸೀಸನ್ ಚಪ್ಪಾಳೆ ನೀಡುವುದು ಸೂಕ್ತವಲ್ಲ ಎಂಬುದು ವೀಕ್ಷಕರ ಅಭಿಪ್ರಾಯ.

ಇದನ್ನೂ ಓದಿ: ಕಿಚ್ಚನ ಚಪ್ಪಾಳೆ: ಸುದೀಪ್ ಇನ್ಸ್ಟಾಗ್ರಾಮ್ ಪೋಸ್ಟ್ ತುಂಬ ಅಸಮಾಧಾನದ ಕಮೆಂಟ್ಸ್

ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟ ಅವರ ಹವಾ ಜೋರಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಒಂದು ಮಿಲಿಯನ್ಗಿಂತ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಗಿಲ್ಲಿಯೇ ಈ ಬಾರಿ ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಲಕ್ಷಾಂತರ ಕಮೆಂಟ್‌ಗಳು ಬಂದಿವೆ. ಜನವರಿ 17 ಮತ್ತು 18 ರಂದು ಫಿನಾಲೆ ಹೆಚ್ಚಾಗಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 3:28 pm, ಮಂಗಳವಾರ, 13 ಜನವರಿ 26





Source link

Leave a Reply

Your email address will not be published. Required fields are marked *