Ramachari Serial ಕ್ಲೈಮ್ಯಾಕ್ಸ್‌ ಎಪಿಸೋಡ್‌ನಲ್ಲಿ ಏನಾಗಲಿದೆ? ಕೊನೆ ದಿನದ ಶೂಟಿಂಗ್‌ ಫೋಟೋಗಳಿವು!

Ramachari Serial ಕ್ಲೈಮ್ಯಾಕ್ಸ್‌ ಎಪಿಸೋಡ್‌ನಲ್ಲಿ ಏನಾಗಲಿದೆ? ಕೊನೆ ದಿನದ ಶೂಟಿಂಗ್‌ ಫೋಟೋಗಳಿವು!

Ramachari Serial ಕ್ಲೈಮ್ಯಾಕ್ಸ್‌ ಎಪಿಸೋಡ್‌ನಲ್ಲಿ ಏನಾಗಲಿದೆ? ಕೊನೆ ದಿನದ ಶೂಟಿಂಗ್‌ ಫೋಟೋಗಳಿವು!

Ramachari Kannada Serial Today Episode: ಮೌನ ಗುಡ್ಡೇಮನೆ, ರಿತ್ವಿಕ್‌ ಕೃಪಾಕರ್‌ ನಟನೆಯ ರಾಮಾಚಾರಿ ಧಾರಾವಾಹಿ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಈಗ ಈ ಸೀರಿಯಲ್‌ ಅಂತ್ಯವಾಗುವ ಸಮಯ ಬಂದಿದೆ. ಹಾಗಾದರೆ ಕೊನೆಯಲ್ಲಿ ಏನಾಯ್ತು?

ರಾಮಾಚಾರಿ ಹಾಗೂ ಚಾರುಲತಾ ಅನಿರೀಕ್ಷಿತವಾಗಿ ಮದುವೆಯಾದರು. ಆ ಬಳಿಕ ರಾಮಾಚಾರಿ ಕೂಡ ಚಾರುಳನ್ನು ಲವ್‌ ಮಾಡಲು ಆರಂಭಿಸಿದನು. ಇಷ್ಟವರ್ಷಗಳಿಂದ ದುಡ್ಡಿನ ಮದದಲ್ಲಿ ಮೆರೆಯುತ್ತಿದ್ದ ಚಾರು ಸಂಪೂರ್ಣ ಬದಲಾದಳು, ನಾರಾಯಾಣಾಚಾರ್‌ ಕುಟುಂಬದ ಸೊಸೆಯಾದಳು.

ಮಾನ್ಯತಾಳಿಗೆ ಮಗಳು ಚಾರುಲತಾ ದೊಡ್ಡವರ ಮನೆಯ ಸೊಸೆ ಆಗಬೇಕು, ಅವಳು ರಾಮಾಚಾರಿ ಜೀವನದಲ್ಲಿ ಇರಬಾರದು ಎಂದು ಏನೇನೋ ಪ್ರಯತ್ನಪಟ್ಟಳು. ಆದರೆ ಚಾರು ಮಾತ್ರ ರಾಮಾಚಾರಿಯನ್ನು ಬಿಟ್ಟುಕೊಡಲೇ ಇಲ್ಲ.

ರಾಮಾಚಾರಿ ಸಹೋದರ ಕೃಷ್ಣನನ್ನು ನವದೀಪ್‌ ಕೊಲೆ ಮಾಡಿದ್ದನು. ಚಾರುಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಬೇಕು, ಅವರ ಆಸ್ತಿಯನ್ನು ಪಡೆಯಬೇಕು ಎಂದು ನವದೀಪ್‌ ಅಂದುಕೊಂಡಿದ್ದನು. ಇದರಿಂದಲೇ ರಾಮಾಚಾರಿ ಕುಟುಂಬಕ್ಕೆ ನೂರಾರು ಸಮಸ್ಯೆ ಎದುರಾಗಿದೆ.

ಚಾರು ಮಗಳನ್ನು ನವದೀಪ್‌ ಕಿಡ್ನ್ಯಾಪ್‌ ಮಾಡಿದ್ದನು. ಮಗುವನ್ನು ಕಾಪಾಡಿಕೊಳ್ಳಲು ಚಾರು-ಚಾರಿ ಒದ್ದಾಡಿದ್ದಳು. ಅದರಂತೆ ಮಾನ್ಯತಾ ಕೂಡ ಇವರ ಸಹಾಯಕ್ಕೆ ಧಾವಿಸಿದರು. ಮಾನ್ಯತಾ ತಾನಾಗಿಯೇ ಜೈಲು ಪಾಲಾಗಿದ್ದಾಳೆ. ಅಂದಹಾಗೆ ಎಲ್ಲರೂ ನವದೀಪ್‌ ಹಾಗೂ ಮಗನಿಗೆ ಹೊಡೆದರು.

ಕೃಷ್ಣನ ಫೋಟೋ ಒಡೆದು ಹೋಯ್ತು, ಆ ಫೋಟೋದ ಕೆಳಗಡೆ ನವದೀಪ್‌ ಮಲಗಿದ್ದನು. ಆ ಗಾಜಿನ ಚೂರು ನವದೀಪ್‌ ಮೈಮೇಲೆ ಬಿದ್ದಿದೆ. ಅಲ್ಲಿಗೆ ನವದೀಪ್‌ ತೀರಿಕೊಂಡಿದ್ದಾನೆ. ಆಮೇಲೆ ಅವನ ಮಗ ಕೂಡ ಜೈಲು ಪಾಲಾಗಿದ್ದಾನೆ.

ರುಕ್ಮಿಣಿ ಕೂಡ ಜೈಲು ಪಾಲಾಗಿದ್ದಾಳೆ. ಚಾರುಲತಾ ತಂದೆ ಅವರ ಎಲ್ಲ ಆಸ್ತಿಯನ್ನು ಟ್ರಸ್ಟ್‌ಗೆ ಬರೆದಿದ್ದಾರೆ. ಜೈಲಿನಿಂದ ಹೊರಗಡೆ ಬಂದಮೇಲೆ ಆ ಟ್ರಸ್ಟ್‌ನಲ್ಲಿ ರುಕ್ಮಿಣಿ, ಮಾನ್ಯತಾ ಸೇವೆ ಮಾಡಲಿದ್ದಾರಂತೆ.

ಚಾರುಲತಾ ಮಗಳಿಗೆ ಕೃಷ್ಣವೇಣಿ ಎಂದು ಹೆಸರು ಇಟ್ಟಿದ್ದಾರೆ. ಈ ನಾಮಕರಣದಲ್ಲಿ ಎಲ್ಲರೂ ಭಾಗಿ ಆಗಿದ್ದಾರೆ. ಕೃಷ್ಣ ಈಗ ಕೃಷ್ಣವೇಣಿಯಾಗಿ ಬಂದಿದ್ದಾನೆ ಎಂದು ಎಲ್ಲರೂ ನಂಬಿದ್ದಾರೆ.

ಚಾರುಲತಾ-ಮೌನ ಗುಡ್ಡೇಮನೆ

ರಾಮಾಚಾರಿ- ರಿತ್ವಿಕ್‌ ಕೃಪಾಕರ್‌

ಅಂದಹಾಗೆ ಗುರು ದತ್‌, ಝಾನ್ಸಿ ಕಾವೇರಪ್ಪ, ಗುರುದತ್‌, ಅಂಜಲಿ, ಶಂಕರ್‌ ಅಶ್ವತ್ಥ್‌ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದರು.

Source link

Leave a Reply

Your email address will not be published. Required fields are marked *