ಈಗಿನ ಕಾಲದಲ್ಲಿ ಕೆಲಸ (ಕೆಲಸ) ಗಿಟ್ಟಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಪ್ರತಿಭೆ, ಪರಿಶ್ರಮ, ಕೆಲಸದ ಆಸಕ್ತಿ ಎಲ್ಲವೂ ಇದ್ರು, ಸಂದರ್ಶನದಲ್ಲಿ ಕೊನೆಗೆ ನೀವು ರಿಜಕ್ಟ್ ಎಂದಾಗ ಆಗೋ ಬೇಜಾರು ಅಷ್ಟಿಷ್ಟಲ್ಲ. ಇನ್ನೂ ಓದಿದವರೂ ತಮ್ಮ ಓದಿಗಿಂತ ತಕ್ಕದಾದ ಕಡಿಮೆ ಸಂಬಳದ ಕೆಲಸ ಸಿಕ್ಕರೂ ಮಾಡೋಕೆ ರೆಡಿ ಇದ್ದಾರೆ. ಆದರೆ ಕಂಪನಿಯವರು ಅಧಿಕ ಅರ್ಹತೆ ಎಂದು ಸೆಲೆಕ್ಟ್ ಮಾಡೋದಿಲ್ಲ. ಈಗ ಈ ಯುವತಿಯದ್ದು (ಯುವತಿಯರು) ಅದೇ ಪರಿಸ್ಥಿತಿಯಾಗಿದೆ. ಕಾರ್ಯಕ್ರಮದ ಸಹಾಯಕ ಹುದ್ದೆಗೆ ಸಂದರ್ಶನ ನೀಡಿದ್ದ ಯುವತಿಯು ಬಹಳ ನಿರೀಕ್ಷೆಯಲ್ಲಿದೆ, ಆದರೆ ಕಂಪನಿಯು ಈಕೆಯನ್ನು ಸೆಲೆಕ್ಟ್ ಮಾಡದೆ ಈ ಕಾರಣವನ್ನು ನೀಡಿದೆ. ಕಂಪನಿಯ ಕಡೆಯಿಂದ ಬಂದ ಮೇಲ್ ನೋಡಿ ಶಾಕ್ ಆಗಿದ್ದು, ಆ ಬಳಿಕ ಏನಾಯ್ತು ಎಂದು ವಿವರಿಸಿದ್ದಾಳೆ.
r/ jobs ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಯುವತಿಯೂ ತಾನು ಸಂದರ್ಶನ ನೀಡಿದ್ದ ಹುದ್ದೆಯಿಂದ ತಿರಸ್ಕರಿಸಲಾಗಿದೆ ಎಂದು ವಿವರಿಸಲಾಗಿದೆ. ಕಂಪನಿಯು ತನ್ನ ಅರ್ಹತೆಗಳಿಗೆ ಹೆಚ್ಚು ಸೂಕ್ತವಾದ ಮತ್ತೊಂದು ಹುದ್ದೆಯ ಬಗ್ಗೆ ತಿಳಿಸುತ್ತಿದೆಯೇ ಅಥವಾ ತನಗೆ ಉದ್ಯೋಗವನ್ನು ನೀಡುತ್ತಿದೆಯೇ ಎಂದು ಗೊಂದಲಕ್ಕೆ ಒಳಗಾಗಿದೆ. ರೆಡ್ಡಿಟ್ ಖಾತೆಯಲ್ಲಿ ಯುವತಿಯೂ ನನಗೆ 26 ವರ್ಷ ವಯಸ್ಸು. ನಾನು ಪ್ರೋಗ್ರಾಂ ಅಸಿಸ್ಟೆಂಟ್ ಹುದ್ದೆಗೆ ಸಂದರ್ಶನ ನೀಡಿದ್ದೆ. ಸಂದರ್ಶನ ತುಂಬಾ ಚೆನ್ನಾಗಿಯೇ ಇತ್ತು. ಮೇಲ್ ಕೂಡ ಬಂತು. ಇದು ಒಂದು ಆಫರ್ ಎಂದು ನನಗೆ ಅನಿಸಿದೆ ನಾನು ಬಹಳ ಉತ್ಸುಕಳಾಗಿದ್ದೆ. ಆದರೆ ಮೇಲ್ ಓದಿದಾಗ ನನ್ನನ್ನು ಹೈಲಿ ಕ್ವಾಲಿಫೈಡ್ ಎಂಬ ಕಾರಣ ನೀಡಿ ರಿಜೆಕ್ಟ್ ಮಾಡಿದೆ. ಕಂಪನಿಯ ಬೇರೆಯವರಿಗೆ ನೀವು ಹೆಚ್ಚು ಸೂಕ್ತರಾಗಿದ್ದೀರಿ ಇಮೇಲ್‌ನಲ್ಲಿ ತಿಳಿಸಲಾಗಿದೆ, ಕಂಪನಿಯು ತನಗೆ ಉದ್ಯೋಗ ನೀಡುವುದಾಗಿ ಕಂಪನಿ ಯುವತಿ ಹೇಳಿದ್ದಾಳೆ.
ಪೋಸ್ಟ್ ವೈರಲ್ ಇಲ್ಲಿದೆ ನೋಡಿ
ಇದು ನನಗೆ ಆಫರ್ ಸಿಕ್ಕಿರುವಂತೆ ತೋರುತ್ತಿದೆಯೇ ಅಥವಾ “ಇದನ್ನು ಪರಿಶೀಲಿಸಿ”!? byu/libramorninggg injobs
ಇದನ್ನೂ ಓದಿ
ಇದನ್ನೂ ಓದಿ:ವೈರಲ್: ತನ್ನ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳಿಲ್ಲ; ಉದ್ಯೋಗ ತೊರೆಯುವ ಹಿಂದಿನ ಕಾರಣ ತಿಳಿಸಿದ ಮಹಿಳೆ
ಈ ಪೋಸ್ಟ್ ವೈರಲ್ ಆಗುತ್ತಿರುವಾಗ ಬಳಕೆದಾರರೊಬ್ಬರು ಈ ಕಂಪನಿಯ ಅಭ್ಯರ್ಥಿಗೆ ಉದ್ಯೋಗ ನೀಡುವ ಬದಲು ಬೇರೆ ಹುದ್ದೆಯ ಬಗ್ಗೆ ತಿಳಿಸುತ್ತಿದ್ದಾರೆ. ಹೀಗಾಗಿ ನಿಮಗೆ ಯಾವ ಹುದ್ದೆ ಬೇಕು ಎಂದು ತಿಳಿಸಿ, ಅಲ್ಲಿ ಹುದ್ದೆ ಖಾಲಿಯಿದ್ದರೆ ನಿಮಗೆ ಜಾಬ್ ಸಿಗುತ್ತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಭಿನಂದನೆಗಳು! ತಕ್ಷಣವೇ ಸ್ಪಷ್ಟ ಸಂವಹನವಿಲ್ಲ, ಆದರೆ ಅವರು ಬಹುಶಃ ಆತುರದಲ್ಲಿದ್ದರು ಎಂದು ಕಾಣಿಸುತ್ತದೆ. ಇತರ ಬಳಕೆದಾರ ಈ ತರಹ ಉದ್ಯೋಗ ಯಾರಿಗೂ ಸಿಗುತ್ತೆ. ನೀವು ಉದ್ಯೋಗ ಯಾವುದಾದ್ರೂ ಏನು ಅಂದುಕೊಂಡ್ರಿ. ಆದರೆ ಕಂಪನಿಯು ನಿಮ್ಮ ಅಧಿಕ ಅರ್ಹತೆಯನ್ನು ಕಂಡುಕೊಂಡು ಉದ್ಯೋಗವನ್ನು ನೀಡಲು ಮುಂದಾಯಿತು, ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 4:22 pm, ಶನಿ, 18 ಅಕ್ಟೋಬರ್ 25