ಸೆಪ್ಟೆಂಬರ್ ಬಂತೆಂದರೆ ಬಿಗ್ಬಾಸ್ (ಬಿಗ್ ಬಾಸ್) ಸೀಸನ್ ಶುರುವಾಗುವುದಿಲ್ಲ. ಕನ್ನಡ ಸೇರಿದಂತೆ ದೇಶದ ಹಲವು ಭಾಷೆಗಳಲ್ಲಿ ಬಿಗ್ಬಾಸ್ ಹೊಸ ಸೀಸನ್ ಪ್ರಾರಂಭವಾಗಿದೆ. ಟಿವಿಗಳಲ್ಲಿ ಹಲವಾರು ಭಾಷೆಗಳಲ್ಲಿ ಹಲವಾರು ರೀತಿಯ ರಿಯಾಲಿಟಿ ಶೋ ಪ್ರಸಾರವಾಗುತ್ತದೆ. ಆದರೆ ಅತಿ ಹೆಚ್ಚು ವಿವಾದಕ್ಕೆ ಒಳಗಾಗುವುದು ಮತ್ತು ಜನಪ್ರಿಯವಾಗುವುದು ಸಹ ಬಿಗ್ಬಾಸ್ ರಿಯಾಲಿಟಿ ಶೋ. ಇತ್ತೀಚೆಗಷ್ಟೇ ಕನ್ನಡ ಬಿಗ್ಬಾಸ್ ಒಂದು ದಿನಗಳ ಕಾಲ ಬಂದ್ ಸಹ ಮಾಡಿಸಲಾಯಿತು. ಇದೀಗ ಬಿಗ್ಬಾಸ್ ವಿರುದ್ಧ ದೂರು ನೀಡಿ, ಶೋ ಅನ್ನು ಶಾಶ್ವತವಾಗಿ ಬಂದ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಂದಹಾಗೆ ದೂರು ನೀಡಲಾಗಿರುವುದು ಕನ್ನಡ ಬಿಗ್ಬಾಸ್ ವಿರುದ್ಧ ಅಲ್ಲ ಬದಲಾಗಿ ತೆಲುಗು ಬಿಗ್ಬಾಸ್ ವಿರುದ್ಧ. ತೆಲುಗು ಬಿಗ್ಬಾಸ್ ಅವರು ಶೀಘ್ರವೇ ಬಂದ್ ಮಾಡಬೇಕು ಹಾಗೂ ಆಯೋಜಕರ ವಿರುದ್ಧ ಕ್ರಮಕೈಗೊಂಡ ಕಮ್ಮಾರಿ ಶ್ರೀನಿವಾಸ ಮತ್ತು ಬಾಗನ್ನಗಾರಿ ರವೀಂದ್ರ ರೆಡ್ಡಿ ಅವರು ಹೈದರಾಬಾದ್ನ ಜುಲೈ ಹಿಲ್ಸ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ತೆಲುಗು ಬಿಗ್ಬಾಸ್ ಶೋ ಸಮಾಜಕ್ಕೆ ಹಾನಿಕಾರಕ ಈ ಶೋ ಯುವಕರನ್ನು ಹಾಳು ಮಾಡುತ್ತಿದೆ ಎಂದು ಇಬ್ಬರು ಆರೋಪಿಸಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅರ್ಧ ರಾತ್ರಿಯಲ್ಲಿ ಕೇಳಿತು ಗೆಜ್ಜೆ ಸದ್ದು
‘ಬಿಗ್ಬಾಸ್ ಶೋನಲ್ಲಿ ಸ್ಪರ್ಧಿಗಳು ಸತತವಾಗಿ ಕೆಟ್ಟ ಶಬ್ದಗಳನ್ನು ಬಳಸುತ್ತಾರೆ. ಅಶ್ಲೀಲ ಮಾತುಗಳನ್ನು ಆಡುತ್ತಾರೆ. ಪದೇ ಪದೇ ಜಗಳ ಆಡುತ್ತಾರೆ. ಕೆಟ್ಟ ವರ್ತನೆಗಳನ್ನು ತೋರುತ್ತಾರೆ. ಸಾಮಾಜಿಕವಾಗಿ ಸಹನೀಯವಲ್ಲದ ರೀತಿ ವರ್ತಿಸುತ್ತಾರೆ. ಈ ರೀತಿಯ ಕಾರ್ಯಕ್ರಮಗಳು ಯುವಕರನ್ನು ದಾರಿ ತಪ್ಪಿಸುತ್ತವೆ. ಯುವಕರು ಕೆಟ್ಟ ವರ್ತನೆ ತೋರುವಂತೆ, ಅಗ್ರೆಸ್ಸಿವ್ ಆಗಿ ವರ್ತಿಸುವಂತೆ, ಸಾಮಾಜಿಕ-ನಿಯಮಗಳನ್ನು ಬಿಟ್ಟು ಬದುಕಲು ಪ್ರೇರೇಪಣೆ ನೀಡುತ್ತವೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಾವು (ದೂರುದಾರರು) ಗಮನಿಸುವಂತೆ ಈ ಶೋನಲ್ಲಿ ಪರಸ್ಪರ ಕಿತ್ತಾಡುವುದನ್ನು, ಪರಸ್ಪರ ಬೈದಾಡಿಕೊಳ್ಳುವುದನ್ನು, ಅಗೌರವವಾಗಿ ನಡೆದುಕೊಳ್ಳುವುದನ್ನು ಆಯ್ಕೆಮಾಡಿಕೊಳ್ಳುವುದಿಲ್ಲ. ಪರಸ್ಪರ ಕಿತ್ತಾಡುವಂತೆ ಉತ್ತೇಜನೆ. ಇವು ಭಾರತೀಯ ಮೌಲ್ಯಗಳಿಗೆ ವ್ಯತಿರಿಕ್ತವಾಗಿದ್ದು, ಭಾರತೀಯ ಕೌಟುಂಬಿಕ ಆದರ್ಶ ಮತ್ತು ಸಂಸ್ಕೃತಿಯ ಉಲ್ಲಂಘನೆಯಾಗಿದೆ. ಜೊತೆಗೆ ಇಂಥಹಾ ಒಂದು ಅಶ್ಲೀಲ ಭಾಷೆಯ ಬಳಕೆಯ, ಆಕ್ರಮಣಕಾರಿ, ಹಿಂಸಾತ್ಮಕ ಶೋ ಕೌಟುಂಬಿಕ ಅವಧಿ (ಫ್ಯಾಮಿಲಿ ವೀವಿಂಗ್) ಅವಧಿಯಲ್ಲಿ ಪ್ರಸಾರ ಮಾಡುತ್ತಿರುವುದು ಸೂಕ್ತವಲ್ಲ ಎಂದು ದೂರುದಾರರು ಆಕ್ಷೇಪಿಸಿದ್ದಾರೆ.
ಬಿಗ್ಬಾಸ್ ಶೋ ಮೂಲಕ ಆಯೋಜಕರು ಯಾವ ಸಂದೇಶವನ್ನು ನೀಡಲು ಮುಂದಾಗಿದ್ದಾರೆ ಎಂದು ಕೇಳಬೇಕಾಗಿದೆ. ಜೊತೆಗೆ ವಿವಾದಾತ್ಮಕ ವ್ಯಕ್ತಿಗಳನ್ನೇ ಈ ಶೋಗೆ ಸ್ಪರ್ಧಿಯಾಗಿ ಕರೆದುಕೊಂಡು ಬರಲು ಕಾರಣ ಏನು? ಈ ಶೋ ಯುವಕರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ ಎಂಬೆಲ್ಲ ಪ್ರಶ್ನೆಗಳನ್ನು ಆಯೋಜಕರಿಗೆ ಕೇಳಬೇಕಾಗಿದೆ. ಈ ಶೋ ಜನರ ನೈತಿಕತೆಯನ್ನು ಹಾಳು ಮಾಡುತ್ತಿದೆ ಜೊತೆಗೆ ಪರಸ್ಪರ ದ್ವೇಷ ಮಾಡಬೇಕೆಂದು, ಕಿತ್ತಾಡ ತೋರಿಸುತ್ತಿದೆ’ ಎಂದು.
‘ಈ ಶೋ ಭಾರತೀಯ ನ್ಯಾಯ ಸಂಹಿತೆ ಹಾಗೂ ದೇಶದ ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ ಎಂಬುದು ನಮ್ಮ ನಂಬಿಕೆ ಆಗಿದ್ದು ಕೂಡಲೇ ಈ ಕಾರ್ಯಕ್ರಮ ಪ್ರಸಾರವನ್ನು ನಿಲ್ಲಿಸಬೇಕು ಹಾಗೂ ಈ ಆಯೋಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ