ಬೆಂಗಳೂರು, (ಜನವರಿ 30): ಪ್ರಸಿದ್ದ ರಿಯಲ್ ಎಸ್ಟೇಟ್ ಕಂಪನಿ ಕಾನ್ಪಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ.ರಾಯ್ (ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್) ಇಂದು (ಜನವರಿ 30) ಬೆಂಗಳೂರಿನ ಹೊಸೂರು ರಸ್ತೆಯ ಲ್ಯಾಂಗ್ ಫರ್ಡ್ ಟೌನ್ ಹೊಂದಿರುವ ಕಂಪನಿಯ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ರಾಯರ ಮನೆ, ಕಚೇರಿಗಳ ಮೇಲೆ ಐಟಿ ದಾಳಿಯಾಗಿತ್ತು. ಅದರಂತೆ ಇಂದು ಸಹ ಕಂಪನಿಯ ಮೇಲೆ ಐಟಿ ದಾಳಿ ನಡೆದಿದ್ದು, ಇದರಿಂದ ಮನನೊಂದು ಪಿಸ್ತೂಲ್ ನಿಂದಲೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಸಿಜೆ ರಾಯರ ಈ ಸಾವು ಉದ್ಯಮ ವಲಯದಲ್ಲಿ ಮುಡಿಸಿದೆ.
ಕೇರಳ ರಾಜ್ಯದಿಂದ ವಿದೇಶದವರೆಗೆ
ಮೂಲತಃ ಕೇರಳದವರಾಗಿದ್ದರೂ ಸಹ ಬೆಂಗಳೂರಿನಲ್ಲೇ ಬೆಳೆದಿದ್ದರು. ಬಳಿಕ ಸ್ವಿಜರ್ಲ್ಯಾಂಡ್ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ವ್ಯಾಸಂಗ ಮಾಡಿದ್ದರು. 2006ರಲ್ಲಿ ಅವರು ಕಾನ್ಫಿಡೆಂಟ್ ಗ್ರೂಪ್ನ ರಿಯಲ್ ಎಸ್ಟೇಟ್ ಸಮೂಹವನ್ನು ವಿಸ್ತರಿಸಲು ಪ್ರಾರಂಭಿಸಿದರು. ರಾಯ್ ಕಾನ್ಶಿಡೆಂಟ್ ಗ್ರೂಪ್ನ ಚೆರ್ಮನ್ ಆಗಿದ್ದು, ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸಿದ್ದಲ್ಲದೆ ಗಲ್ಫ್ ಮತ್ತು ಕೇರಳ, ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ನಡೆಸಿತು.
ಇದನ್ನೂ ಓದಿ: ಐಟಿ ದಾಳಿ ವೇಳೆಯೇ ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೆರ್ಮನ್ ಸಿಜೆ ರಾಯ್ ಆತ್ಮಹತ್ಯೆ
ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ
ಕಾನ್ಪಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಲೇಔಟ್, ಹೋಟೆಲ್, ರೆಸಾರ್ಟ್, ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಿ.ಜೆ.ರಾಯರ ಬಂಡವಾಳ ಹೂಡಿಕೆ ಮಾಡಿ ಯಶಸ್ವಿಯಾಗಿ ಉದ್ಯಮವನ್ನು ನಡೆಸುತ್ತಿದೆ ಸಿ.ಜೆ.ರಾಯರು ಸಾವಿರಾರು ಕೋಟಿ ಒಡೆಯ. ಜೊತೆಗೆ ಬಡವರಿಗೆ ದಾನ- ಧರ್ಮ ಸಹ ಮಾಡುವಂತೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ 201 ಎಜುಕೇಷನ್ ಸ್ಕಾಲರ್ ಶಿಪ್ ನೀಡಿದ್ದರು.
ಹತ್ತಾರು ದೊಡ್ಡ ದೊಡ್ಡ ಐಷಾರಾಮಿ ಕಾರುಗಳು
ರಾಯ್ ಅವರು ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು, ದುಬೈ ಮತ್ತು ಭಾರತದಲ್ಲಿ ದುಬಾರಿ ಐಷಾರಾಮಿ ಮತ್ತು ಸ್ಫೋರ್ಟ್ಸ್ ಕಾರುಗಳ ಸಂಗ್ರಹ ಇವರ ಬಳಿ ಇವೆ. ಬರೋಬ್ಬರಿ 12 ರೋಲ್ಸ್ ರಾಯ್ಸ್ ಕಾರ್ ಗಳನ್ನು ಹೊಂದಿದೆ. ಇನ್ನು 10 ಕೋಟಿ ರೂಪಾಯಿ ಬೆಲೆಬಾಳುವ ಫ್ಯಾಂಟನ್-8 ಕಾರನ್ನು ಸಹ ಖರೀದಿಸಿದ್ದರು. ಬದಲಿಗೆ ಕನ್ನಡ ಬಿಗ್ ಬಾಸ್ ವಿನ್ನರ್ ಗಳಿಗೆ 50 ಲಕ್ಷ ರೂಪಾಯಿ ಹಣವನ್ನು ಸಿ.ಜೆ.ರಾಯರು ಪ್ರಾಯೋಕತ್ವ ಮಾಡುತ್ತಿದ್ದರು. ಇಂತಹ ಲಕ್ಷುರಿ, ಐಷಾರಾಮಿ ಜೀವನ ನಡೆಸುತ್ತಿದ್ದ ಉದ್ಯಮಿ ಸಿ.ಜೆ.ರಾಯರು ಪದೇ ಪದೇ ಐಟಿ ದಾಳಿಯಿಂದ ನಲುಗಿ ಹೋಗಿದ್ದರು. ಇಂದು ಮತ್ತೆ ಐಟಿ ದಾಳಿ ನಡೆಸಿದ್ದರಿಂದ ಮನನೊಂದು ಈ ರೀತಿ ಮಾಡಿಕೊಂಡಿದ್ದಾರೆ.
43 ಲಕ್ಷ ಚದರಡಿಗಳ ವ್ಯವಹಾರ
.ಇನ್ನು ಇವರು ರಿಯಲ್ ಎಸ್ಟೇಟ್ ನಲ್ಲಿ ಬರೋಬ್ಬರಿ 43 ಲಕ್ಷ ಚದರ ಅಡಿ ವ್ಯವಹಾರ ಮಾಡಿದ್ದಾರೆ. 150ಕ್ಕೂ ಹೆಚ್ಚು ದೊಡ್ಡ ಪ್ರಾಜೆಕ್ಟ್ಗಳನ್ನು ಸಹ ಮಾಡಲಾಗಿದೆ. ಆದರೆ, ಗಮನಿಸಬೇಕಾದ ಅಂಶ ಇಲ್ಲಿಯವರೆಗೂ ಇವರ ನೆಟ್ವರ್ಕ್ ಎಷ್ಟಿದೆ? ಇನ್ನೂ ಇದೆ ಎನ್ನುವುದನ್ನು ಎಲ್ಲೂ ತೋರಿಸಿಕೊಂಡಿಲ್ಲ. ದೇಶದಲ್ಲಿ ವಿದೇಶದಲ್ಲಿ ಇವರ ನೆಟ್ವರ್ಕ್ ಇದೆ. ಆದರೂ ಇದನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಹೀಗೆ ದೇಶ ವಿದೇಶಗಳಿಗೆ ಚಿರಪರಿಚಿತರಾಗಿದ್ದವರು, ತಮ್ಮ ಕಾನ್ಷಿಡೆಂಟ್ ಗ್ರೂಪ್ ಯಾರನ್ನೂ ಬ್ರ್ಯಾಂಡ್ ಅಂಬಾಸಿಡರ್, ಅಥವಾ ಸೆಲೆಬ್ರಿಟಿಗಳಿಂದ ಜಾಹಿರಾತು ದೊಡ್ಡವರು ಕೊಡಿಸಿಲ್ಲ. ಬದಲಿಗೆ ರಾಯ್ ಅವರೇ ತಮ್ಮ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಏನೇ ಜಾಹಿರಾತು ನೀಡಬೇಕಿದ್ದರೂ ತಾವೇ ಅಂಬಾಸಿಡರ್ ಆಗಿದ್ದರು.
ಯುವಕರಿಗೆ ಸ್ಫೂರ್ತಿಯಾದ ಒಡೆಯ
ದೊಡ್ಡ ಕೋಟ್ಯಾಧೀಶರಾಗಿದ್ದರೂ ಸಹ ವಿಡಿಯೋ ಮೂಲಕ ಯುವ ಜನತೆಗೆ ಹೇಗೆ ಬ್ಯುಸಿನೆಸ್ ಮಾಡಬೇಕು? ಹೇಗೆ ಸಂಪಾದನೆ ಮಾಡಬೇಕು? ಎನ್ನುವುದನ್ನು ತಿಳಿಸಲು. ಜೀವನದಲ್ಲಿ ಸೋತು ಜಿಗುಪ್ಸೆಗೊಂಡವರಿಗೂ ಸಹ ತಮ್ಮ ಮೋಟಿವೇಶನ್ ಮಾತುಗಳೊಂದಿಗೆ ಮನಪರಿವರ್ತನೆ ಮಾಡಿ
ಹೀಗೆ ಕೋಟ್ಯಾಧೀಶ ಒಡೆಯನಾಗಿರುವ ವ್ಯಕ್ತಿ ಐಟಿ ಅಧಿಕಾರಿಗಳು ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ಯಾವ ಮಟ್ಟಕ್ಕೆ ಅವರಿಗೆ ಸ್ಟೆಸ್ ಅಥವಾ ಒತ್ತಡವಿದೆ ಎಂಬ ಪ್ರಶ್ನೆ ಉಳಿದಿದೆ. ಕಾನ್ಫಿಡೆಂಟ್ ಗ್ರೂಪ್ ಒಡೆಯ ಜೀವನದ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ ಎನ್ನುವುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 7:12 pm, ಶುಕ್ರ, 30 ಜನವರಿ 26