Cj Roy Death: ಕಾನ್ಫಿಡೆಂಟ್ ಗ್ರೂಪ್ ಮಾಲೀಕ, ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಅವರು ಶೂಟ್ ಮಾಡಿಕೊಂಡು ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಈ ಹಿಂದೆ ಇವರು ಪುನೀತ್ ರಾಜ್‌ಕುಮಾರ್ ಅವರಿಗೆ ಸೈಟ್ ನೀಡಿದ್ದರಂತೆ.

ಆರಂಭದಲ್ಲಿ ಕೆಲವು ಕಂಪೆನಿಗಳಲ್ಲಿ 9 To 5 ಕೆಲಸ ಮಾಡುತ್ತಿದ್ದ ಸಿಜೆ ರಾಯ್ ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಆಸಕ್ತಿ ಬೆಳೆಸಿಕೊಂಡರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅವರು ಯಶಸ್ಸು ಕಂಡು ಇಂದು ಸಾವಿರಾರು ಕೋಟಿ ರೂಪಾಯಿ ಒಡೆಯರಾಗಿದ್ದಾರೆ.

2003ರಲ್ಲಿ ಕೋರಮಂಗಲದಲ್ಲಿ ಅವರು ಒಂದು ಜಾಗವನ್ನು ಖರೀದಿ ಮಾಡಿದ್ದರು. ಮಗಳಿಗೋಸ್ಕರ ಅವರು ಈ ಜಾಗ ಖರೀದಿಸಿದ್ದರು.

ಅದೇ ಟೈಮ್‌ಗೆ ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ದಂಪತಿ ಕೂಡ ಸೈಟ್ ಖರೀದಿಸುವ ಮನಸ್ಸು ಮಾಡಿದ್ದರು. ಆಗ ಸಿಜೆ ರಾಯ್ ಅವರು ಮಗಳಿಗೋಸ್ಕರ ತಗೊಂಡಿದ್ದ ಸೈಟ್‌ನ್ನು ಪುನೀತ್‌ಗೆ ನೀಡಿದರು.

ಹೌದು, ಈ ಬಗ್ಗೆ ಸಿಜೆ ರಾಯ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, “ಪುನೀತ್ ರಾಜ್‌ಕುಮಾರ್ ಅವರು ಅದ್ಭುತವಾದ ವ್ಯಕ್ತಿ. ವ್ಯಕ್ತಿಯನ್ನು ನೋಡಿದಾಗ ಅವರೇನು ಎಂದು ಗೊತ್ತಾಗುವುದು, ನನ್ನ ಮಗಳಿಗೋಸ್ಕರ ತಗೊಂಡಿದ್ದ ಜಾಗವನ್ನು ನಾನು ಲಾಭವಿಲ್ಲದೆ ಪುನೀತ್‌ಗೆ ಕೊಟ್ಟೆ” ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಂದು ಪುನೀತ್ ರಾಜ್‌ಕುಮಾರ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋ ಹಾಗೂ ಡಾ ರಾಜ್‌ಕುಮಾರ್ ಅವರ ಕೈಯಿಂದ ಹಣ ಪಡೆದ ಘಟನೆಯನ್ನು ಕೂಡ ಸಿಜೆ ರಾಯ್ ಅವರು ಹಂಚಿಕೊಂಡಿದ್ದಾರೆ.

Source link
CJ Roy Death: ಲಾಭ ಮಾಡದೆ, ಮಗಳಿಗೋಸ್ಕರ ತಗೊಂಡ ಜಾಗವನ್ನು ಪುನೀತ್ ರಾಜ್‌ಕುಮಾರ್‌ಗೆ ಕೊಟ್ಟಿದ್ದ ಸಿಜೆ ರಾಯ್!